ಸಂತ ವಿಕ್ಟರ್ ಪ್ರೌಢಶಾಲೆಯಲ್ಲಿ ತಾ| ಮಟ್ಟದ ವಿಜ್ಞಾನ ವಿಚಾರಗೋಷ್ಠಿ ಸ್ಪರ್ಧೆ

0

ಬಾಲ್ಯದಲ್ಲಿಯೇ ವಿಜ್ಞಾನದ ಬಗ್ಗೆ ತಿಳಿದುಕೊಳ್ಳಬೇಕು-ಲೋಕೇಶ್ ಎಸ್.ಆರ್.

ಪುತ್ತೂರು: ಕರ್ನಾಟಕ ರಾಜ್ಯ ಸರಕಾರ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಮತ್ತು ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆ ಪುತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ ತಾಲೂಕು ಮಟ್ಟದ ವಿಜ್ಞಾನ ವಿಚಾರಗೋಷ್ಠಿ ಸ್ಪರ್ಧೆ ಆಯೋಜಿಸಲಾಯಿತು.


ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್. ಆರ್. ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಈ ಯುಗ ವಿಜ್ಷಾನಿಗಳ ಯುಗವಾಗಿದೆ. ವಿಜ್ಞಾನದ ಅವಿಷ್ಕಾರಗಳು ಇನ್ನೂ ಮುಂದುವರೆಯಲು ಬಾಲ್ಯದಲ್ಲಿಯೇ ವಿಜ್ಞಾನದ ಬಗ್ಗೆ ತಿಳಿದುಕೊಳ್ಳಬೇಕು. ವಿಜ್ಞಾನ- ತಂತ್ರಜ್ಞಾನ ಆಗಾಗ ಬದಲಾಗುತ್ತಿರುತ್ತದೆ. ಈ ಬದಲಾವಣೆ ಎಷ್ಟೇ ಇದ್ದರೂ, ಜೀವನ ಶೈಲಿ ಬದಲಾಗಬಾರದು ಎಂದು ದೈನಂದಿನ ಜೀವನದ ಪ್ರಾಮುಖ್ಯತೆಯನ್ನು ತಿಳಿಸಿದರು. ತಾಲೂಕು ಕ್ಷೇತ್ರ ಶಿಕ್ಷಣ ಸಂಯೋಜಕಿ ಅಮೃತಾಕಲಾ ಮಾತನಾಡಿ ಸ್ಪರ್ಧಾ ನಿಯಮಗಳನ್ನು ವಿವರಿಸಿ ಶುಭಹಾರೈಸಿದರು. ಕ್ಷೇತ್ರ ಶಿಕ್ಷಣ ಸಂಯೋಜಕ ಹರಿಪ್ರಸಾದ್, ತೀರ್ಪುಗಾರರಾದ ವಿವೇಕಾನಂದ ಕಾಲೇಜಿನ ಉಪನ್ಯಾಸಕರಾದ ಡಾ|| ಶ್ರೀಶ ಭಟ್ ಹಾಗೂ ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನ ಕಂಪ್ಯೂಟರ್ ವಿಭಾಗದ ಉಪನ್ಯಾಸಕ ಆಶ್ಲೇಷ್, ಬಿ.ಐ.ಇ.ಆರ್.ಟಿ ತನುಜಾ, ಸಿಆರ್‌ಪಿ ಶಶಿಕಲಾ, ಶಾಲೆಯ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷೆ ಶ್ವೇತಾ ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರು ಪ್ರಾರ್ಥನಾ ಗೀತೆ ಹಾಡಿದರು. ಶಾಲಾ ಮುಖ್ಯಶಿಕ್ಷಕಿ ರೋಸಲಿನ್ ಲೋಬೊ ಸ್ವಾಗತಿಸಿದರು.

ಸ್ಪರ್ಧೆಯ ನಂತರ ಸಮಾರೋಪ ಕಾರ್ಯಕ್ರಮ ಜರುಗಿತು. ವಿಜೇತರಾದ ವಿದ್ಯಾರ್ಥಿಗಳಿಗೆ ಶಾಲಾ ಮುಖ್ಯ ಶಿಕ್ಷಕಿ ರೋಸಲಿನ್ ಲೋಬೋ ಪ್ರಶಸ್ತಿಪತ್ರ ವಿತರಿಸಿದರು. ಶಿಕ್ಷಕರಾದ ರೂಪಾ ಡಿಕೋಸ್ಟ, ಅನುಷಾ, ಸುನಿತಾ ಪಿಂಟೊ, ಭಾವನಾ ಸುಧೀರ್, ದಿಲೀಪ್ ಡಿಸೋಜ ಸಹಕರಿಸಿದರು. ಲೆನಿಟಾ ಮೊರಾಸ್ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕಿ ಹರಿಣಾಕ್ಷಿ ವಂದಿಸಿದರು.

ಒಟ್ಟು 17 ಶಾಲೆಗಳ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಕುವಿರ ಕೆ.ವಿ (ಅಂಬಿಕಾ ವಿದ್ಯಾಲಯ ಬಪ್ಪಳಿಗೆ) ಪ್ರಥಮ, ಅತೀತ್ ಹೆಚ್. ರೈ (ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಪುತ್ತೂರು) ದ್ವಿತೀಯ ಹಾಗೂ ನಝಿಹ ಪಿ. (ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆ ಪುತ್ತೂರು) ತೃತೀಯ ಸ್ಥಾನ ಗಳಿಸಿದರು.

LEAVE A REPLY

Please enter your comment!
Please enter your name here