ಪುತ್ತೂರು: ಶಿಕ್ಷಕ ವೃತ್ತಿಯಲ್ಲಿ ವಿವಿಧ ಕಡೆ ಸುಮಾರು 35 ವರ್ಷಗಳ ಕಾಲ ಶಿಕ್ಷಕಿ ವೃತ್ತಿ ನಿರ್ವಹಿಸಿರುವ ಉಪ್ಪಿನಂಗಡಿ ಪುಳಿತ್ತಡಿ ಮಠ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಜ್ಯುಲಿಯಾನ ವಾಸ್ ರವರು ಆ.31 ರಂದು ಸೇವಾ ನಿವೃತ್ತಿ ಹೊಂದಿದ್ದಾರೆ.
ಪಿಯುಸಿ, ಟಿಸಿಎಚ್ ಶಿಕ್ಷಣದೊಂದಿಗೆ ಬಿ.ಎ ಪದವೀಧರರಾಗಿರುವ ಜ್ಯುಲಿಯಾನ ವಾಸ್ ರವರು 1990 ರಲ್ಲಿ ಕಡಂಬು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ವೃತ್ತಿಯನ್ನು ಆರಂಭಿಸಿ ಬಳಿಕ ಕಂಬಳಬೆಟ್ಟು, ಕಬಕ, ಕೆಮ್ಮಾಯಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ ಉಪ್ಪಿನಂಗಡಿ ಪುಳಿತ್ತಡಿ ಮಠ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಆಗಮಿಸಿ ನಿವೃತ್ತರಾಗಿರುವರು.
ನಿವೃತ್ತಿಗೊಂಡ ಶ್ರೀಮತಿ ಜ್ಯುಲಿಯಾನ ವಾಸ್ ರವರು ಪತಿ, ಕೋರ್ಟ್ ರಸ್ತೆ ಎ.ಆರ್ ಡಿ’ಸೋಜ ಆಂಡ್ ಕಂಪೆನಿ ಉದ್ಯೋಗಿ ವಿಲಿಯಂ ಗೊನ್ಸಾಲ್ವಿಸ್, ಪುತ್ರ ಹಾಗೂ ಸೊಸೆ ದುಬೈಯಲ್ಲಿನ ಕಾರ್ಗೋ ಕಂಪೆನಿಯ ಉದ್ಯೋಗಿಯಾಗಿರುವ ಜೇಸನ್ ಗೊನ್ಸಾಲ್ವಿಸ್ ಹಾಗೂ ನಿಶ್ಮಿತಾ ಗೊನ್ಸಾಲ್ವಿಸ್, ಪುತ್ರಿ ಜಾನೆಟ್ ಗೊನ್ಸಾಲ್ವಿಸ್, ಮೊಮ್ಮಗಳು ಲಿಯಾನ್ನ ಗೊನ್ಸಾಲ್ವಿಸ್ ರವರೊಂದಿಗೆ ಬನ್ನೂರು ಆನೆಮಜಲು ಎಂಬಲ್ಲಿ ವಾಸ್ತವ್ಯ ಹೊಂದಿದ್ದಾರೆ.