ಸವಣೂರು ಆರೇಲ್ತಡಿ ಸ.ಕಿ.ಪ್ರಾ.ಶಾಲಾ ಮುಖ್ಯಶಿಕ್ಷಕ ಜಗನ್ನಾಥ್ ಎಸ್ ಅವರಿಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ

0

ಸವಣೂರು: ಈ ಬಾರಿಯ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಕಿ.ಪ್ರಾ.ಶಾಲಾ ವಿಭಾಗದಿಂದ ಸವಣೂರು ಗ್ರಾಮದ ಆರೇಲ್ತಡಿ ಸ.ಕಿ.ಪ್ರಾ.ಶಾಲೆಯ ಮುಖ್ಯಗುರು ಜಗನ್ನಾಥ ಎಸ್ ಅವರು ಆಯ್ಕೆಯಾಗಿದ್ದಾರೆ. ಶಿಕ್ಷಕರಾಗಿ ಒಟ್ಟು 29 ವರ್ಷ ಸೇವೆ ಸಲ್ಲಿಸಿರುವ ಇವರು ಆರೇಲ್ತಡಿ ಸ.ಕಿ.ಪ್ರಾ.ಶಾಲೆಯ ಅಭಿವೃದ್ಧಿಗಾಗಿ ಮಾಡಿರುವ ಕಾರ್ಯಗಳಿಗೆ ಈ ಪ್ರಶಸ್ತಿ ದೊರಕಿದೆ.

ಇವರು 1996ರಿಂದ 1998ರವರೆಗೆ ಸಾರ್ಯ ಶ್ರೀ ಲಕ್ಷ್ಮೀ ವೆಂಕಟರಮಣ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಲಾಖಾ ಸೇವಾ ಪೂರ್ವ ಕರ್ತವ್ಯ ನಿರ್ವಹಿಸಿದ್ದಾರೆ.1998 ಆ.8ರಂದು ಆನಡ್ಕ ಕಿ.ಪ್ರಾ.ಶಾಲೆಗೆ ಶಿಕ್ಷಕರಾಗಿ ಸರಕಾರದಿಂದ ನೇಮಕಗೊಂಡು 16 ವರ್ಷ ಸೇವೆ ಸಲ್ಲಿಸಿದ್ದಾರೆ.5-6-2014ರಿಂದ 20-8-2024ರವರೆಗೆ ಒಟ್ಟು 11 ವರ್ಷ ಆರೇಲ್ತಡಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿದ್ದು, ಪ್ರಸ್ತುತ 21-8-2024ರಿಂದ ಅಮೈ ಸ.ಕಿ.ಪ್ರಾ.ಶಾಲೆಯಲ್ಲಿ ನಿಯೋಜನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಭಾರತ ಸೇವಾ ದಳ ಸ್ವಯಂ ಸೇವಾ ಸಂಸ್ಥೆಯಲ್ಲಿಯೂ ಸೇವೆ ಸಲ್ಲಿಸಿದ್ದಾರೆ.

ಇವರು ನನ್ನೊಳಗಿನ ನಾನು,ಈಜು ತರಬೇತಿ,social Service Held Camp, ಚೈತನ್ಯ ತರಬೇತಿ,ಕನ್ನಡ, ಸಮಾಜ, ವಿಜ್ಞಾನ, ಗಣಿತ,ಜೀವನ ವಿಜ್ಞಾನ,ಮುಖಾಮುಖಿ,ಇಂಗ್ಲೀಷ್ ತರಬೇತಿ,ಟಿಎಲ್‌ಎಮ್ ತರಬೇತಿ,ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ ತರಬೇತಿ,ಶಿಕ್ಷಣದಲ್ಲಿ ರಂಗಕಲೆ,ಪರಿಹಾರ ಬೋಧನೆ,ಚೈತನ್ಯ ತರಣಿ,ಬಹುಮುಖಿ, ನಲಿ-ಕಲಿ, ಸೌರಭ ತರಬೇತಿ, ರಚನಾ/ಸಾಧನಾ ಪುಷ್ಟಿ, ಕ್ರಿಯಾ ಸಂಶೋಧನೆ, ಪಠ್ಯಪುಸ್ತಕ ವಿಶ್ಲೇಷಣೆ, ಮೌಲ್ಯ ಶಿಕ್ಷಣ/ಸಮನ್ವಯ, ಯೋಗ/ದೈಹಿಕ & ಆರೋಗ್ಯ ಶಿಕ್ಷಣ ತರಬೇತಿ ಪಡೆದುಕೊಂಡಿದ್ದಾರೆ.

