ಡೊನ್ ಬೊಸ್ಕೊ ಕ್ಲಬ್‌ನಿಂದ ಪ್ರತಿಭಾ ಪುರಸ್ಕಾರ

0

ಭವಿಷ್ಯದ ಕನಸನ್ನು ನನಸಾಗಿಸುವ ಪ್ರಾಮಾಣಿಕ ಪ್ರಯತ್ನವಿರಲಿ-ಸ್ಟೆಲ್ಲ ವರ್ಗೀಸ್

ಪುತ್ತೂರು: ಜೀವನದಲ್ಲಿ ಸೋಲು ಎದುರಾಗುವುದು ಸಹಜ. ಸತತ ಸೋಲಿಗೆ ಧೃತಿಗೆಡದೆ ಸೋಲನ್ನು ವಿಜಯಿಯಾಗಿಸುವ ಧೈರ್ಯದೊಂದಿಗೆ ವಿದ್ಯಾರ್ಥಿಗಳು ತಾನು ಕಂಡಂತಹ ಭವಿಷ್ಯದ ಕನಸನ್ನು ನನಸಾಗಿಸುವ ಪ್ರಾಮಾಣಿಕ ಪ್ರಯತ್ನವಿರಲಿ ಎಂದು ಪುತ್ತೂರು ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್‌ರವರು ಹೇಳಿದರು.


ಮಾಯಿದೆ ದೇವುಸ್ ಚರ್ಚ್‌ನ ಬಿಲ್ಡಿಂಗ್‌ನಲ್ಲಿ ಕಾರ್ಯಾಚರಿಸುತ್ತಿರುವ ಡೊನ್ ಬೊಸ್ಕೊ ಕ್ಲಬ್ ಕಳೆದ ಹಲವಾರು ವರ್ಷಗಳಿಂದ ಪುತ್ತೂರಿನ ವಿದ್ಯಾರ್ಥಿ ಸಾಧಕರನ್ನು ಮತ್ತು ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಾ ಬಂದಿದ್ದು ಸೆ.14 ರಂದು ಪೂರ್ವಾಹ್ನ ಮಾಯಿದೆ ದೇವುಸ್ ಚರ್ಚ್‌ನ ಸಭಾಂಗಣದಲ್ಲಿ ಜರಗಿದ ‘ಪ್ರತಿಭಾ ಪುರಸ್ಕಾರ-2025’ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ಒಳ್ಳೆಯದು ಯಾವುದು, ಕೆಟ್ಟದು ಯಾವುದು ಎಂದು ಅರಿಯುವ ಸಾಮರ್ಥ್ಯದ ಜೊತೆಗೆ ಜೀವನದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಜೀವನವನ್ನು ಉಜ್ವಲಗೊಳಿಸುವ ಸಕರಾತ್ಮಕತೆಯನ್ನು ಹೊಂದಿರಲಿ ಜೊತೆಗೆ ಜೀವನದುದ್ದಕ್ಜೂ ಸದೃಢ ಆರೋಗ್ಯವನ್ನು ಕಾಪಾಡಿಕೊಳ್ಳುವಂತಾಗಲಿ ಎಂದರು.


