ವಿಶ್ವವಿದ್ಯಾನಿಲಯ ಕಾಲೇಜು ನೆಲ್ಯಾಡಿಯಲ್ಲಿ ಜೀವನ ಕೌಶಲ್ಯ ಮತ್ತು ಸಾಮರ್ಥ್ಯ ವರ್ಧನೆ ತರಬೇತು ಕಾರ್ಯಾಗಾರ

0

ಪುತ್ತೂರು: ಜೇಸಿಐ ನೆಲ್ಯಾಡಿ (ಪ್ರಾಂತ್ಯ F ವಲಯ 15), ಮಹಿಳಾ ಜೇಸಿಐ ಹಾಗೂ ಜೂನಿಯರ್ ಜೇಸಿ ವಿಂಗ್ ವತಿಯಿಂದ ವಿಶ್ವವಿದ್ಯಾನಿಲಯ ಕಾಲೇಜು ನೆಲ್ಯಾಡಿಯಲ್ಲಿ, ಕಾಲೇಜಿನ ಎನ್ಎಸ್ಎಸ್ ಘಟಕದ ವತಿಯಿಂದ ವಿದ್ಯಾರ್ಥಿಗಳಿಗೆ ಜೀವನ ಕೌಶಲ್ಯ ಮತ್ತು ಸಾಮರ್ಥ್ಯ ವರ್ಧನೆ ತರಬೇತು ಕಾರ್ಯಾಗಾರವನ್ನು ಸೆ.10ರ ಬುಧವಾರದಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ತರಬೇತುದಾರರಾಗಿ JC Sen. ವೇಣುಗೋಪಾಲ ಎಸ್. ಜೆ., ರಾಷ್ಟ್ರೀಯ ತರಬೇತುದಾರರು, ಜೇಸಿಐ ಭಾರತ ಪಾಲ್ಗೊಂಡು, ಪ್ರಾಯೋಗಿಕವಾಗಿ ವಿದ್ಯಾರ್ಥಿಗಳಲ್ಲಿ ಜೀವನ ಸಾಧನೆಯತ್ತ ಸಾಗುವಲ್ಲಿ ಸ್ಪೂರ್ತಿ ತುಂಬಿದರು.

ಈ ಸಂದರ್ಭದಲ್ಲಿ ಕಾಲೇಜಿನ ಸಂಯೋಜಕರಾದ ಡಾ. ಸುರೇಶ್ ಉಪಸ್ಥಿತರಿದ್ದು, ತರಬೇತಿಯ ಮಹತ್ವದ ಬಗ್ಗೆ ತಿಳಿಸಿ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಶುಭಹಾರೈಸಿದರು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು JC.JFP ಸುಧಾಕರ ಶೆಟ್ಟಿ, ಅಧ್ಯಕ್ಷರು ನೆಲ್ಯಾಡಿ ಜೇಸಿಐ ಇವರು ವಹಿಸಿ, ಕಾರ್ಯಕ್ರಮದ ನಿರ್ವಹಣೆಯೊಂದಿಗೆ ಎಲ್ಲರನ್ನೂ ಸ್ವಾಗತಿಸಿದರು. ಶ್ರೀ ದಯಾನಂದ ಬಂಟ್ರಿಯಾಲ್ ಅವರು ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು. ಡಾ. ಸೀತಾರಾಮ ಪಿ, ಉಪನ್ಯಾಸಕರು, ಸರ್ವರಿಗೂ ಧನ್ಯವಾದಗಳನ್ನು ಸಮರ್ಪಿಸಿದರು. ವೇದಿಕೆಯಲ್ಲಿ JC ಪ್ರವೀಣಿ ಶೆಟ್ಟಿ, ಅಧ್ಯಕ್ಷರು ಮಹಿಳಾ ಜೇಸಿಐ, JC HGF ಸುಚಿತ್ರಾ ಬಂಟ್ರಿಯಾಲ್, ನಿಕಟಪೂರ್ವ ಅಧ್ಯಕ್ಷರು ಜೇಸಿಐ, JC ಸುಪ್ರಿತಾ ರವಿಚಂದ್ರ ಹೊಸವೊಕ್ಲು, ಜೊತೆ ಕಾರ್ಯದರ್ಶಿ, ಶ್ರುತಿ, ಎನ್ಎಸ್ಎಸ್ ಯೋಜನಾಧಿಕಾರಿ ವಿವಿ ಕಾಲೇಜು ನೆಲ್ಯಾಡಿ, JC ವಿನ್ಯಾಸ್ ಬಂಟ್ರಿಯಾಲ್, ಯೋಜನಾ ನಿರ್ದೇಶಕರು ಉಪಸ್ಥಿತರಿದ್ದರು. JC ರವಿಚಂದ್ರ ಹೊಸವೊಕ್ಲು, ಕಾಲೇಜಿನ ಬೋಧಕೇತರ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here