ಆನಡ್ಕ ಶಾಲೆಯಲ್ಲಿ ತೋಟಗಾರಿಕೆ, ಗೇರು ತೋಟ ರಚನೆ ತರಕಾರಿ ತೋಟ ರಚನೆ ಇವರ ಸೇವಾವಧಿಯಲ್ಲಿ ಆಗಿದ್ದು, ಆರೇಲ್ತಡಿ ಶಾಲೆಗೆ ವರ್ಗಾವಣೆಗೊಂಡು ಬಳಿಕ ಆರೇಲ್ತಡಿ ಶಾಲೆಯಲ್ಲಿ ಅಡಿಕೆತೋಟ ರಚನೆ, ಆಟದ ಮೈದಾನ ವಿಸ್ತರಣೆ, ಶಾಲೆಯ ಮೇಲ್ಬಾವಣಿ ದುರಸ್ತಿ, ಶಾಲಾ ಸೌಂದರೀಕರಣ, ಶಾಲೆಗೆ ಕುಡಿಯುವ ನೀರಿಗಾಗಿ ಮತ್ತು ಅಕ್ಷರದಾಸೋಹಕ್ಕೆ ಉಪಯೋಗಿಸಲು ಸಬ್‌ಮರ್ಸಿಬಲ್ ಪಂಪು ಅಳವಡಿಕೆ, ಕಾರ್‌ಶೆಡ್ ನಿರ್ಮಾಣ, ಶಾಲೆಗೆ ಮೈಕ್ ಸೆಟ್ ಕೊಡುಗೆ, ಶಾಲೆಗೆ ಭಾಗಶಃ (120 ಮೀಟರ್) ಕಂಪೌಂಡ್ ರಚನೆ, ತೆಂಗಿನ ತೋಟ,ಕೈತೊಳೆಯುವ ಘಟಕ ನಿರ್ಮಾಣ, ಸಂಘಸಂಸ್ಥೆಗಳಿಂದ ಪರಿಸರದಲ್ಲಿ ಹಣ್ಣಿನ ಗಿಡಗಳನ್ನು ನಾಟಿ, ಕೈ ತೊಳೆದ ನೀರು ಇಂಗಿಸಲು ಇಂಗುಗುಂಡಿ , ಶೈಕ್ಷಣಿಕ ಪ್ರವಾಸ, ತೆಂಗಿನ ತೋಟ, ಅಡಿಕೆ ತೋಟಕ್ಕೆ ಡ್ರಿಪ್ ಅಳವಡಿಕೆ,ಶಾಲಾ ವನದಲ್ಲಿ ಅಧ್ಯಾಪಕ ವೃಂದ ಸೇರಿ ಕರಿಮೆಣಸು ಕೃಷಿ,ಗೌರವ ಶಿಕ್ಷಕಿಗೆ ವೇತನ,ಶುದ್ಧ ಕುಡಿಯುವ ನೀರಿನ ಶುದ್ದೀಕರಣ ಘಟಕ , ಶಾಲಾ ಗೇಟಿನ ಬಳಿ ಬಸ್‌ ತಂಗುದಾಣ ,ಶಾಲೆಗೆ ಬರುವ ಕಾಲುದಾರಿ ಮೋರಿ ದುರಸ್ತಿ , ಶಾಲೆಯ ಹಿಂಬದಿಯಿಂದ ಮಾರ್ಗದ ವ್ಯವಸ್ಥೆ,ಶಾಲಾ ರಂಗಮಂದಿರ ನಿರ್ಮಾಣ,ಕಡಬ ತಾಲೂಕು ‘ಗುರುಕಾಣಿಕೆ’ ತಂಡದಿಂದ ಗುರುಕಾಣಿಕೆ ಮೊದಲಾದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸವಣೂರು ಗ್ರಾ.ಪಂ.,ಕಡಬ/ಪುತ್ತೂರು ತಾ.ಪಂ,ದ.ಕ.ಜಿ.ಪಂ,ಸುಳ್ಯ ಶಾಸಕರ ಅನುದಾನ, ದಾನಿಗಳ ,ಎಸ್.ಡಿ.ಎಂ.ಸಿ.ನೆರವಿನಿಂದ ಮಾಡಿದ್ದಾರೆ.

ನಿಯೋಜನೆಗೊಂಡಿರುವ ಅಮೈ ಶಾಲೆಗೆ ಗುರುಕಾಣಿಕೆಯಿಂದ ಮೈಕ್ ಸೌಂಡ್ ಬಾಕ್ಸ್ ಖರೀದಿ, ಆರ್‌ಟಿಸಿ (ಜಾಗದ ಅಳತೆ, ನಕಾಶೆ ರಚನೆ, ಗೌರವ ಶಿಕ್ಷಕಿಗೆ ಗೌರವಧನ ,ಬೆಳಂದೂರು ಗ್ರಾಮ ಪಂಚಾಯತ್‌ನಿಂದ ಅಮೈ ಶಾಲಾ ಪರಿಸರ ಸ್ವಚ್ಛತೆಗೆ ಹುಲ್ಲು ಕತ್ತರಿಸುತ್ತಿರುವುದು. ಸಬ್ ಮರ್ಸಿಬಲ್ ಪಂಪುರಿಪೇರಿ, ನಳ್ಳಿ ನೀರು ಅಳವಡಿಕೆ ಇತ್ಯಾದಿಗೆ ಒಟ್ಟು ಅನುದಾನ ತರಿಸಿಕೊಂಡು ಶಾಲಾಭಿವೃದ್ದಿ ಮಾಡಿದ್ದಾರೆ.

ಇವರ ತಂದೆ ದಿ.ಬಾಳಪ್ಪ ಶೆಟ್ಟಿ ತಾಯಿ ಗಿರಿಜಾ ಶೆಟ್ಟಿ ,ಪತ್ನಿ ಪ್ರಭಾವತಿ ಜೆ ಶೆಟ್ಟಿ ಗೃಹಿಣಿ,ಮಕ್ಕಳಾದ ಧೀಮಂತ್ ಶೆಟ್ಟಿ ಜೆ.ಪಿ. ಅವರು ಸಿ.ಎ ಅಂತಿಮ ವರ್ಷ (Industrial Training in HSBC) ,ದಿವಿತ್ ಶೆಟ್ಟಿ ಜೆ.ಪಿ ಅವರು ಮಂಗಳೂರು ಬೆಂಜನಪದವು ಕೆನರಾ ಕಾಲೇಜಿನಲ್ಲಿ ದ್ವಿತೀಯ ವರ್ಷದ ಇಂಜಿನಿಯರಿಂಗ್ ಮಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here