ಪ್ರಗತಿಪರ ಕೃಷಿಕ ಮೇಲೂರು ನಾಣ್ಯಪ್ಪ ಪೂಜಾರಿಯವರಿಗೆ ನುಡಿ ನಮನ

0

ಪುತ್ತೂರು: ಇತ್ತೀಚೆಗೆ ಅಗಲಿದ  ಪ್ರಗತಿಪರ ಕೃಷಿಕ ಮೇಲೂರು ನಾಣ್ಯಪ್ಪ ಪೂಜಾರಿರವರ ಉತ್ತರ ಕ್ರಿಯಾದಿಗಳು ಹಾಗೂ ನುಡಿನಮನ ಕಾರ್ಯಕ್ರಮ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ  ದೇವಾಲಯದಲ್ಲಿ ನಡೆಯಿತು.

ಅಗಲಿದ ನಾಣ್ಯಪ್ಪ ಪೂಜಾರಿರವರ ಕುರಿತು ತಾಲೂಕು ಬಿಲ್ಲವ ಸಂಘದ ಜೊತೆ ಕಾರ್ಯದರ್ಶಿ ಪುರುಷೋತ್ತಮ ಪೂಜಾರಿ ಬರೆಂಬೊಟ್ಟುರವರು  ನುಡಿನಮನ ಸಲ್ಲಿಸಿದರು.

 ಈ ಸಂದರ್ಭದಲ್ಲಿ ಪ್ರಮುಖರಾದ ಮಹೇಂದ್ರ ವರ್ಮ ಮೇಲೂರು, ವರದ್ ರಾಜ್ ಎಂ ಉಪ್ಪಿನಂಗಡಿ, ದೇವಪ್ಪ ಪೂಜಾರಿ ಪಡ್ಪು, ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಉಪಾಧ್ಯಕ್ಷ ಅಶೋಕ್ ಕುಮಾರ್ ಪಡ್ಪು, ಉಪ್ಪಿನಂಗಡಿ ಮೂರ್ತೆದಾರರ ಸೇವಾ ಸಹಕಾರ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ಪಾಲೇರ್, ಉಪ್ಪಿನಂಗಡಿ ಗ್ರಾಮ ಪಂಚಾಯತ್ ಸದಸ್ಯ ಲೋಕೇಶ್ ಬೆತ್ತೋಡಿ, ಉಪ್ಪಿನಂಗಡಿ ವ್ಯವಸಾಯಿಕ ಸಹಕಾರ ಸಂಘದ ಉಪ ಪ್ರಧಾನ ವ್ಯವಸ್ಥಾಪಕ ಪುಷ್ಪರಾಜ್ ಶೆಟ್ಟಿ, ಯುವವಾಹಿನಿ ಉಪ್ಪಿನಂಗಡಿ ಘಟಕದ ಅಧ್ಯಕ್ಷ ನಾಣ್ಯಪ್ಪ ಕೋಟ್ಯಾನ್,  ನಾರಾಯಣ ಪೂಜಾರಿ, ಬಜತ್ತೂರು ಬಿಲ್ಲವ ಗ್ರಾಮ ಸಮಿತಿ ಅಧ್ಯಕ್ಷ ಸೋಮಸುಂದರ ಕೊಡಿಪಾನ, ನವೀನ್ ಪಡ್ಪು, ಚಂದ್ರಶೇಖರ ಕಾರೆದಕೋಡಿ, ರಮೇಶ್ ಸಾಂತ್ಯ ಮತ್ತಿತರ ಪ್ರಮುಖರು ಹಾಗೂ ಮೃತರ ಪತ್ನಿ, ಮಕ್ಕಳು, ಬಂಧು ಮಿತ್ರರು, ಕುಟುಂಬಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here