ಬೆಟ್ಟಂಪಾಡಿ: ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರೋವರ್ಸ್ ಮತ್ತು ರೇಂಜರ್ಸ್ ಘಟಕದ ಉದ್ಘಾಟನಾ ಸಮಾರಂಭವು ಸೆ. 11ರಂದು ನಡೆಯಿತು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ದಕ್ಷಿಣ ಕನ್ನಡ ಜಿಲ್ಲೆಯ ಸಹಾಯಕ ರಾಜ್ಯ ಸಂಘಟನಾ ಆಯುಕ್ತ ಭರತ್ ರಾಜ್. ಕೆ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಘಟಕವನ್ನು ಉದ್ಘಾಟಿಸಿ ರೋವರ್ಸ್ ಮತ್ತು ರೇಂಜರ್ಸ್ ನ ಧ್ಯೇಯೋದ್ದೇಶ, ಚಟುವಟಿಕೆಗಳು, ನಿಪ್ಪುನ್, ರಾಜ್ಯಪುರಸ್ಕಾರ ಪರೀಕ್ಷೆ ಮತ್ತು ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು.
ಪ್ರಭಾರ ಪ್ರಾಂಶುಪಾಲ ಡಾ. ಸುಬ್ರಹ್ಮಣ್ಯ ಕೆ ಅಧ್ಯಕ್ಷತೆ ವಹಿಸಿ ಪ್ರಾಕೃತಿಕ ವಿಕೋಪಗಳ ಸನ್ನಿವೇಶದಲ್ಲಿ ರೋವರ್ಸ್ ರೇಂಜರ್ಸ್ ನ ಗಮನಾರ್ಹ ಸೇವೆಗಳನ್ನು ಸ್ಮರಿಸಿ ಘಟಕದ ಧ್ಯೇಯೋದ್ದೇಶಗಳನ್ನರಿತು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಿ ಎಂದು ಹೇಳಿದರು.
ರೇಂಜರ್ಸ್ ಲೀಡರ್ ಪ್ರೊ. ಮಂಜುಳಾ ದೇವಿ ಪ್ರಾಸ್ತವಿಕವಾಗಿ ಮಾತಾಡಿದರು. ರೋವರ್ಸ್ ಲೀಡರ್ ಡಾ. ಪೊಡಿಯ, ಗ್ರಂಥಪಾಲಕ ಶ್ರೀ ರಾಮ ಕೆ, ಪ್ರೊ. ಅನಂತ ಭಟ್ ಉಪಸ್ಥಿತರಿದ್ದರು. ದಿವ್ಯ ಕುಮಾರಿ, ಪೂಜಾ ಮತ್ತು ದೀಕ್ಷಾ ಸ್ಕೌಟ್ ಮತ್ತು ಗೈಡ್ ಪ್ರಾರ್ಥಿಸಿದರು. ದಿವ್ಯ ಕುಮಾರಿ ಸ್ವಾಗತಿಸಿದರು. ಅಕ್ಷಯ್ ರೈ ವಂದಿಸಿದರು. ಪೂಜ್ಯ ಕಾರ್ಯಕ್ರಮ ನಿರೂಪಿಸಿದರು.