ಪುತ್ತೂರು: ಆ.30ರಂದು ಕಲ್ಲಡ್ಕ ಶ್ರೀರಾಮ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ವಿದ್ಯಾ ಭಾರತಿ ಜಿಲ್ಲಾ ಮಟ್ಟದ ಜ್ಞಾನ, ವಿಜ್ಞಾನ ಮೇಳದಲ್ಲಿ 8ನೇ ತರಗತಿಯ ಅಭಿನವರಾಜ್ ಕಥಾಕಥನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, 8ನೇ ತರಗತಿಯ ಪಿ. ಯಂ ಹೃಷಿಕೇಶ್ ವಿಜ್ಞಾನ ಮಾದರಿಯಲ್ಲಿ ಪ್ರಥಮ ಸ್ಥಾನ ಹಾಗೂ ಹತ್ತನೇ ತರಗತಿಯ ಸಿಂಚನ ಯಸ್ ಯನ್ ವಿಜ್ಞಾನ ಮಾದರಿಯಲ್ಲಿ ಪ್ರಥಮ ಸ್ಥಾನ ಪಡೆದು ಸೆಪ್ಟೆಂಬರ್ 5ರಂದು ಮೈಸೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಸ್ಪರ್ಧೆ ಆಯ್ಕೆಯಾಗಿರುತ್ತಾರೆ.
ಹತ್ತನೇ ತರಗತಿ ಶಾವ್ಯ ಯು ರೈ ವಿಜ್ಞಾನ ಮಾದರಿಯಲ್ಲಿ ದ್ವಿತೀಯ ಸ್ಥಾನ, ರಿಧಿ ರೈ ಗಣಿತ ಮಾದರಿಯಲ್ಲಿ ತೃತೀಯ ಸ್ಥಾನ ಮತ್ತು ಸಿಂಚನ್ ಎ ಮೂರ್ತಿಕಲೆಯಲ್ಲಿ ತೃತೀಯ, 6ನೇ ತರಗತಿ ಇಹಾನಿ ಯಸ್ ಶೆಟ್ಟಿ ವಿಜ್ಞಾನ ಮಾದರಿಯಲ್ಲಿ ತೃತೀಯ ಸ್ಥಾನ ಪಡೆದುಕೊಂಡಿರುತ್ತಾರೆ.