ಪುತ್ತೂರು: ಬಂಟರ ಯಾನೆ ನಾಡವರ ಮಾತೃ ಸಂಘ ಪುತ್ತೂರು ತಾಲೂಕು ಸಮಿತಿ, ಬಂಟರ ಸಂಘ ಇದರ ವತಿಯಿಂದ ಕೇಮಾರ ಶ್ರೀ ಶ್ರೀಈಶ ವಿಠಲ ದಾಸ ಸ್ವಾಮೀಜಿ ಯವರಿಗೆ ಬಂಟರ ಚಾವಡಿ ತಮ್ಮನ ನೀಡಿ ಗೌರವಿಸಲಾಯಿತು.
ಶಾಸಕ ಅಶೋಕ್ ಕುಮಾರ್ ರೈ ರವರ ಹುಟ್ಟು ಹಬ್ಬ ಸಮಾರಂಭದ ವಿಶೇಷ ಅತಿಥಿಯಾಗಿದ್ದ ಶ್ರೀಗಳು ಪುತ್ತೂರು ಬಂಟರ ಭವನಕ್ಕೆ ಆಗಮಿಸಿದರು. ಶ್ರೀ ಗಳಿಗೆ ತಾಲೂಕು ಸಮಿತಿಯ ನಿರ್ದೇಶಕ, ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ಮನವಳಿಕೆ ಗೌರವ ಸಲ್ಲಿಸಿದರು. ಬಂಟರ ಸಂಘದ ಕೋಶಾಧಿಕಾರಿ ಸಂತೋಷ್ ಶೆಟ್ಟಿ, ನಿರ್ದೇಶಕ ರವಿಪ್ರಸಾದ್ ಶೆಟ್ಟಿ ಬನ್ನೂರು, ಬಂಟರ ಸಂಘದ ಕಚೇರಿ ವ್ಯವಸ್ಥಾಪಕಿ ರಂಜಿನಿ ಶೆಟ್ಟಿ, ಬಂಟರ ಭವನದ ವ್ಯವಸ್ಥಾಪಕ ರವಿಚಂದ್ರ ರೈ ಕುಂಬ್ರ ಉಪಸ್ಥಿತರಿದ್ದರು.