ಪುತ್ತೂರು: ಇನ್ಸ್ಟಿಟ್ಯೂಟ್ ಆಫ್ ಕರಾಟೆ ಎಂಡ್ ಅಲೈಡ್ ಆರ್ಟ್ಸ್ ನ ಪುತ್ತೂರು ಶಾಖೆಯ ಮುಖ್ಯ ತರಬೇತುದಾರರಾದ ಎಮ್. ಸುರೇಶ್ ಇವರಿಗೆ ಕರಾಟೆ ಬುಡೋಕಾನ್ ಇಂಟರ್ ನ್ಯಾಷನಲ್ ಸಂಸ್ಥೆಯ ವತಿಯಿಂದ ಸೆ.6ರಂದು ಉಡುಪಿಯಲ್ಲಿ ಬ್ಲಾಕ್ ಬೆಲ್ಟ್ ಎಂಟನೇ ಪದವಿಯನ್ನು ಪ್ರಧಾನ ಮಾಡಲಾಯಿತು.
ಬುಡೋಕಾನ್ ಕರಾಟೆ ಇಂಟರ್ ನ್ಯಾಷನಲ್ ಸಂಸ್ಥೆಯ ಸಭಾಪತಿ, ಜನಪ್ರಿಯ ಚಲನಚಿತ್ರ ನಟ ಸುಮನ್ ತಲ್ವಾರ್ ಇವರು ಪ್ರಮಾಣ ಪತ್ರವನ್ನು ನೀಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಆರಿಫ್. ಸಿ. ಪಿ, ಕೇರಳ ಇವರು ಉಪಸ್ಥಿತರಿದ್ದರು.
40 ವರ್ಷದ ಅವಧಿಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಇವರಲ್ಲಿ ಅಭ್ಯಾಸ ಮಾಡಿದ್ದು, ಅಂತರಾಷ್ಟ್ರೀಯ ಕರಾಟೆ ತೀರ್ಪುಗಾರ ಮತ್ತು ಅಧಿಕೃತ ಕರಾಟೆ ಮುಖ್ಯ ಪರೀಕ್ಷಕ ರಾಗಿದ್ದು, ಪ್ರಸ್ತುತ ರಾಧಾಕೃಷ್ಣ ಮಂದಿರ ಕರಾಟೆ ಶಾಖೆ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ವಿವೇಕಾನಂದ ಸೆಂಟ್ರಲ್ ಸ್ಕೂಲ್, ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆ, ಬೆಟ್ಟಂಪಾಡಿ, ಎವಿಜಿ ಆಂಗ್ಲ ಮಾಧ್ಯಮ ಶಾಲೆ ಮತ್ತು ಉಪ್ಪಿನಂಗಡಿ ಹಾಗೂ ಬೆಂಗಳೂರಿನಲ್ಲಿ ಇವರ ನೇತೃತ್ವದಲ್ಲಿ ಹಲವಾರು ಶಾಖೆಗಳು ನಡೆಯುತ್ತಿದೆ.