ರಾಷ್ಟ್ರಕ್ಕಾಗಿ ಮಧ್ಯಸ್ಥಿಕೆ 90 ದಿನಗಳ ವಿಶೇಷ ಮಧ್ಯಸ್ಥಿಕಾ ಅಭಿಯಾನ: ಸೆ.13ರಂದು ಪುತ್ತೂರು ನ್ಯಾಯಾಲಯದಲ್ಲಿ ರಾಷ್ಟ್ರೀಯ ಲೋಕ ಅದಾಲತ್

0

ಪುತ್ತೂರು: ಸರ್ವೋಚ್ಚ ನ್ಯಾಯಾಲಯದ ಆದೇಶದ ಪ್ರಕಾರ ರಾಷ್ಟ್ರಕ್ಕಾಗಿ ಮಧ್ಯಸ್ಥಿಕೆ ಎಂಬ 90 ದಿನಗಳ ವಿಶೇಷ ಮಧ್ಯಸ್ಥಿಕಾ ಅಭಿಯಾನ ಜುಲೈ 1ರಿಂದ ಅಕ್ಟೋಬರ್ 7ರವರೆಗೆ ದೇಶಾದ್ಯಂತ ಹಮ್ಮಿಕೊಳ್ಳಲಾಗಿದ್ದು ಇದರ ಅಂಗವಾಗಿ ರಾಷ್ಟ್ರೀಯ ಮತ್ತು ರಾಜ್ಯ ಕಾನೂನು ಸೇವೆಗಳ ನಿರ್ದೇಶನದ ಪ್ರಕಾರ ದ.ಕ.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ತ್ವರಿತ ನ್ಯಾಯದಾನಕ್ಕಾಗಿ ಮಂಗಳೂರು, ಬಂಟ್ವಾಳ, ಪುತ್ತೂರು, ಸುಳ್ಯ, ಬೆಳ್ತಂಗಡಿ, ಮೂಡಬಿದ್ರೆ ನ್ಯಾಯಾಲಯಗಳಲ್ಲಿ ಸೆ.13ರಂದು ರಾಷ್ಟ್ರೀಯ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ಪ್ರಧಾನ ಜಿಲ್ಲಾ ನ್ಯಾಯಾಧಿಶರಾದ ಬಸವರಾಜ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.


90 ದಿನಗಳ ಮಧ್ಯಸ್ಥಿಕಾ ಅಭಿಯಾನ ಹಾಗೂ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ನ್ಯಾಯಾಲಯದಲ್ಲಿ ದಾಖಲಾಗದೆ ಹಾಗೂ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳ್ನು ರಾಜೀ ಸಂಧಾನದ ಮೂಲಕ ಅತೀ ಶೀಘ್ರದಲ್ಲಿ ಇತ್ಯರ್ಥಪಡಿಸಿಕೊಳ್ಳಲು ಇದು ಸುವರ್ಣವಕಾಶವಾಗಿದೆ.ದ.ಕ. ಜಿಲ್ಲೆಯ ಸುಮಾರು 50 ಹಿರಿಯ ಹಾಗೂ ನುರಿತ ವಕೀಲರು ಮಧ್ಯಸ್ಥಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.


ಮಧ್ಯಸ್ಥಿಕಾ ಅಭಿಯಾನ ಮತ್ತು ಲೋಕ ಅದಾಲತ್‌ನಲ್ಲಿ ಮೋಟಾರು ವಾಹನ ಅಪಘಾತ ಪ್ರಕರಣ, ಚೆಕ್ ಅಮಾನ್ಯ, ಬ್ಯಾಂಕ್ ಸಾಲ ವಸೂಲಾತಿ ಪ್ರಕರಣ, ಅಕ್ರಮ ಮರಳು ಸಾಗಾಟ ಪ್ರಕರಣ, ಕಾರ್ಮಿಕ ಹಾಗೂ ನಷ್ಟ ಪರಿಹಾರ ವಿವಾದ ಪ್ರಕರಣ ಹಾಗೂ ವಿಚ್ಚೇದನ ಪ್ರಕರಣ ಹೊರತುಪಡಿಸಿ ವೈವಾಹಿಕ ಜೀವನಾಂಶ ಪ್ರಕರಣ, ಗ್ರಾಹಕ ವಿವಾದ ಪ್ರಕರಣ, ಭೂಸ್ವಾಽನ ಮತ್ತು ಪರಿಹಾರ ಪ್ರಕರಣ, ವಿದ್ಯುತ್ ಶುಲ್ಕ ಪ್ರಕರಣ, ವೇತನ ಭತ್ಯೆ, ಸೇವಾ, ಪಿಂಚಣಿ ಪ್ರಕರಣ, ಜನನ ಪ್ರಮಾಣಪತ್ರ ಪ್ರಕರಣ, ಕಾನೂನಾತ್ಮಕವಾಗಿ ರಾಜಿಯಾಗಬಲ್ಲ ಸಿವಿಲ್ ಪ್ರಕರಣಗಳನ್ನು ಅದಾಲತ್‌ನಲ್ಲಿ ತೆಗೆದುಕೊಳ್ಳಲಾಗುತ್ತದೆ.