ಯುವಜನತೆ ಸಮಾಜದ ಸಂಪತ್ತು-ವಂ|ಲಾರೆನ್ಸ್ ಮಸ್ಕರೇನ್ಹಸ್:
ಗೌರವ ಉಪಸ್ಥಿತಿಯಾಗಿ ಮಾಯಿದೆ ದೇವುಸ್ ಚರ್ಚ್ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್ ಮಾತನಾಡಿ, ಡೊನ್ ಬೊಸ್ಕೊ ಕ್ಲಬ್ ಸದಸ್ಯರು ಯುವಜನತೆಯ ಶೈಕ್ಷಣಿಕ ವಿದ್ಯಾಭ್ಯಾಸವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹಲವಾರು ವರ್ಷಗಳಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರುತ್ತಿದೆ. ಯುವಜನತೆ ಸಮಾಜದ ಸಂಪತ್ತು ಆಗಬೇಕಾದರೆ ಯುವಜನತೆಯಲ್ಲಿ ಸಾಧಿಸಬೇಕೆನ್ನುವ ನಿರಂತರ ಶ್ರಮ, ತ್ಯಾಗ ಬೇಕಾಗಿದ್ದು ಇದಕ್ಕೆ ಸಹಾಯಕ ಅಯುಕ್ತೆ ಸ್ಟೆಲ್ಲ ವರ್ಗೀಸ್, ಅಬಕಾರಿ ನಿರೀಕ್ಷಕಿ ಜೋಸ್ಲಿನ್ ಫೆರ್ನಾಂಡೀಸ್‌ರವರು ಸಾಕ್ಷಿಯಾಗಿದ್ದಾರೆ ಎಂದರು.


ಜೀವನದಲ್ಲಿ ಶಿಸ್ತು, ಸರಳತೆ, ಪ್ರಾರ್ಥನೆ ಇರಲಿ-ಜೋಸ್ಲಿನ್ ಜೆ.ಫೆರ್ನಾಂಡೀಸ್:
ಪುತ್ತೂರು ಉಪ ವಿಭಾಗದ ಅಬಕಾರಿ ನಿರೀಕ್ಷಕಿ ಶ್ರೀಮತಿ ಜೋಸ್ಲಿನ್ ಜೆ.ಫೆರ್ನಾಂಡೀಸ್ ಮಾತನಾಡಿ, ಜೀವನದಲ್ಲಿ ಸಾಧನೆಗೈಯಲು, ಸಮಾಜದಲ್ಲಿ ಉನ್ನತ ಸ್ಥಾನವನ್ನು ಹೊಂದಲು ನಮ್ಮಲ್ಲಿ ಶಿಸ್ತಿನ, ಸರಳತೆಯ ಜೀವನವಿರಲಿ. ಹೆತ್ತವರು ನಮ್ಮ ರೋಲ್ ಮಾಡೆಲ್ ಎಂದು ತಿಳಿದುಕೊಂಡು ಮುಂದೆ ಸಾಗಬೇಕು ಜೊತೆಗೆ ನನಗೆ ಸಹನೆ, ಕ್ಷಮತೆಯನ್ನು ದಯಪಾಲಿಸು, ಜೀವನದಲ್ಲಿ ಸಮಸ್ಯೆಗಳು ಬಂದಾಗ ದೇವರು ಎಂದು ಕೈ ಬಿಡಬಾರದು ಎಂದು ದೇವರಲ್ಲಿ ಸದಾ ಪ್ರಾರ್ಥಿಸಬೇಕು ಎಂದರು.


