ಗೌರವಾಧ್ಯಕ್ಷರಾಗಿ ಗೋಪಾಲಕೃಷ್ಣ ಪಡ್ಡಿಲ್ಲಾಯ ,ಅಧ್ಯಕ್ಷರಾಗಿ ದಯಾನಂದ ರೈ ಮನವಳಿಕೆಗುತ್ತು, ಸಂಚಾಲಕರಾಗಿ ಡಾ| ಹೇಮಂತ್ ರೈ ಮನವಳಿಕೆಗುತ್ತು ಆಯ್ಕೆ
ಆಲಂಕಾರು : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಕಡಬ ತಾಲೂಕು ಘಟಕ ರಚನೆ ನಡೆಯಿತು. ಗೌರವಾಧ್ಯಕ್ಷರಾಗಿ ಗೋಪಾಲಕೃಷ್ಣ ಪಡ್ಡಿಲ್ಲಾಯ , ಅಧ್ಯಕ್ಷರಾಗಿ ದಯಾನಂದ ರೈ ಮನವಳಿಕೆಗುತ್ತು, ಪ್ರಧಾನ ಸಂಚಾಲಕರಾಗಿ ಡಾ| ಹೇಮಂತ್ ರೈ ಮನವಳಿಕೆಗುತ್ತು ರವರು ಆಯ್ಕೆಯಾಗಿದ್ದಾರೆ.
ಆಲಂಕಾರು ಶ್ರೀ ದುರ್ಗಾಂಬಾ ಪದವಿ ಪೂರ್ವ ಕಾಲೇಜಿನ ವಠಾರದಲ್ಲಿ ಪಟ್ಲ ಫೌಂಡೇಶನ್ ನ ಅಭಿಮಾನಿಗಳ ಸಭೆ ಕರೆಯಲಾಗಿತ್ತು.ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿಗಳಾಗಿ ಎಸ್ ವಿ ಪ್ರಸಾದ್ ಕಣಿಪುರ , ಜತೆ ಕಾರ್ಯದರ್ಶಿಯಾಗಿ ಜನಾರ್ಧನ ಗೌಡ ಕಯ್ಯಪೆ, ಕೋಶಾಧಿಕಾರಿಯಾಗಿ ಮಮತಾ ಅಂಬರಾಜೆ,ಉಪಾಧ್ಯಕ್ಷರಾಗಿ ವಿಠಲ್ ರೈ ಕೊಣಾಲುಗುತ್ತು , ಬೇಬಿ ಸಿ ಪಾಟಾಲಿ ಗೌರವ ಸಲಹೆಗಾರರಾಗಿ ಸುಬ್ರಹ್ಮಣ್ಯ ರಾವ್ ನಗ್ರಿ, ರಮೇಶ್ ಭಟ್ ಉಪ್ಪಂಗಳ, ಈಶ್ವರ ಗೌಡ ಪಜ್ಜಡ್ಕ, ರಾಧಾಕೃಷ್ಣ ರೈ ಪರಾರಿಗುತ್ತು, ಕೆ ಗೋಪಾಲ ಕಡಬ, ಮುತ್ತಪ್ಪ ಪೂಜಾರಿ ನೆಯ್ಯಲ್ಗ ರವರು ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರ ಗೋಪಾಲಕೃಷ್ಣ ಪಡ್ಡಿಲ್ಲಾಯ ಮಾತನಾಡಿ, ಯಕ್ಷಧ್ರುವ ಪಟ್ಲ ಪೌಂಡೇಶನ್ ಕಲಾವಿದರ ಬಾಳಿಗೆ ಆಶಾಕಿರಣವಾಗಿದೆ. ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರೋತ್ಸವದ ಸಂಧರ್ಭದಲ್ಲಿ ಟ್ರಸ್ಟ್ ವತಿಯಿಂದ ಉತ್ತಮ ಕಾರ್ಯಕ್ರಮಗಳು ನೇರವೆರಲಿ ಎಂದು ತಿಳಿಸಿ ಶುಭಾಹಾರೈಸಿದರು.
ಕಡಬ ತಾಲ್ಲೂಕು ಘಟಕದ ಅಧ್ಯಕ್ಷರ ದಯಾನಂದ ರೈ ಮನವಳಿಕೆಗುತ್ತು ಮಾತನಾಡಿ, ಯಕ್ಷಧ್ರುವ ಪಟ್ಲ ಪೌಂಡೇಶನ್ ಹಲವು ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡಿ ಯಕ್ಷಗಾನದಲ್ಲಿ ದೇಶ,ವಿದೇಶಗಳಲ್ಲಿ ಪ್ರಸಿದ್ದಿ ಪಡೆದಿದೆ ಕಡಬ ತಾಲ್ಲೂಕು ಘಟಕದ ವತಿಯಿಂದ ಉತ್ತಮ ಕೆಲಸ ಕಾರ್ಯಗಳನ್ನು ಮಾಡುವ ಎಂದು ತಿಳಿಸಿದರು.
