ಕಾಣಿಯೂರು: ಸವಣೂರು ವಲಯ ಮಟ್ಟದ 14ರ ವಯೋಮಾನದ ಬಾಲಕ ಬಾಲಕಿಯರ ಕಬಡ್ಡಿ ಪಂದ್ಯಾಟವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಣಿಯೂರಿನಲ್ಲಿ ನಡೆಯಿತು. ಈ ಪಂದ್ಯಾಟದಲ್ಲಿ ಪ್ರಗತಿ ವಿದ್ಯಾ ಸಂಸ್ಥೆಯ ಬಾಲಕರ ತಂಡವು ಪ್ರಥಮ ಸ್ಥಾನ ಪಡೆದುಕೊಂಡು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ತಂಡದ ನಾಯಕ ಆರ್ಯ ಕೇನಾಜೆ (8ನೇ) ಉತ್ತಮವಾಗಿ ತಂಡವನ್ನು ಮುನ್ನಡೆಸಿದರು. ಆಲ್ರೌಂಡರ್ ಆಗಿ ಶೋಭಿತ್ (8ನೇ) ಉತ್ತಮ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಇಶಾನ್ ಪಿ ಎಸ್ 7ನೇ ಬೆಸ್ಟ್ ರೈಡರ್ ಆಗಿ ಗುರುತಿಸಿಕೊಂಡರು. ಸಾಶ್ರೀತ್ ವಿ ರೈ 7ನೇ, ರುತಿಕ್ ಕೃಷ್ಣ 7ನೇ, ಹಾರ್ತಿಕ್ ಕೆ ಗೌಡ 6ನೇ, ಉಜ್ವಲ್ ಜಿ ಎಸ್ 7ನೇ, ಮೌಕಿಕ್ ಬಿ ಎಸ್ 7ನೇ, ಅಮೃತ್ ಎನ್ 7ನೇ, ಗಾಯನ್ ಎಂ ಪಿ 8ನೇ, ಅನುಷ್ ಎ 7ನೇ, ಸಮರ್ಥ್ ಪಿ ರೈ 7ನೇ, ಅಕ್ಷಿತ್ ಕೆ ಗೌಡ 7ನೇ, ವೃಷಾಂಕ್ ಸಿ ಕೆ 6ನೇ ಇವರು ತಂಡದ ಸದಸ್ಯರಾಗಿದ್ದರು.
ಬಾಲಕಿಯರ ಕಬಡ್ಡಿ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.ತಂಡದ ನಾಯಕಿ ಭವಿಷ್ಯ ರೈ 9ನೇ ಬೆಸ್ಟ್ ಡಿಪೆಂಡರ್ ಪ್ರಶಸ್ತಿ ಪಡೆದುಕೊಂಡರು. ಉಳಿದಂತೆ ಮಂಗಳ ಎಂ 8ನೇ, ತೃಷಾ ಎನ್ ಓ 8ನೇ, ತುಷಾರ ಪಿ 7ನೇ, ಕಂಗನಾ ರೈ 7ನೇ, ಭೂಮಿಕಾ ವಿ 7ನೇ, ಸಾಕ್ಷಿ ಎ ಜೆ, ತನಿಷ್ಕ ರೈ 6ನೇ, ದಿಶಾ ಬಿ ಎ 7ನೇ, ಅಚಿಂತ್ಯ 6ನೇ, ತನ್ವಿ ಕೆ ಪಿ 6ನೇ ತಂಡದ ಸದಸ್ಯರಾಗಿದ್ದರು.
ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಸಂತೋಷ್ ಕುಮಾರ್ ತರಬೇತಿ ನೀಡಿರುತ್ತಾರೆ. ತಂಡದ ಮೇಲ್ವಿಚಾರಕರಾಗಿ ಸಂಸ್ಥೆಯ ಸಹ ಆಡಳಿತ ಅಧಿಕಾರಿ ಹೇಮನಾಗೇಶ್ ರೈ ಸಹಕರಿಸಿದರು.