ಎಸೆಸ್ಸೆಲ್ಸಿ ಟಾಪರ್ಸ್ ಅಭಿನಂದನೆ:
ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಗಳಿಸಿದ ವಿದ್ಯಾರ್ಥಿಗಳಾದ ಶಮ ಫಾತಿಮಾ, ಶ್ರೇಯ ಎಂ.ಆರ್, ಅಲೀನಾ ಕ್ರಿಸ್ಟಿನಾ ಪಿಂಟೊ, ರೆನಿಶಾ ಸೋನಲ್ ಮಸ್ಕರೇನ್ಹಸ್, ಜೋಸ್ವಿಟಾ ಪಾಯಿಸ್, ಜೊವಿಟಾ ವಿಯೋನ್ನಾ ಮೆಂಡೋನ್ಸಾ, ಆಂಜೆಲಿನಾ ಕೊರೆಯಾ, ಅಂಜಲಿ ಮರಿಯಾ ಒಲಿವೆರಾ, ಪ್ರಿಯಾ ವಿಜೇತ ಮಾಡ್ತಾ, ಸ್ವೀಡಲ್ ಡಿ’ಕುನ್ಹಾ, ವಿಪುನಾ ರೊಸಿಟಾ ಡಿ’ಸೋಜ, ಅನ್ಸಿಯಾ ಜೊಸ್ಫಿನಾ ಪಾಯಿಸ್(ಸೈಂಟ್ ವಿಕ್ಟರ್ ಬಾಲಿಕಾ ಪ್ರೌಢಶಾಲೆ), ಖತಿಜತುಲ್ ಶೈಮಾ, ಮರ್ವಿನ್ ವಿಶಾಲ್ ಪಿರೇರಾ, ಜೆನಿಶಾ ಕಾರ್ಮೆಲ್ ಕುಟಿನ್ಹಾ, ಕ್ರಿಸ್ಟನ್ ದೀಕ್ಷಿತ್ ತೋರಸ್, ರೋಶ್ನಿ ಆಂಟೊನೆಟ್ ಫೆರ್ನಾಂಡೀಸ್, ಮ್ಯೂರಿಯಲ್ ಗೊನ್ಸಾಲ್ವಿಸ್, ಲೆರನ್ ಪಸನ್ನ, ಲೆನಿಶಾ ಡಿ’ಸೋಜ(ಬೆಥನಿ ಆಂಗ್ಲ ಮಾಧ್ಯಮ ಪ್ರೌಢಶಾಲೆ), ಶ್ರೀಶ ಆರ್.ಎಸ್, ಜೇಡನ್ ಕುಟಿನ್ಹಾ, ಮನ್ವಿತ್ ಜೇಸನ್ ನೊರೋನ್ಹಾ, ಕ್ಲಿಪ್ಸನ್ ಮೊರಾಸ್(ಸಂತ ಫಿಲೋಮಿನಾ ಪ್ರೌಢಶಾಲೆ), ರೊನಾಲ್ಡ್ ಡಿ’ಸೋಜ(ಶಾಂತಿನಗರ ಸರಕಾರಿ ಪ್ರೌಢಶಾಲೆ), ಅಲ್ರಿನ್ ಶಾನ್ ಗೊನ್ಸಾಲ್ವಿಸ್(ಸುದಾನ ಪ್ರೌಢಶಾಲೆ)ರವರುಗಳನ್ನು ಗುರುತಿಸಿ ಅಭಿನಂದಿಸಲಾಯಿತು.


ಪಿಯುಸಿ ಟಾಪರ್ಸ್ ಅಭಿನಂದನೆ:
ಪಿಯುಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಗಳಿಸಿದ ವಿದ್ಯಾರ್ಥಿಗಳಾದ ಮೆಲ್ಟನ್ ಜೋನ್ ಲೋಬೊ, ಶಾಲೋಮ್ ಜೊವಿಟ ಮಾಡ್ತಾ, ಕ್ಲೆರಿಸ್ಸ ಪ್ರೀಮಲ್ ಡಿ’ಅಲ್ಮೇಡ, ಪ್ರೀಮಾ ಡಿ’ಸೋಜ, ಜೆನಿಶಾ ಅನ್ನಾ ಕ್ರಾಸ್ತಾ, ರೆಮೋನಿ ಬಿ.ಮಾಡ್ತಾ, ರೋಯಿಸ್ಟನ್ ಡಿ’ಕುನ್ಹಾ, ಜೀವನ್ ಪ್ರೀತಂ ಸೆರಾವೋ, ಶಾಂತಿ ಪ್ರಿಯ ಅಂದ್ರಾದೆ(ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು), ರಚನಾ ಪಿಂಟೊ(ಅಂಬಿಕಾ ಪಿಯು ಕಾಲೇಜು), ಕ್ರಿಸ್ಟಲ್ ಜ್ಯೋತಿ ವಾಸ್(ಸಂತ ಅಲೋಶಿಯಸ್ ಪಿಯು ಕಾಲೇಜು), ಜೆನಿಶಾ ಕುಟಿನ್ಹಾ(ಸೈಂಟ್ ಆಗ್ನೇಸ್ ಪಿಯು ಕಾಲೇಜು)ರವರುಗಳನ್ನು ಗುರುತಿಸಿ ಅಭಿನಂದಿಸಲಾಯಿತು.


