ದ.ಕ. ಮ್ಯೂಚುವಲ್ ಬೆನಿಫಿಟ್ ನಿಧಿ ವತಿಯಿಂದ ಶಿಕ್ಷಕರ ದಿನಾಚರಣೆ

0

ಪುತ್ತೂರು: ಭಾರತ ಸರಕಾರದ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಇದರ ಅಡಿಯಲ್ಲಿ ನೋಂದವಣೆಗೊಂಡಿರುವ ಬೊಳುವಾರು ಇನ್ ಲ್ಯಾಂಡ್ ಸಂಕೀರ್ಣದಲ್ಲಿ ವ್ಯವಹರಿಸುತ್ತಿರುವ ಹೆಸರಾಂತ ದಕ್ಷಿಣ ಕನ್ನಡ ಮ್ಯೂಚುವಲ್ ಬೆನಿಫಿಟ್ ನಿಧಿ ಲಿ ವತಿಯಿಂದ ಅಕ್ಷರ ಕಲಿಸಿ, ಅಜ್ಞಾನ ಅಳಿಸುವಂತಹ ಶಿಕ್ಷಕರಿಗೆ ಗೌರವ ಅರ್ಪಣೆ ಕಾರ್ಯವು ಅದ್ದೂರಿಯಾಗಿ ನಡೆಯಿತು.


ಕಾರ್ಯಕ್ರಮದ ಉದ್ಘಾಟನೆಯನ್ನು ವಾಗ್ಮಿ ಶ್ರೀಕೃಷ್ಣ ಉಪಾಧ್ಯಾಯ ದೀಪ ಪ್ರಜ್ವಲನೆ ನೆರವೇರಿಸೋ ಮೂಲಕ ಉದ್ಘಾಟಿಸಿರು. ಬಳಿಕ ಮಾತನಾಡಿದ ಅವರು ಆರೋಗ್ಯಕರ ಸಮಾಜ ನಿರ್ಮಾಣದ ಕಾರ್ಯದ ಜೊತೆಗೆ ಸದೃಢ ದೇಶವನ್ನು ನಿರ್ಮಾಣ ಮಾಡುವಂತವರು ಕೂಡ ಶಿಕ್ಷಕರು. ದೇಶವನ್ನು ರಕ್ಷಣೆ ಮಾಡಬಲ್ಲ ವೀರ ಯೋಧರಿಂದ ಹಿಡಿದು ವೈದ್ಯರು, ಎಂಜಿನಿಯರುಗಳು ಸಹಿತ ಇನ್ನೂ ಹಲವರು ಕ್ಷೇತ್ರಕ್ಕೆ ಉತ್ತಮ ವ್ಯಕ್ತಿಗಳನ್ನು ಸೃಷ್ಟಿಸಲು ಅಥವಾ ತಯಾರಿಸಲು ಕೇವಲ ಒಬ್ಬರು ಶಿಕ್ಷಕರಿಂದಲೇ ಮಾತ್ರ ಸಾಧ್ಯವೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ಶಿಕ್ಷಕರೆಂದರೇ ಬೇರು ಇದ್ದ ಹಾಗೇ, ಅದರಂತೆ ನಾವೆಲ್ಲರೂ ಕೊಂಬೆಗಳು ಎಂದು ತಿಳಿಸಿದ ಅವರು ಶಿಕ್ಷಕ ದಿನಾಚರಣೆ ಶುಭಾಶಯ ಕೋರಿ, ವಂದಿಸಿದರು.


ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ವಸಂತ ಮೂಲ್ಯ, ನಿವೃತ್ತ ಮುಖ್ಯಗುರುಗಳಾದ ಭಾಸ್ಕರ್ ಶೆಟ್ಟಿ ಮತ್ತು ನಾರಾಯಣ ಮಣಿಯಾಣಿ , ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮನ್ಮಥ ಶೆಟ್ಟಿ ವೇದಿಕೆಯಲ್ಲಿ ಹಾಜರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಪುನೀತ್ ವಿ.ಜೆ. ವಹಿಸಿ, ಅತಿಥಿಗಳನ್ನು ಸ್ವಾಗತಿಸಿ, ಬರಮಾಡಿಕೊಂಡರು. ಸಿಬ್ಬಂದಿ ಬಿಂದ್ಯಶ್ರೀ ಹಾಗೂ ಸುಶ್ಮೀತಾ ಪ್ರಾರ್ಥನೆ ನೆರವೇರಿಸಿ, ಪುನೀತ್ ವಿ.ಜೆ ವಂದಿಸಿದರು. ಪೂಜಾ ಜಿ, ಅರ್ಪಿತಾ ಕೆ.ಪಿ, ಅಶ್ವಿತ್ ವಿ, ವೀಕ್ಷಿತಾ ಮತ್ತು ರಕ್ಷಿತಾ ಸಹಕಾರ ನೀಡಿದರು.
ಪುನೀತ್ ಕುಮಾರ್ ಕೆ ವಿ ಕಾರ್ಯಕ್ರಮ ನಿರೂಪಣೆ ಮಾಡಿಕೊಟ್ಟರು.

ಠೇವಣಾತಿಗಳ ಮೇಲೆ 12.5% ಬಡ್ಡಿ

ದ.ಕ.ಮ್ಯೂಚುವಲ್ ಬೆನಿಫಿಟ್ ನಿಧಿಯು ಶಿಕ್ಷಕರಿಗಾಗಿ ನಿಶ್ಚಿತ ಠೇವಣಿಗಳ ಮೇಲೆ ವಾರ್ಷಿಕ ಬಡ್ಡಿ ದರ 12% ಹಾಗೂ ಹಿರಿಯ ನಾಗರಿಕರಿಗೆ 12.5% ಸಂಸ್ಥೆ ಘೋಷಣೆ ಮಾಡಿರುವುದು ಮಾತ್ರವಲ್ಲದೇ, ಅದೃಷ್ಟವಂತ ಐದು ಗ್ರಾಹಕರಿಗೆ ಆಕರ್ಷಕ ಬಹುಮಾನವು ಸಿಗಲಿದೆಯೆಂದು ಶಾಖೆಯ ಅಧ್ಯಕ್ಷರಾದ ಪುನೀತ್ ವಿ.ಜೆ ಮಾಹಿತಿ ನೀಡಿದರು. ಹೆಚ್ಚಿನ ಮಾಹಿತಿ ಬೇಕಾದಲ್ಲಿ 8951658767 / 9980258273 ಕರೆ ಮಾಡುವಂತೆ ಅವರು ವಿನಂತಿಸಿದರು.

LEAVE A REPLY

Please enter your comment!
Please enter your name here