ಪುತ್ತೂರು: ಆಟೋ ರಿಕ್ಷಾ ಹಾಗೂ ಸ್ಕೂಟರ್ ನಡುವೆ ಡಿಕ್ಕಿ ಸಂಭವಿಸಿ ಸ್ಕೂಟರ್ ಸವಾರರು ಹಾಗೂ ಆಟೋ ರಿಕ್ಷಾದಲ್ಲಿದ್ದ ಪ್ರಯಾಣಿಕರೋರ್ವರು ಗಾಯಗೊಂಡಿರುವ ಘಟನೆ ಸೆ.2ರಂದು ಸಂಜೆ ಉಪ್ಪಿನಂಗಡಿ ಗ್ರಾಮದ ದಡ್ಡು ಎಂಬಲ್ಲಿ ನಡೆದಿದೆ.
ಪೆರಿಯಡ್ಕದಿಂದ ಉಪ್ಪಿನಂಗಡಿಗೆ ಅಬ್ದುಲ್ ಹಮೀದ್ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಆಟೋ ರಿಕ್ಷಾ (ಕೆಎ21, ಸಿ1471) ಹಾಗೂ ಉಪ್ಪಿನಂಗಡಿಯಿಂದ ಸುಬ್ರಹ್ಮಣ್ಯ ಕ್ರಾಸ್ ಕಡೆಗೆ ಥೋಮಸ್ ಕುಟ್ಟಿ ಎಂಬವರು ಚಲಾಯಿಸಿಕೊಂಡು ಹೋಗುತ್ತಿದ್ದ ಸ್ಕೂಟರ್ (ಕೆಎ 21, ಇಸಿ 9576)ನಡುವೆ ಉಪ್ಪಿನಂಗಡಿ ಗ್ರಾಮದ ದಡ್ಡು ಎಂಬಲ್ಲಿ ಏಕಮುಖ ರಸ್ತೆಯಲ್ಲಿ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಶಕುಂತಳಾ, ಸ್ಕೂಟರ್ ಸವಾರ ಥೋಮಸ್ ಕುಟ್ಟಿ ಹಾಗೂ ಸಹ ಸವಾರ ಅಜಿತ್ ಎಂಬವರು ಗಾಯಗೊಂಡಿದ್ದಾರೆ. ಆಟೋ ರಿಕ್ಷಾ ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಘಟನೆ ಕುರಿತು ರಿಕ್ಷಾ ಚಾಲಕ ಪೆರಿಯಡ್ಕ ನಿವಾಸಿ ಅಬ್ದುಲ್ ಹಮೀದ್ ನೀಡಿದ ದೂರಿನಂತೆ ಪುತ್ತೂರು ಸಂಚಾರ ಠಾಣೆಯಲ್ಲಿ ಕೇಸು ದಾಖಲಾಗಿದೆ.