ಉಪ್ಪಿನಂಗಡಿ: ಉಪ್ಪಿನಂಗಡಿ ಸವಿ ಇಲೆಕ್ಟ್ರಾನಿಕ್ಸ್ ವಾರ್ಷಿಕೋತ್ಸವದ ಸವಿನೆನಪಿಗಾಗಿ ಆಯೋಜಿಸಲಾದ ಲಕ್ಕಿ ಕೂಪನ್ ಪ್ರಥಮ ಬಹುಮಾನ 5 ಗ್ರಾಂ ಗೋಲ್ಡ್ ವಿಜೇತರಾದ ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಶಾರದಾ ರಾಜೀವ್ ರೈ ಮುಗೆರೋಡಿ ಅವರಿಗೆ ಅ.27 ರಂದು ಬಹುಮಾನ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಸವಿ ಎಲೆಕ್ಟ್ರಾನಿಕ್ಸ್ ಮಾಲಕರಾದ ನವೀನ್ ಕುಮಾರ್, ಪ್ರಗತಿ ಎಲೆಕ್ಟ್ರಿಕಲ್ ಮಾಲಕರಾದ ರಾಘವ ಗೌಡ, ಸವಿ ಫೂಟ್ ವೇರ್ ಮಾಲಕರಾದ ಬಾಲಕೃಷ್ಣ ಗೌಡ ಮುಗೇರಡ್ಕ, ಸಿಬ್ಬಂದಿಗಳು ಹಾಗೂ ಗ್ರಾಹಕರು ಉಪಸ್ಥಿತರಿದ್ದರು. ಬಹುಮಾನ ವಿಜೇತರಿಗೆ ಅಭಿನಂದನೆ ಸಲ್ಲಿಸಿ, ಗ್ರಾಹಕರ ಸಹಕಾರಕ್ಕೆ ಮಾಲಕರು ಕೃತಜ್ಞತೆ ಸಲ್ಲಿಸಿದರು.
