ಪುತ್ತೂರು: ಶಿಕ್ಷಣ ಎಂಬುದು ಜೀವನದ ಅತೀ ಮುಖ್ಯ ಭಾಗ. ಜ್ಞಾನವೆಂಬ ಅಮೃತಸುಧೆಯನ್ನು ಹರಿಸುವ, ವಿದ್ಯಾರ್ಥಿಗಳ ಏಳಿಗೆಗಾಗಿ ಶ್ರಮಿಸುವ ಶಿಕ್ಷಕರನ್ನು ಗೌರವಿಸುವ ಉದ್ದೇಶದಿಂದ ಡಾ. ಸರ್ವಪಳ್ಳಿ ರಾಧಾಕೃಷ್ಣನ್‌ರವರ ಜನ್ಮದಿನ ಸೆ.5 ರಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಪರ್ಲಡ್ಕ ಶಿವಪೇಟೆ ವಿವೇಕಾನಂದ ಶಿಶುಮಂದಿರದಲ್ಲಿ ಶಿಕ್ಷಕರ ದಿನಾಚರಣೆಯನ್ನು ಶಿಶುಮಂದಿರದ ಅಧ್ಯಕ್ಷ ರಾಜ್‌ಗೋಪಾಲ್ ಭಟ್ ಮತ್ತು ಶ್ರೀಕೃಷ್ಣ ಲೋಕದ ಗೌರವಾಧ್ಯಕ್ಷೆ ರಾಜ ಬಲರಾಂ ಇವರ ಉಪಸ್ಥಿತಿಯಲ್ಲಿ ಆಚರಿಸಲಾಯಿತು.

ವರ್ಷಂಪ್ರತಿಯಂತೆ ರಾಜಿ ಬಲರಾಂ ರವರು ಮಾತಾಜಿಯವರಿಗೆ ಬಾಗಿನ ನೀಡಿ ಗೌರವಿಸಿದರು. ಜೊತೆಗೆ ಓಣಂ ಹಬ್ಬದ ಪ್ರಯುಕ್ತ ಮಕ್ಕಳು ತಂದ ಹೂವಿನಿಂದ ಪೂಕಳಂ ಮಾಡಿ ಓಣಂ ಹಬ್ಬವನ್ನು ಆಚರಿಸಲಾಯಿತು.