ಪುತ್ತೂರು: ಬಜತ್ತೂರು ಗ್ರಾಮದ ಪ್ರಗತಿಪರ ಕೃಷಿಕ, ಹಿರಿಯ ಮೂರ್ತೆದಾರರಾದ ಮೇಲೂರು ನಾಣ್ಯಪ್ಪ ಪೂಜಾರಿ(82 ವ.)ರವರು ಅಲ್ಪಕಾಲದ ಅನಾರೋಗ್ಯದಿಂದ ತಮ್ಮ ನಿವಾಸದಲ್ಲಿ ನಿಧನರಾದರು.
ಪ್ರಗತಿಪರ ಕೃಷಿಕರಾಗಿರುವ ಇವರು, ಹಲವಾರು ವರ್ಷಗಳಿಂದ ಮೂರ್ತೆದಾರಿಕೆ ಮಾಡುತ್ತಿದ್ದರು. ಅಲಂಕಾರು ಮೂರ್ತೆದಾರರ ಸಹಕಾರ ಸಂಘದ ಮಾಜಿ ನಿರ್ದೇಶಕರು ಆಗಿದ್ದ ಇವರು, ಸರಳ ಸಜ್ಜನಿಕೆ, ಸಮಾಜದಲ್ಲಿ ಎಲ್ಲರ ಪ್ರೀತಿ ಪಾತ್ರ ಗಳಿಸಿ ಮಾದರಿ ಜೀವನ ನಡೆಸಿದ್ದರು.
ಮೃತರ ಮನೆಗೆ ಗ್ರಾಮ ಪಂಚಾಯತ್ ಸದಸ್ಯರಾದ ಗಂಗಾಧರ ಮೇಲೂರು, ಯುವವಾಹಿನಿ ಕೇಂದ್ರ ಸಮಿತಿ, ಮಂಗಳೂರು ಇದರ ಉಪಾಧ್ಯಕ್ಷ ಅಶೋಕ್ ಕುಮಾರ್ ಪಡ್ಪು, ಉಪ್ಪಿನಂಗಡಿ ಮೂರ್ತೆದಾರರ ಸೇವಾ ಸಹಕಾರ ಸಂಘದ ಮಾಜಿ ಅಧ್ಯಕ್ಷ ದೇವಪ್ಪ ಪೂಜಾರಿ ಪಡ್ಪು, ಅಲಂಕಾರು ಮೂರ್ತೆದಾರರ ಸಹಕಾರ ಸಂಘದ ಅಧ್ಯಕ್ಷ ಮುತ್ತಪ್ಪ ಪೂಜಾರಿ ನೈಯಲ್ಗ, ಉಪಾಧ್ಯಕ್ಷ ಜನಾರ್ದನ ಕದ್ರ, ಪುತ್ತೂರು ತಾಲೂಕು ಬಿಲ್ಲವ ಸಂಘದ ಜೊತೆ ಕಾರ್ಯದರ್ಶಿ ಪುರುಷೋತ್ತಮ ಬರೇಂಬೆಟ್ಟು, ಉಪ್ಪಿನಂಗಡಿ ಯುವವಾಹಿನಿ ಘಟಕದ ನಿರ್ದೇಶಕ ರಮೇಶ್ ಸಾಂತ್ಯ, ಹಿರೇಬಂಡಾಡಿ ಬಿಲ್ಲವ ಗ್ರಾಮ ಸಮಿತಿ ಉಪಾಧ್ಯಕ್ಷ ಚಂದ್ರಶೇಖರ, ಮಾಜಿ ಅಧ್ಯಕ್ಷ ನವೀನ್ ಪಡ್ಪು , ಪ್ರಮುಖರಾದ ಸಾಂತಪ್ಪ ಗೌಡ ಮೇಲೂರು, ನಾರಾಯಣ ಪೂಜಾರಿ ಡೆಂಬಳೆ, ಆನಂದ ಕೆ ಎಸ್ ಮೇಲೂರು, ಪ್ರಶಾಂತ್ ರೈ ಆರಂರಬೈಲು, ವೀರೇಂದ್ರ ಜೈನ್, ರಂಜಿತ್ ಜೈನ್ ಮೇಲೂರು, ನಾರಾಯಣ ಶೆಟ್ಟಿ ಮೇಲೂರು, ವಿನಾಯಕ ಗೆಳೆಯರ ಬಳಗದ ಸರ್ವ ಸದಸ್ಯರು, ಸುಧಾಕರ ಪಡ್ಪು, ರಾಜೇಶ್ ಪಡ್ಪು, ಮಾಧವ, ಜಯಂತ, ರೋಹಿನಾಥ ಕಾರೆದಕೋಡಿ ಮತ್ತಿತರ ಅನೇಕ ಗಣ್ಯರು, ಹಿತೈಷಿಗಳು, ಬಂಧು ಮಿತ್ರರು ಮೃತರ ಮನೆಗೆ ಆಗಮಿಸಿ ಅಂತಿಮ ನಮನ ಸಲ್ಲಿಸಿದರು.
ಮೃತರು ಪತ್ನಿ ಉಮಾವತಿ, ಮಕ್ಕಳಾದ ಲೀಲಾವತಿ, ವಸಂತಿ, ದಿನೇಶ್, ಯಶೋಧರ, ರೇಖಾ, ಲೋಕೇಶ್ ಮತ್ತು ಚಿದಾನಂದ ಹಾಗೂ ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು, ಹಾಗೂ ಅನೇಕ ಬಂಧು ಮಿತ್ರರನ್ನು ಅಗಲಿದ್ದಾರೆ.