ಸಂಚಾಲಕರಾದ ಡಾ. ಹೇಮಂತ್ ರೈ ಮನವಳಿಕೆಗುತ್ತು ರವರು ಮಾತನಾಡಿ, ಕರಾವಳಿಯ ಗಂಡುಕಲೆಯೆಂದೇ ಪ್ರಸಿದ್ಧವಾದ ಯಕ್ಷಗಾನ ಕ್ಷೇತ್ರದಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸುತ್ತಿರುವ ಅಶಕ್ತ ಕಲಾವಿದರ ಬದುಕಿನಲ್ಲಿ ಭರವಸೆಯ ಬೆಳಕನ್ನು ಮೂಡಿಸುವ ನಿಟ್ಟಿನಲ್ಲಿ ಪ್ರಾರಂಭಿಸಿರುವ ಸಂಸ್ಥೆ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ). ಮಂಗಳೂರು, ನಂತರ ನಾಟಕರಂಗ, ದೈವನರ್ತಕರು ಹಾಗೂ ಇತರ ಕಲಾವಿದರ ಪಾಲಿಗೆ ಬೆಳಕಾಗಿ ಕಾರ್ಯ ನಿರ್ವಹಿಸುತ್ತಿದೆ. ಸುಮಾರು 17 ಕೋಟಿ ಮೊತ್ತದ ಸೇವಾ ಯೋಜನೆಯನ್ನು 10 ವರ್ಷಗಳಲ್ಲಿ ಪಟ್ಲ ಪೌಂಡೇಶನ್ ಟ್ರಸ್ಟ್ ಅನುಷ್ಠಾನಗೊಳಿಸಿದೆ. ಭಾಗವತರಾದ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದ ಪಟ್ಲ ಫೌಂಡೇಶನ್ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಒಟ್ಟು 43 ಘಟಕಗಳನ್ನು ಹೊಂದಿ ಇದೀಗ ಕಡಬ ತಾಲ್ಲೂಕು ಘಟಕ ರಚನೆಯಾಗಿದೆ. ಪ್ರಖ್ಯಾತ ಏಳು ಮಂದಿ ಕಲಾವಿದರಿಗೆ ತಲಾ 1 ಲಕ್ಷ ನಗದು, ಬೆಳ್ಳಿಯ ಪದಕ, ಸನ್ಮಾನ ಫಲಕದೊಂದಿಗೆ ಪಟ್ಲ ಪ್ರಶಸ್ತಿ ಸನ್ಮಾನ ಕಾರ್ಯಕ್ರಮ,
ಪಟ್ಲ ಯಕ್ಷಾಶ್ರಯ ಯೋಜನೆಯಡಿಯಲ್ಲಿ 35 ಮನೆಗಳನ್ನು ನಿರ್ಮಿಸಿ ಕಲಾವಿದರಿಗೆ ಹಸ್ತಾಂತರಿಸಲಾಗಿದೆ , 22 ಮನೆಗಳು ನಿರ್ಮಾಣದ ಕೊನೆಯ ಹಂತದಲ್ಲಿದೆ,180 ಕಲಾವಿದರಿಗೆ ತಲಾ ರೂ 25,000 ಮನೆ ರಿಪೇರಿಗೆ ಸಹಾಯ ಧನ ವಿತರಣೆ,175 ತೀರಾ ಅಶಕ್ತ ಕಲಾವಿದರಿಗೆ ತಲಾ 50,000ದಂತೆ ಗೌರವಧನ, ಯಕ್ಷಧ್ರುವ ಯಕ್ಷಶಿಕ್ಷಣ ಯೋಜನೆಯ ಅಡಿಯಲ್ಲಿ 87 ಸರಕಾರಿ ಶಾಲೆಗಳಲ್ಲಿ ಸುಮಾರು 9,500 ವಿದ್ಯಾರ್ಥಿಗಳಿಗೆ, 48 ಮಂದಿ ಯಕ್ಷ ಗುರುಗಳ ಮೂಲಕ ಉಚಿತ ಯಕ್ಷಗಾನ ತರಬೇತಿ ಹಾಗೂ ಸುಮಾರು 650 ಮಂದಿ ವಿದ್ಯಾರ್ಥಿಗಳಿಗೆ ವಿವಿಧ ಘಟಕಗಳ ವತಿಯಿಂದ ಯಕ್ಷಗಾನ ತರಬೇತಿ, ಪ್ರತಿವರ್ಷ ಸುಮಾರು 2450 ಕಲಾವಿದರಿಗೆ ಅಪಘಾತ ಚಿಕಿತ್ಸಾ ವೆಚ್ಚ,ರೂ 