ಪುತ್ತೂರು: ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು. ಮುಖ್ಯಅತಿಥಿ, ಸಂಸ್ಥೆಯ ಹಿರಿಯ ನಿವೃತ್ತಶಿಕ್ಷಕ ವಿಕ್ಟರ್ ಸಿರಿಲ್ ಲೋಬೊ ಮಾತನಾಡಿ ವಿದ್ಯಾರ್ಥಿಗಳು ಶಿಕ್ಷಕರನ್ನು ಗೌರವಿಸಬೇಕು. ನಿಮ್ಮಲ್ಲಿ ಅಹಂಕಾರವಿರಬಾರದು. ಹೇಗೆ ಕುಂಬಾರನು ಮಣ್ಣಿನ್ನಲ್ಲಿ ಮಡಿಕೆಗಳನ್ನು ಮಾಡಿ ಹೂದಾನಿಯಾಗಿ ಪರಿವರ್ತಿಸುತ್ತಾನೋ ಹಾಗೆ ಶಿಕ್ಷಕರು ಕೂಡ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ ಉತ್ತಮ ವ್ಯಕ್ತಿತ್ವ ರೂಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಮಾಯ್ ದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ವಂ|ಲಾರೆನ್ಸ್ ಮಸ್ಕರೇನ್ಹಸ್ ಮಾತನಾಡಿ ವಿದ್ಯಾರ್ಥಿಗಳು ಶಿಕ್ಷಕರಿಗೆ ಚಿರಋಣಿಗಳಾಗಿರಬೇಕು. ಒಳ್ಳೆಯ ಮಕ್ಕಳಾಗುವುದೇ ವಿದ್ಯಾರ್ಥಿಗಳು ಶಿಕ್ಷಕರಿಗೆ ಕೊಡುವ ಬಹುದೊಡ್ಡ ಬಹುಮಾನ. ಶಿಕ್ಷಕರು ಉತ್ತಮರಾಗಿ ಉತ್ತಮ ವ್ಯಕ್ತಿತ್ವವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಿ ಉತ್ತಮ ಸಮಾಜವನ್ನು ನಿರ್ಮಿಸಲು ಶ್ರಮಿಸಬೇಕು ಎಂದು ಹೇಳಿದರು.
ಮಾಯ್ ದೆ ದೆವುಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಜೆರಾಲ್ಡ್ ಡಿಕೋಸ್ಟ, ಶಿಕ್ಷಕ ಶಿಕ್ಷಕೇತರ ವೃಂದ, ಶಾಲಾ ವಿದ್ಯಾರ್ಥಿ ನಾಯಕ ಜೀತನ್ ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮದ ಆರಂಭವಾಯಿತು. ಶಾಲಾ ಮುಖ್ಯಗುರು ವಂ| ಮ್ಯಾಕ್ಸಿಮ್ ಡಿಸೋಜ ಮಾತನಾಡಿ ಶಿಕ್ಷಕರ ದಿನಾಚರಣೆಯ ಶುಭಾಶಯ ನೀಡಿದರು. ವಿದ್ಯಾರ್ಥಿನಿ ವಿಜೇತ ದಿನದ ಮಹತ್ವದ ಕುರಿತು ಮಾತನಾಡಿದರು. ಶಿಕ್ಷಕರಿಗೆ ಕಿರುಕಾಣಿಕೆ ನೀಡಲಾಯಿತು.
ಸನ್ಮಾನ: ವಲಯ ಮತ್ತು ತಾಲೂಕು ಮಟ್ಟದ ಟೇಬಲ್ ಟೆನ್ನಿಸ್ ಹಾಗೂ ಫುಟ್ಬಾಲ್ ಪಂದ್ಯಾಟದಲ್ಲಿ ಸ್ಪರ್ಧಿಸಿ ವಿಜೇತರಾದ ಹಾಗೂ ಜಿಲ್ಲಾಮಟ್ಟಕ್ಕೆ ಆಯ್ಕೆಯಾದ ವಿಜೇತರನ್ನು ಗೌರವಿಸಲಾಯಿತು. ಮುಖ್ಯ ಅತಿಥಿ ಸಂಸ್ಥೆಯ ಹಿರಿಯ ನಿವೃತ್ತಶಿಕ್ಷಕ ವಿಕ್ಟರ್ ಸಿರಿಲ್ ಲೋಬೊರವರನ್ನು ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು. ಶಿಕ್ಷಕ ಕ್ಲೆಮೆಂಟ್ ಪಿಂಟೊರವರು ಹಿರಿಯ ನಿವೃತ್ತ ಶಿಕ್ಷಕರ ಬಗ್ಗೆ ಮಾತನಾಡಿದರು.
ವಿದ್ಯಾರ್ಥಿ ನಾಯಕ ಜೀತನ್ ಸ್ವಾಗತಿಸಿ ಪ್ರಗ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಮೋನಿಷಾ ವಂದಿಸಿದರು.
ಹತ್ತನೆ ತರಗತಿಯ ವಿದ್ಯಾರ್ಥಿಗಳು ಕಾರ್ಯಕ್ರಮ ಆಯೋಜಿಸಿದ್ದರು. ಶಿಕ್ಷಕರಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಿ ಬಹುಮಾನ ವಿತರಿಸಲಾಯಿತು. ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ವರ್ಗದವರಿಗೆ, ಮುಖ್ಯ ಗುರರುಗಳಿಗೆ ಹಾಗೂ ಪೂಜ್ಯ ಸಂಚಾಲಕರಿಗೆ ಸಂಸ್ಥೆಯ ಪರವಾಗಿ ನೆನಪಿನ ಕಾಣಿಕೆ ನೀಡಲಾಯಿತು. ಹತ್ತನೇ ತರಗತಿಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.