ಪುತ್ತೂರು: ವಿದ್ಯಾಭಾರತಿ ಕರ್ನಾಟಕ ಇದರ ಜಿಲ್ಲಾ ಮಟ್ಟದ ಗಣಿತ ವಿಜ್ಞಾನ ಮೇಳ, ಸಂಸ್ಕೃತಿ ಮಹೋತ್ಸವವು ಶ್ರೀರಾಮ ಹೈಸ್ಕೂಲ್ ಕಲ್ಲಡ್ಕ ಇಲ್ಲಿ ಆಗಸ್ಟ್ 30ರಂದು ನಡೆಯಿತು.
ತರುಣವರ್ಗದ ಈ ಸ್ಪರ್ಧೆಯಲ್ಲಿ ನರೇಂದ್ರ ಪ.ಪೂ.ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿರುತ್ತಾರೆ. ದ್ವಿತೀಯ ವಿಜ್ಞಾನ ವಿಭಾಗದ ತೃಷಾ ಇವರು ಕೆಮಿಸ್ಟ್ರಿ ಎಕ್ಸಪರಿಮೆಂಟ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಶರಣ ಎಮ್. ಇವರು ಇನ್ನೋವೇಟಿವ್ ಮೋಡೆಲ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, ಅರ್ಚನಾ, ನಂದನ, ಸಿಂಚನಾ ಜೆ.ಎನ್. ಇವರ ತಂಡ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, ಕೆ. ಅವನಿ ಭಟ್ ಇವರು ಸೈನ್ಸ್ ಪವರ್ ಪಾಯಿಂಟ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, ಪ್ರಕೃತಿ ವಿ ರೈ ಇವರು ಬಯೋಲಜಿ ಎಕ್ಸಪರಿಮೆಂಟ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, .ದ್ವಿತೀಯ ವಾಣಿಜ್ಯ ವಿಭಾಗದ ಸಿಂಧು ಸರಳಾಯ, ಪ್ರಥಮ ವಾಣಿಜ್ಯ ವಿಭಾಗದ ಯಜ್ಞಶ್ರೀ ಮತ್ತು ವಿನುತ ಇವರ ತಂಡ ಸಂಸ್ಕೃತಿ ಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, ದ್ವಿತೀಯ ವಿಜ್ಞಾನ ವಿಭಾಗದ ಕವನಶ್ರೀ ಇವರು ಫಿಸಿಕ್ಸ್ ಎಕ್ಸಪರಿಮೆಂಟ್ ಸ್ಪರ್ಧೆಯಲ್ಲಿ ತೃತೀಯ ಸ್ಥಾನ , ಮೋನಿಕಾ ಇವರು ಪಿಕ್ ಆಂಡ್ ಸ್ಪೀಚ್ ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.
ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ,ಪ್ರಾಂಶುಪಾಲರು,ಉಪನ್ಯಾಸಕ ವೃಂದ ಮತ್ತು ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.