ಪುತ್ತೂರು: ನಾಗರಿಕ ಸ್ಕೌಟ್ ಮತ್ತು ಗೈಡ್ಸ್ ಇದರ ಸ್ಥಳೀಯ ಸಂಸ್ಥೆ ಪುತ್ತೂರಿನಲ್ಲಿ, ಸೆಪ್ಟೆಂಬರ್ 6ರಂದು ನಡೆಸಿದ ಗೀತಾ ಗಾಯನ ಸ್ಪರ್ಧೆಯಲ್ಲಿ, ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ ಕಬ್ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಗೈದರು.
4ನೇ ತರಗತಿಯ ಕಬ್ ವಿದ್ಯಾರ್ಥಿಗಳಾದ ಶೌರ್ಯ ಕಾರ್ತಿಕೇಯ, ಆಯುಷ್ ಕೆ. ಎಂ, ವಿಹಾನ್ ಎಲ್, ಧನ್ವಿತ್ ಎಂ. ಎನ್., ಪ್ರಸಿದ್ಧ ಕೃಷ್ಣ ಆರ್ ನಾಯ್ಕ್ , ಆಶಯ್ ಜಿ. ಸಿ, ಇವರು ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ ಹಾಗೂ ಈ ವಿದ್ಯಾರ್ಥಿಗಳಿಗೆ ಕಬ್ ಶಿಕ್ಷಕಿ ಸ್ವಾತಿ ಕೆ ಇವರು ಮಾರ್ಗದರ್ಶನವನ್ನು ನೀಡಿರುತ್ತಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.