ನೆಲ್ಯಾಡಿ : ಜೇಸಿಐ ಆಲಂಕಾರು ಘಟಕಕ್ಕೆ ಜೇಸಿಐ ಭಾರತದ ವಲಯ 15ರ ವಲಯಾಧ್ಯಕ್ಷ ಜೇಸಿಐ ಸೆನೆಟರ್ ಅಭಿಲಾಷ್ ಬಿ.ಎ ಇವರ ಅಧಿಕೃತ ಭೇಟಿ ಕಾರ್ಯಕ್ರಮ ಆಗಸ್ಟ್ 25ರಂದು ನಡೆಯಿತು.
ಘಟಕಕ್ಕೆ ಭೇಟಿ ನೀಡಿದ ವಲಯಾಧ್ಯಕ್ಷರಿಗೆ ಆಲಂಕಾರು ಪೇಟೆಯಲ್ಲಿ ಭವ್ಯ ಸ್ವಾಗತವನ್ನು ಕೋರಲಾಯಿತು. ಕುಂತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ತೆರಳಿ ಶಾಶ್ವತ ಯೋಜನೆಯಡಿ ಘಟಕದಿಂದ ಶಾಲೆಗೆ ಕೊಡಲ್ಪಟ್ಟ ಸ್ಯಾನಿಟರಿ ಪ್ಯಾಡ್ ಬರ್ನಿಂಗ್ ಮೆಷಿನ್ ಹಸ್ತಾಂತರಿಸಲಾಯಿತು.ಜೇಸಿ ಪ್ರದೀಪ್ ಬಾಕಿಲರ ಸ್ಮರಣಾರ್ಥವಾಗಿ ಅವರ ಪತ್ನಿ ಹೇಮಲತಾ ಪ್ರದೀಪ್ ಕೊಡುಗೆಯಾಗಿ ನೀಡಿದ ,ಪೆರಾಬೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದಾರಿ ಮಧ್ಯದಲ್ಲಿರುವ ಶಾಲೆಯ ನಾಮಫಲಕವನ್ನು ಅನಾವರಣಗೊಳಿಸಲಾಯಿತು.
ವಲಯಾಧ್ಯಕ್ಷರ ಅಧಿಕೃತ ಭೇಟಿ ಕಾರ್ಯಕ್ರಮ ಪ್ರಯುಕ್ತ ಸಂಜೆ ಆಲಂಕಾರಿನ ಸಿ.ಎ ಬ್ಯಾಂಕಿನ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿಐ ಆಲಂಕಾರು ಘಟಕದ ಅಧ್ಯಕ್ಷ ಜೇಸಿ ಗುರುರಾಜ್ ರೈ ವಹಿಸಿದ್ದರು.ಕಾರ್ಯಕ್ರಮದ ಮುಖ್ಯ ಅತಿಥಿ ವಲಯಾಧ್ಯಕ್ಷ ಜೇಸಿಐ ಸೆನೆಟರ್ ಅಭಿಲಾಷ್ ಬಿ.ಎ ಮಾತನಾಡಿ ,ಘಟಕದಲ್ಲಿ ನಡೆಸಲಾದ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.ಸಮಾಜಕ್ಕೆ ಉಪಯೋಗವಾಗುವ ಹಲವಾರು ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಜೇಸಿಐ ಆಲಂಕಾರು ಘಟಕವು ವಲಯದ ಅತ್ಯುತ್ತಮ ಘಟಕಗಳಲ್ಲೊಂದಾಗಿ ಮೂಡಿ ಬಂದಿರುವುದಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು.

ಘಟಕದ ಕಾರ್ಯದರ್ಶಿ ಜೇಸಿ ಮಹೇಶ್ ಪಾಟಾಳಿ ಘಟಕದಲ್ಲಿ ಇದುವರೆಗೆ ನಡೆಸಲಾದ ಕಾರ್ಯಕ್ರಮಗಳ ವರದಿಯನ್ನು ವಾಚಿಸಿ ವಲಯಾಧ್ಯಕ್ಷರಿಗೆ ಹಸ್ತಾಂತರಿಸಿದರು.ವಲಯಾಧ್ಯಕ್ಷರ ಆಪ್ತ ಕಾರ್ಯದರ್ಶಿ ಜೇಸಿಐ ಸೆನೆಟರ್ ರಾಘವೇಂದ್ರ ಕುಲಾಲ್ ಸಂದರ್ಭೋಚಿತವಾಗಿ ಮಾತನಾಡಿದರು.ವೇದಿಕೆಯಲ್ಲಿ ವಲಯ 15ರ ವಲಯ ಉಪಾಧ್ಯಕ್ಷ ಜೇಸಿ ಸಂತೋಷ್ ಕುಮಾರ್ ಶೆಟ್ಟಿ,ಮ್ಯಾನೇಜ್ಮೆಂಟ್ ವಿಭಾಗದ ನಿರ್ದೇಶಕ ಜೇಸಿ ಅಜಿತ್ ಕುಮಾರ್ ರೈ,ವಲಯಾಧಿಕಾರಿ ಜೇಸಿ ವಿನಿತ್ ಶಗ್ರಿತ್ತಾಯ, ನಿಕಟ ಪೂರ್ವಾಧ್ಯಕ್ಷೆ ಜೇಸಿ ಮಮತಾ ಅಂಬರಾಜೆ,ಕಾರ್ಯಕ್ರಮ ನಿರ್ದೇಶಕ ಜೇಸಿ ಪುರಂದರ ಹಾಗೂ ಮಹಿಳಾ ಜೇಸಿ ಅಧ್ಯಕ್ಷೆ ಸುನೀತಾ ಜಿ ರೈ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಆಲಂಕಾರು ಜೇಸಿಐ ಘಟಕದ ಸ್ಥಾಪಕ ಜೇಸಿ ಪ್ರಶಾಂತ್ ರೈ,ಪೂರ್ವಾಧ್ಯಕ್ಷರುಗಳು ಹಾಗೂ ಜೇಸಿ ಸದಸ್ಯರು ಉಪಸ್ಥಿತರಿದ್ದರು.ಜೇಸಿ ಪ್ರದೀಪ್ ರೈ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿ,ಜೇಸಿ ಗುರುಪ್ರಸಾದ್ ರೈ ಜೇಸಿವಾಣಿ ವಾಚಿಸಿದರು.ಜೇಸಿ ಲತನ್ ವಲಯಾಧ್ಯಕ್ಷರನ್ನು ಪರಿಚಯಿಸಿದರು.ಅಧ್ಯಕ್ಷ ಜೇಸಿ ಗುರುರಾಜ್ ರೈ ಸ್ವಾಗತಿಸಿ,ಕಾರ್ಯದರ್ಶಿ ಜೇಸಿ ಮಹೇಶ್ ಪಾಟಾಳಿ ವಂದಿಸಿದರು.