ಪುತ್ತೂರು: ಕಲ್ಲಾರೆಯ ಮುಖ್ಯರಸ್ತೆಯಲ್ಲಿ ಅಳವಡಿಸಿರುವ ಇಂಟರ್ ಲಾಕ್ ರಸ್ತೆಯಲ್ಲಿ ಬಸ್ ವೊಂದರಿಂದ ಸೋರಿಕೆಯಾದ ತೈಲದಿಂದಾಗಿ ದ್ವಿಚಕ್ರ ವಾಹನಗಳಿಗೆ ಸಮಸ್ಯೆ ಎದುರಾಗಿದೆ.
ಆ.29 ರಂದು ಹಲವಾರು ದ್ವಿಚಕ್ರ ವಾಹನಗಳು ಸ್ಕಿಡ್ ಆಗಿದೆ. ಘಟನೆಯನ್ನು ಗಂಭಿರವಾಗಿ ಪರಗಣಿಸಿದ ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಫಾಮ್ ಲಿಕ್ವಿಡ್ ಬಳಸಿ ನೀರು ಹಾಯಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.