ಪುತ್ತೂರು: ಕೆಮ್ಮಾಯಿ-ಬೀರ್‍ನಹಿತ್ಲು ಜಿಲ್ಲಾ ಪಂಚಾಯತ್ ರಸ್ತೆ ಮುಡಾಯೂರು ಬಳಿ ವಸತಿ ಸಮುಚ್ಛಯಗಳ ನಿರ್ಮಾಣವಾಗಿದ್ದರೂ ಮುಖ್ಯರಸ್ತೆಗೆ ಚರಂಡಿ ಇಲ್ಲದೆ ಸಾರ್ವಜನಿಕ ಸಂಚಾರ ಸಮಸ್ಯೆ ಉಂಟಾಗಿರುವ ಬಗ್ಗೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ದ.ಕ. ಜಿಲ್ಲಾ ಪಂಚಾಯತ್ ಇವರಿಗೆ ಚಿಕ್ಕ ಮುಡ್ನೂರು ಕಲಿಯುಗ ಸೇವಾ ಸಮಿತಿ ವತಿಯಿಂದ ದೂರು ನೀಡಲಾಗಿದೆ.
ಲೇಔಟ್‌ಗಳ ನಿರ್ಮಾಣ ಸಂದರ್ಭ ರಸ್ತೆಗೆ ಚರಂಡಿ ನಿರ್ಮಾಣದ ನಿಯಮಾವಳಿಗಳು ಇಲ್ಲಿ ಪಾಲನೆಯಾದಂತೆ ಕಂಡು ಬರುವುದಿಲ್ಲ. ಪಂಚಾಯತ್‌ಗಳು ಮನೆ ಕಟ್ಟುವಾಗ, ಪರವಾನಿಗೆ ನೀಡುವಾಗ ಈ ಕುರಿತು ಗಮನಹರಿಸದಂತೆ ಕಂಡು ಬರುತ್ತದೆ. ಜಿಲ್ಲಾ ಪಂಚಾಯತ್ ರಸ್ತೆಯಾದರೂ ಇದನ್ನು ಕೇಳುವವರು ಇಲ್ಲದಂತೆ ಆಗಿದೆ. ರಸ್ತೆಯಲ್ಲಿ ಮಳೆ ನೀರು ಕೆಸರು ನಿಂತು ಜನರಿಗೆ ಸಂಚಾರ ಸಮಸ್ಯೆ ಅಲ್ಲದೆ ರಸ್ತೆ ಕೆಟ್ಟುಹೋಗುತ್ತಿದ್ದು ಸಂಬಂಧ ಪಟ್ಟವರು ಸೂಕ್ತ ಕ್ರಮ ವಹಿಸುವಂತೆ ಮನವಿಯಲ್ಲಿ ಕೇಳಿಕೊಳ್ಳಲಾಗಿದೆ.