ಪುತ್ತೂರು: ಬೆಂಗಳೂರಿನಲ್ಲಿ 4 ದಿನಗಳ ಕಾಲ ನಡೆದ ದಕ್ಷಿಣ ಭಾರತದ ಅತೀ ಕ್ಲಿಷ್ಟಕರ ಬೈಕ್ ರ್‍ಯಾಲಿ ದಕ್ಷಿಣ್ ಡೇರ್ ಬೈಕ್ ರ್‍ಯಾಲಿಯ ರಾಯಲ್ ಎನ್‌ಫೀಲ್ಡ್ ವಿಭಾಗದಲ್ಲಿ ಬೊಳುವಾರು ಏಸ್ ಮೊಬೈಕ್ಸ್‌ನ ಮ್ಹಾಲಕ ಆಕಾಶ್ ಐತ್ತಾಳ್ ರನ್ನರ್ ಅಪ್ ಆಗಿ ಹೊರ ಹೊಮ್ಮಿದ್ದಾರೆ.

ಬೈಕ್ ರ್‍ಯಾಲಿಯು ಆ.28ರಂದು ಬೆಂಗಳೂರಿನ ಬಾಗೆಪಳ್ಳಿಯಿಂದ ಪ್ರಾರಂಭಗೊಂಡಿತು. ರಾಯಲ್ ಎನ್‌ಫೀಲ್ಡ್‌ನ ಹಿಮಾಲಯ 450ಸಿಸಿ ಬೈಕ್ ವಿಭಾಗದಲ್ಲಿ ಸ್ಪರ್ಧಿಸಿದ್ದ ಆಕಾಶ್ ಐತಾಳ್ ಸುಮಾರು 1250 ಕಿ.ಮೀ ದೂರದ ರ್‍ಯಾಲಿಯು ಆಂದ್ರಪ್ರದೇಶ ಗಡಿ ಭಾಗದ ಅನಂತಪುರದ ಗುಡ್ಡಗಾಡು ಪ್ರದೇಶದಲ್ಲಿ ಕಲ್ಲು ಬಂಡೆಗಳಿಂದ ಕೂಡಿದ ರಸ್ತೆಯಲ್ಲಿ ಸಂಚರಿಸಿ ಆ.31ರ ತನಕ ನಡೆಯಿತು. ಈ ರ್‍ಯಾಲಿಯಲ್ಲಿ ದೆಹಲಿ, ಕೇರಳ, ಹಿಮಾಚಲ ಪ್ರದೇಶ ಸೇರಿದಂತೆ ದೇಶದ ಹಲವು ರಾಜ್ಯಗಳಿಂದ ಸುಮಾರು 50ಕ್ಕೂ ಅಧಿಕ ರೈಡರ್‌ಗಳು ಭಾಗವಹಿಸಿದ್ದರು. ಬೈಕ್‌ನಲ್ಲಿ ಉಂಟಾದ ತಾಂತ್ರಿಕ ತೊಂದರೆಯಿಂದ ಉಂಟಾದ ಸ್ವಲ್ಪ ಹಿನ್ನಡೆಯಿಂದಾಗಿ ದ್ವಿತೀಯ ಸ್ಥಾನಿಯಾಗಿರುವುದಾಗಿ ಆಕಾಶ್ ಐತಾಳ್ ತಿಳಿಸಿದ್ದಾರೆ.
ಕೊಯಂತ್ತೂರು, ಮಹಾರಾಷ್ಟ್ರ, ಗೋವಾ, ಚಂಡೀಗಡ ಸೇರಿದಂತ ಹಲವು ಕಡೆಗಳಲ್ಲಿ ಈ ಹಿಂದೆ ನಡೆದ ಹಲವು ನ್ಯಾಷನಲ್ ಚಾಂಪಿಯನ್ ಶಿಪ್ ಬೈಕ್ ರ್‍ಯಾಲಿ, ನ್ಯಾಷನಲ್ ಸ್ಪ್ರಿಂಟ್ ರ್‍ಯಾಲಿಯಲ್ಲಿ ಚಾಂಪಿಯನ್, ರನ್ನರ್ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದರು. ಬೆಂಗಳೂರು- ಚಿತ್ರದುರ್ಗಾದ ಮಧ್ಯೆಯ 1250 ಕಿ.ಮೀ ದೂರದ ದಕ್ಷಿಣ್ ಡೇರ್ ಚಾಂಪಿಯನ್ ಶಿಪ್ ಬೈಕ್ ರ್‍ಯಾಲಿಯ 400ಸಿಸಿ ವಿಭಾಗದಲ್ಲಿ ಚಾಂಪಿಯನ್ ಆಗಿದ್ದರು. ಅಲ್ಲದೆ ಚಿಕ್ಕಮಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಕಾರ್ ರೇಸ್‌ನಲ್ಲಿ ತೃತೀಯ ಸ್ಥಾನಿಯಾಗಿದ್ದರು.