60,000, ಆಕಸ್ಮಿಕ ಜೀವಹಾನಿಯಾದಲ್ಲಿ ಕುಟುಂಬಕ್ಕೆ 10 ಲಕ್ಷ ಪರಿಹಾರ ಧನ, ದೈವ ನರ್ತನದ ಸಂದರ್ಭದಲ್ಲಿ ಇಹಲೋಕ ತ್ಯಜಿಸಿದ ಕಾಂತು ಅಜಿಲರವರಿಗೆ 1 ಲಕ್ಷ, ರಂಗಸ್ಥಳದಲ್ಲೇ ಇಹಲೋಕ ತ್ಯಜಿಸಿದ ಕಟೀಲು ಮೇಳದ ಗುರುವಪ್ಪ ಬಾಯಾರ್ ಕುಟುಂಬಕ್ಕೆ 1 ಲಕ್ಷ, ತಿರುಗಾಟದ ಸಂದರ್ಭದಲ್ಲಿ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ ಸಸಿಹಿತ್ಸು ಮೇಳದ ಕಲಾವಿದ ಜಗದೀಶ್ ಕುಟುಂಬಕ್ಕೆ 1 ಲಕ್ಷ ಸಹಾಯದನ ಟ್ರಸ್ಟ್ ವತಿಯಿಂದ ನೀಡಿದೆ. ಅಪಘಾತ ಹಾಗೂ ಅನಾರೋಗ್ಯದಿಂದ ವಿಧಿವಶರಾದ 30 ಮಂದಿ ಕಲಾವಿದರ ಕುಟುಂಬದವರಿಗೆ ತಲಾ 50,000, ರಂಗಸ್ಥಳದಲ್ಲೇ ತನ್ನ ಬದುಕನ್ನು ಅಂತ್ಯಗೊಳಿಸಿದ ಗೇರುಕಟ್ಟೆ ಗಂಗಯ್ಯ ಶೆಟ್ಟಿಯವರ ಕುಟುಂಬಕ್ಕೆ ₹2.5 ಲಕ್ಷ ಅಪಘಾತಕ್ಕೀಡಾದ ಕಲಾವಿದ ದಿನೇಶ್ ಮಡಿವಾಳ ಸೌಕೂರು ಮೇಳ ಮತ್ತು ವಾಮನ ದೇವಾಡಿಗ ಹಿರಿಯಡ್ಕ ಮೇಳ ರವರ ಕುಟುಂಬಕ್ಕೆ ತಲಾ 78 ಲಕ್ಷ ಹಾಗೂ ಪ್ರವೀತ್ ಆಚಾರ್ಯ ಸಸಿಹಿತ್ತು ಮೇಳ ಮತ್ತು ಆನಂದ ಕಟೀಲು ಕಟೀಲು ಮೇಳ ಇವರ ಕುಟುಂಬಕ್ಕೆ ತಲಾ 10 ಲಕ್ಷ – ಒಟ್ಟು 36 ಲಕ್ಷ ವಿಮಾಯೋಜನೆಯಲ್ಲಿ ಸಲ್ಲುತ್ತದೆ, ಗರಿಷ್ಠ ಅಂಕ ಗಳಿಸಿದ ಕಲಾವಿದರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ ಹಾಗೂ ಬಂಗಾರದ ಪದಕ,ಕ್ರೀಡಾಕೂಟ ಆಯೋಜನೆ
ಯಕ್ಷಧ್ರುವ ಕಲಾ ಗೌರವ ಸೇರಿದಂತೆ ಹಲವು ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡಿದೆ ಎಂದರು.
ಕಡಬ ತಾಲೂಕು ಘಟಕದ ಪದಗ್ರಹಣ
ನವರಾತ್ರಿಯ ಸಂದರ್ಭದಲ್ಲಿ ಶರವೂರು ಶ್ರೀ ದುರ್ಗಾಪರಮೇಶ್ವರೀ ಪದಗ್ರಹಣ ಕಾರ್ಯಕ್ರಮ ನಡೆಯಲಿದ್ದು, ಪಟ್ಲ ಸತೀಶ್ ಶೆಟ್ಟಿಯವರ ಹಾಗೂ ಕೇಂದ್ರ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೋಳ್ಳಲಿದ್ದಾರೆ ಎಂದು ತಿಳಿಸಿದರು.ಕೋಶಾಧಿಕಾರಿ ಮಮತಾ ಅಂಬರಾಜೆ ಧನ್ಯವಾದ ಸಮರ್ಪಿಸಿದರು.ಸಭೆಯಲ್ಲಿ ಸುಮಾರು 50 ಮಂದಿ ಯಷ್ಟು ಅಭಿಮಾನಿಗಳು ಉಪಸ್ಥಿತರಿದ್ದರು.