ಸಂಪ್ಯ: ಕಾಲೇಜಿನ ಬೈಟ್-ಬ್ಲಿಟ್ಜ್ ಐಟಿ ಕ್ಲಬ್ ಮತ್ತು ಐಕ್ಯೂಎಸಿ ಯಿಂದ ಜಂಟಿಯಾಗಿ ಆಯೋಜಿಸಲ್ಪಟ್ಟ “ಬ್ರಿಡ್ಜಿಂಗ್ ದಿ ಗ್ಯಾಪ್ – ತಾಂತ್ರಿಕ ಜ್ಞಾನದಿಂದ ಶಕ್ತಿಶಾಲಿ ಸಂವಹನಕ್ಕೆ ಸೇತುವೆ” ಎಂಬ ವಿಚಾರಸಂಕಿರಣವನ್ನು ಅಕ್ಷಯ ಕಾಲೇಜು, ಪುತ್ತೂರಿನಲ್ಲಿ ಆ.22ರಂದು ಆಯೋಜಿಸಲಾಯಿತು.
ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಡಾ. ಮೀರಾ ಎ. ರಾವ್, DTM, ಡಿವಿಷನ್ ಡೈರೆಕ್ಟರ್, ಡಿವಿಷನ್ F, ಜಿಲ್ಲೆ 121 ಇವರು ಆಗಮಿಸಿದ್ದರು. ಅವರು ‘ತಾಂತ್ರಿಕ ಜ್ಞಾನದಿಂದ ಶಕ್ತಿಶಾಲಿ ಸಂವಹನಕ್ಕೆ’ ಎಂಬ ವಿಷಯವನ್ನು ವಿವರಿಸುತ್ತಾ, “ತಂತ್ರಜ್ಞಾನದ ಭಾಷೆಯನ್ನು ಸಾಮಾನ್ಯ ಮಾನವನ ಭಾಷೆಗೆ ಭಾಷಾಂತರಿಸುವುದು ಹಿಂದಿನಿಂದಲೂ ಒಂದು ದೊಡ್ಡ ಅಗತ್ಯವಾಗಿದೆ. ನೀವು ಹೊಂದಿರುವ ಜ್ಞಾನವನ್ನು ನಿಮ್ಮ ಗ್ರಾಹಕ, ಸಹೋದ್ಯೋಗಿ ಅಥವಾ ಒಬ್ಬ ಸಾಮಾನ್ಯ ವ್ಯಕ್ತಿ ಅರ್ಥಮಾಡಿಕೊಳ್ಳುವಂತೆ ಮಾಡುವುದೇ ನಿಜವಾದ ಸಂವಹನ ಕಲೆ. ಇದರಿಂದ ಮಾತ್ರ ನಿಮ್ಮ ತಾಂತ್ರಿಕ ಪರಿಜ್ಞಾನಕ್ಕೆ ಮೌಲ್ಯ ಲಭಿಸುತ್ತದೆ” ಎಂದು ವಿವರಿಸಿದರು.

ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಡಾ. ಭಾರತಿ ಶೆಟ್ಟಿ, ಗೈನಕಾಲಜಿಸ್ಟ್ & ಏರಿಯಾ F03 ಡೈರೆಕ್ಟರ್ ಡಿಸ್ಟ್ರಿಕ್ಟ್ 121, ಅವರು ನಡೆಸಿದ ಪ್ರಾಯೋಗಿಕ ಚಟುವಟಿಕೆಗಳು ಕಾರ್ಯಕ್ರಮದ ಮಹತ್ವದ ಭಾಗವಾಗಿತ್ತು. ವಿದ್ಯಾರ್ಥಿಗಳಿಗೆ ‘ಟೆಕ್ನಿಕಲ್ ಪ್ರೆಸೆಂಟೇಷನ್’ ಮತ್ತು ‘ಗ್ರೂಪ್ ಡಿಸ್ಕಷನ್’ ನಂತಹ ಚಟುವಟಿಕೆಗಳ ಮೂಲಕ ನೇರವಾಗಿ ಭಾಗವಹಿಸಿ ಕಲಿಯುವ ಅವಕಾಶ ಕಲ್ಪಿಸಿದರು. ತಮ್ಮ ಮಾತಿನಲ್ಲಿ, “ಸಿದ್ಧಾಂತವನ್ನು ಕೇವಲ ಕೇಳುವುದರಿಂದ ಬರದು, ಅದನ್ನು ಪ್ರಾಯೋಗಿಕವಾಗಿ ಅನುಭವಿಸಿದಾಗ ಮಾತ್ರ ಅದು ನಮ್ಮದಾಗುತ್ತದೆ. ಈ ಚಟುವಟಿಕೆಗಳು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿ, ನಿಮ್ಮ ಚಿಂತನೆಯನ್ನು ಸ್ಪಷ್ಟವಾಗಿ ವ್ಯಕ್ತಪಡಿಸಲು ಸಹಾಯ ಮಾಡುತ್ತದೆ” ಎಂದು ಅವರು ಹೇಳಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಸ್ಥೆಯ ಸಂಚಾಲಕರಾದ ಜಯಂತ ನಡುಬೈಲು,’ಇಂದಿನ ಜಾಗತಿಕ ಸವಾಲುಗಳನ್ನು ಎದುರಿಸಲು ತಾಂತ್ರಿಕ ಪಾಂಡಿತ್ಯ ಮತ್ತು ಸಂವಹನ ಕೌಶಲ್ಯ ಇವೆರಡರೂ ಸಮಾನ ಪ್ರಾಮುಖ್ಯತೆ ಹೊಂದಿವೆ. ಈ ಎರಡು ಶಕ್ತಿಗಳನ್ನು ಒಂದುಗೂಡಿಸುವ ವಿದ್ಯಾರ್ಥಿಗಳು ಮಾತ್ರ ಭವಿಷ್ಯದ ನಾಯಕತ್ವವನ್ನು ವಹಿಸಬಲ್ಲರು’ ಎಂದು ಹೇಳಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ವಸುಮತಿ ಶೆಟ್ಟಿ, ಚೀಫ್ ಸ್ಟ್ರಾಟಜೀ ಆಫೀಸರ್, ನಿಯೋ ಇನೋವೇಶನ್ & ಸ್ಕಿಲ್ಸ್ ಪ್ರೈವೇಟ್ ಲಿಮಿಟೆಡ್, ಬೆಂಗಳೂರು, ಸಂಪತ್ ಕೆ ಪಕ್ಕಳ, ಪ್ರಾಂಶುಪಾಲರು, ಅರ್ಪಿತ್ ಟಿ ಎ, ಆಡಳಿತಾಧಿಕಾರಿ, ರಶ್ಮಿ ಕೆ, ಐಕ್ಯೂಎಸಿ ಸಂಯೋಜಕರು, ಮತ್ತು ದೀಕ್ಷಾ ರೈ, ಮುಖ್ಯಸ್ಥರು, ಕಂಪ್ಯೂಟರ್ ಸೈನ್ಸ್ ವಿಭಾಗ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕು. ಲಾವಣ್ಯ, ದ್ವಿತೀಯ ಬಿಸಿಎ ಪ್ರಾರ್ಥಿಸಿ, ಕು. ಸೌಜನ್ಯ ಹೆಚ್, ಬೈಟ್-ಬ್ಲಿಟ್ಜ್ ಐಟಿ ಕ್ಲಬ್ ಸಂಯೋಜಕರು ಸ್ವಾಗತಿಸಿದರು. ಪ್ರತಿತಾ ಡಿ, ಉಪನ್ಯಾಸಕರು, ಕಂಪ್ಯೂಟರ್ ಸೈನ್ಸ್ ವಿಭಾಗ, ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು. ಕಾರ್ಯಕ್ರಮವನ್ನು ಕಾರ್ತಿಕ್ ಪಿ ರೈ, ಬೈಟ್-ಬ್ಲಿಟ್ಜ್ ಐಟಿ ಕ್ಲಬ್ ವಿದ್ಯಾರ್ಥಿ ಸಂಯೋಜಕರು ವಂದಿಸಿ, ಕು. ಅಫೀಜ ನಿರೂಪಿಸಿದರು.