ಈ ಅದಾಲತ್‌ನಲ್ಲಿ ನ್ಯಾಯಾಧಿಶರು, ಸಂಬಂಧಪಟ್ಟ ಪ್ರಕರಣಗಳ ಇಲಾಖಾಽಕಾರಿಗಳು ಮಧ್ಯಸ್ಥಿಕೆ ವಹಿಸಲಿದ್ದಾರೆ.ಇಬ್ಬರು ಕಕ್ಷಿದಾರರಿಗೆ ಪ್ರಕರಣ ರಾಜಿ ಮಾಡಿಕೊಳ್ಳಲು ಸೂಕ್ತ ಮಾರ್ಗದರ್ಶನ ಕೊಡಲಾಗುತ್ತದೆ.ರಾಜಿ ಸಂಧಾನದಿಂದ ಪಕರಣ ಇತ್ಯರ್ಥವಾದಾಗ ನ್ಯಾಯಾಲಯಕ್ಕೆ ಭರಿಸಲಾದ ಶುಲ್ಕವನ್ನು ವಾಪಸ್ ಕೊಡುತ್ತೇವೆ.ಈ ಆದೇಶದ ವಿರುದ್ಧ ಯಾವುದೇ ಮೇಲ್ಮನವಿ ಇರುವುದಿಲ್ಲ.ಕಡಿಮೆ ಖರ್ಚಿನಲ್ಲಿ ತ್ವರಿತ ನ್ಯಾಯ ಸಿಗುತ್ತದೆ. ಸಮಯ ಪೋಲಾಗುವುದನ್ನು ತಪ್ಪಿಸಲು ಹಾಗೂ ಸಂಬಂಧವನ್ನು ಉಳಿಸಲು ಇದೊಂದು ವಿಶೇಷ ಅವಕಾಶವಾಗಿದೆ ಎಂದು ಅವರು ಹೇಳಿದರು.ದ.ಕ.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈಬುನ್ನೀಸಾ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಯಾವೆಲ್ಲ ಪ್ರಕರಣಗಳ ಇತ್ಯರ್ಥ?
ವೈವಾಹಿಕ ಜೀವನಾಂಶ ಪ್ರಕರಣ, ಗ್ರಾಹಕ ವಿವಾದ ಪ್ರಕರಣ, ಭೂಸ್ವಾಽನ ಮತ್ತು ಪರಿಹಾರ ಪ್ರಕರಣ, ವಿದ್ಯುತ್ ಶುಲ್ಕ ಪ್ರಕರಣ, ವೇತನ ಭತ್ಯೆ, ಸೇವಾ, ಪಿಂಚಣಿ ಪ್ರಕರಣ, ಜನನ ಪ್ರಮಾಣಪತ್ರ ಪ್ರಕರಣ, ಕಾನೂನಾತ್ಮಕವಾಗಿ ರಾಜಿಯಾಗಬಲ್ಲ ಸಿವಿಲ್ ಪ್ರಕರಣಗಳನ್ನು ಅದಾಲತ್‌ನಲ್ಲಿ ಇತ್ಯರ್ಥಪಡಿಸಲಾಗುತ್ತದೆ.

LEAVE A REPLY

Please enter your comment!
Please enter your name here