
ಪುತ್ತೂರು: ಪುತ್ತೂರಿನ ನೃತ್ಯೋಪಾಸನಾ ಕಲಾ ಅಕಾಡೆಮಿ ಇದರ ವಿಟ್ಲ ಶಾಖೆಯ ವತಿಯಿಂದ ‘ನೃತ್ಯೋಹಂ’ ವಾರ್ಷಿಕ ನೃತ್ಯ ಕಾರ್ಯಕ್ರಮ ವಿಟ್ಲ ಶ್ರೀಭಗವತಿ ದೇವಸ್ಥಾನದಲ್ಲಿ
ಇತ್ತೀಚೆಗೆ ನಡೆಯಿತು.

ಉದ್ಯಮಿ ಸುಭಾಶ್ಚಂದ್ರ ನಾಯಕ್ ದೀಪ ಬೆಳಗಿಸಿ ನೃತ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಭರತನಾಟ್ಯದಂತಹ ಶಾಸ್ತ್ರೀಯ ಕಲಾ ಪ್ರಕಾರಗಳನ್ನು ಉಳಿಸಿ ಬೆಳೆಸಬೇಕಾದ ಅನಿವಾರ್ಯತೆಯನ್ನು ಹೇಳಿದರು. ಭಗವತಿ ದೇವಸ್ಥಾನದ ಪ್ರಮುಖರಾದ ಕೇಶವ ಇದ್ದರು. ನೃತ್ಯಗುರು ವಿದುಷಿ ಶಾಲಿನಿ ಆತ್ಮಭೂಷಣ್ ನಿರ್ದೇಶನ ಹಾಗೂ ನಟುವಾಂಗದಲ್ಲಿ ವಿಟ್ಲ ಶಾಖೆಯ ವಿದ್ಯಾರ್ಥಿಗಳಿಂದ ಶಾಸ್ತ್ರೀಯ ನೃತ್ಯ ಪ್ರದರ್ಶನಗೊಂಡಿತು. ಹಿಮ್ಮೇಳದಲ್ಲಿ ಹಾಡುಗಾರಿಕೆ ವಿದ್ವಾನ್ ಕೃಷ್ಣಾಚಾರ್ ಪಾಣೆಮಂಗಳೂರು, ಮೃದಂಗ ವಿದ್ವಾನ್ ಬಾಲಕೃಷ್ಣ ಭಟ್ ಹೊಸಮನೆ, ಕೊಳಲಿನಲ್ಲಿ ವಿದ್ವಾನ್ ಕೃಷ್ಣಗೋಪಾಲ್ ಸಾಥ್ ನೀಡಿದರು.
