ಪಾಣಾಜೆ; ಪುತ್ತಿಲ ಪರಿವಾರದಿಂದ ನವೀಕರಣಗೊಂಡ ಮನೆಯ ಹಸ್ತಾಂತರ ಕಾರ್ಯಕ್ರಮ

0

ನಿಡ್ಪಳ್ಳಿ; ಪಾಣಾಜೆ ಗ್ರಾಮದ ದೇವಸ್ಯ ಎಂಬಲ್ಲಿ ಶ್ರೀಮತಿ ಮತ್ತು ಉದಯ ಕುಮಾರ್ ಎಂಬವರಿಗೆ ಅಟಲ್ ಜಿ ಜನ್ಮಶತಾಬ್ದಿ ಪ್ರಯುಕ್ತ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಪಾಣಾಜೆ ಘಟಕದ ವತಿಯಿಂದ 1.25 ಲಕ್ಷ ವೆಚ್ಚದಲ್ಲಿ ನವೀಕರಣಗೊಳಿಸಲ್ಪಟ್ಟ ಮನೆಯ ಹಸ್ತಾಂತರ ಕಾರ್ಯಕ್ರಮ ಸೆ.3 ರಂದು ನಡೆಯಿತು. 

ಬೆಳಿಗ್ಗೆ ಧಾರ್ಮಿಕ ಕಾರ್ಯ ನಡೆದು, ಪುತ್ತೂರು ಮಂಡಲದ ಬಿ.ಜೆ.ಪಿ ಮಾಜಿ ಅಧ್ಯಕ್ಷ  ಮೊಗರೋಡಿ ಬಾಲಕೃಷ್ಣ ರೈ ದೀಪ ಬೆಳಗಿಸಿ ಮನೆಯ ಯಜಮಾನ ಉದಯ ಮಣಿಯಾಣಿ ದಂಪತಿಗಳಿಗೆ ಶುಭ ಹಾರೈಸಿದರು.

ತಾಲೂಕು ಪುತ್ತಿಲ ಪರಿವಾರದ ಸಂಚಾಲಕ ಅರುಣ್ ಕುಮಾರ್ ಪುತ್ತಿಲ, ಜಿಲ್ಲಾ ಸಹಕಾರ ಭಾರತಿ ಕಾರ್ಯದರ್ಶಿ ನಾರಾಯಣ ಪ್ರಕಾಶ್ ನೆಲ್ಲಿತ್ತಿಮಾರು. ರಾಷ್ಟ್ರಿಯ ಸ್ವಯಂಸೇವಕ ಸಂಘದ ಪ್ರಮುಖರಾದ ಡಾ. ಅಖಿಲೇಶ್ ಪಾಣಾಜೆ, ಟ್ರಸ್ಟ್ ಅಧ್ಯಕ್ಷ ಶ್ರೀರಾಮ್ ಭಟ್ ಪಾತಾಳ, ಬಿಜೆಪಿ ಗ್ರಾಮಾಂತರ ಮಂಡಲದ ಪ್ರದಾನ ಕಾರ್ಯದರ್ಶಿ ಉಮೇಶ್ ಕೋಡಿಬೈಲು, ಪ್ರಶಾಂತ್ ನೆಕ್ಕಿಲಾಡಿ, ಟ್ರಸ್ಟ್ ಕಾರ್ಯದರ್ಶಿ ಪ್ರೇಮ್ ರಾಜ್ ಆರ್ಲಪದವು, ಟ್ರಸ್ಟ್ ಪ್ರಮುಖರಾದ ಮಹೇಂದ್ರ ವರ್ಮ, ರೂಪೇಶ್ ನಾಯ್ಕ್, ರವಿಕುಮಾರ್ ರೈ ಮಠ,ಗಣೇಶ್ಚಂದ್ರ  ಭಟ್ ಮಕರಂಧ,ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಪಾಣಾಜೆ ಪ್ರಧಾನ ಕಾರ್ಯದರ್ಶಿ ಸುಕಿನ್ ರಾಜ್ ಕೊಂದಲ್ಕಾನ, ಬಿಜೆಪಿ ಯುವ ಮೋರ್ಚಾದ ಗ್ರಾಮಾಂತರ ಮಂಡಲದ ಸದಸ್ಯರಾದ ಪ್ರದೀಪ್ ಪಾಣಾಜೆ, ಪಾಣಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ  ಜಯಶ್ರೀ ದೇವಸ್ಯ ,ಪಾಣಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಉಮೇಶ್ ರೈ ಗಿಳಿಯಾಲು  ಪಾಣಾಜೆ ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕ ಸಂತೋಷ್ ರೈ ಗಿಳಿಯಾಲು  , ಪಾಣಾಜೆ ಭಾ,ಜ,ಪ  ಪ್ರಮುಖರಾದ ರಘುನಾಥ ಪಾಟಾಳಿ ಅಪಿನಿಮೂಲೆ, ಪುಷ್ಪರಾಜ್ ರೈ ಕೋಟೆ, ಸಂದೀಪ್ ವಾಣಿಯನ್, ಸುರೇಶ್ ನಾಯ್ಕ ತೂಂಬಡ್ಕ, ಸಂತೋಷ್ ರೈ ಕೋಟೆ ,ಜಾನು ನಾಯ್ಕ ಭರಣ್ಯ,ಸಂತೋಷ್ ರೈ ಗೊಳಿತ್ತಡಿ ಹಾಗೂ ಟ್ರಸ್ಟ್ ನ ಪದಾಧಿಕಾರಿಗಳಾದ ಜಯಪ್ರಸಾದ್ ರೈ ಕೋಟೆ, ಸುದೀಪ್ ರಾಜ್ ಕೊಂದಲ್ಕಾನ,  ರವಿಚಂದ್ರ ಭರಣ್ಯ ರಮೇಶ್ ಬೊಳ್ಳುಕಳ್ಳು  ಉಪಸ್ಥಿತರಿದ್ದರು. ವಸಂತ ಕುಮಾರ್ ಭರಣ್ಯ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here