ಪದವಿ ಟಾಪರ್ಸ್ ಅಭಿನಂದನೆ:
ಪದವಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಗಳಿಸಿದ ವಿದ್ಯಾರ್ಥಿಗಳಾದ ಮೆಲಿಶಾ ಮಿನೇಜಸ್, ರಿಶಲ್ ಡಿ’ಕುನ್ಹಾ, ಡಿಯೋನ್ನಾ ಜೇನ್ ಮಿನೇಜಸ್, ದಿಶಾ ಪರ್ಲ್ ಮಸ್ಕರೇನ್ಹಸ್, ಜೋಯ್ಲಿನ್ ಮರಿಯಾ ಫೆರ್ನಾಂಡೀಸ್, ರವೀನಾ ಈಸ್ಟರ್ ಲೋಬೊ, ಜೊಹಾಸ್ ಹ್ಯಾಡ್ಲಿ ಫೆರ್ನಾಂಡೀಸ್(ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜು), ಸೀಮಾ ಡಿ’ಸೋಜ(ವಿವೇಕಾನಂದ ಕಾಲೇಜು), ರಿಯೋನಾ ಜೇನ್ ಡಿ’ಸೋಜ, ಪ್ರೀತೇಶ್ ಜೋಯಿಸ್ಟನ್ ಲೂವಿಸ್(ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜ್), ಲವೀಶಾ ಡಿ’ಕುನ್ಹಾ, ಆನಿಯ ರೋಸ್ಲಿನ್ ರೊಡ್ರಿಗಸ್, ಸುಜಲ್ ಜೋಯನ್ ಡಿ’ಸೋಜ(ಸೈಂಟ್ ಅಲೋಶಿಯಸ್ ಕಾಲೇಜು), ಅಲ್ವಿರಾ ಅನ್ಸಿಟಾ ಡಿ’ಸೋಜ(ಶ್ರೀನಿವಾಸ್ ಕಾಲೇಜು ಆಫ್ ಫಾರ್ಮಾಸಿ), ವೀರಾ ರೇಶ್ಮಾ ಡಿ’ಸೋಜ(ಎ.ವಿ.ಎಸ್ ಕಾಲೇಜ್ ಆಫ್ ಎಜ್ಯುಕೇಶನ್), ಜೆಸಿಂತಾ ಡಿ’ಸೋಜ (ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ), ಜೆಸ್ಸಿಕಾ ಕ್ಯಾರಲ್ ಡಿ’ಸೋಜ(ಫಾ.ಮುಲ್ಲರ್ ಕಾಲೇಜು ಆಫ್ ನರ್ಸಿಂಗ್), ಕ್ಯಾಲ್ವಿನ್ ಫೆಬಿಯನ್ ಮೊರಾಸ್(ವಿ.ಐ.ಟಿ ಬೋಪಾಲ್ ವಿಶ್ವವಿದ್ಯಾಲಯ, ಮಧ್ಯಪ್ರದೇಶ)ರವರುಗಳನ್ನು ಗುರುತಿಸಿ ಅಭಿನಂದಿಸಲಾಯಿತು.


ಸ್ನಾತಕೋತ್ತರ ಟಾಪರ್ಸ್ ಅಭಿನಂದನೆ:
ಸ್ನಾತಕೋತ್ತರ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಗಳಿಸಿದ ವಿದ್ಯಾರ್ಥಿಗಳಾದ ಜೋಸ್ನಾ ಪ್ರಿಯಾ ಲೂವಿಸ್(ಶ್ರೀನಿವಾಸ್ ಕಾಲೇಜು ಆಫ್ ಫಾರ್ಮಾಸಿ), ರೋಯ್ಡನ್ ಫ್ಲೋರಿನ್ ರೆಬೆಲ್ಲೋ(ಪಿ.ಇ.ಎಸ್ ವಿಶ್ವವಿದ್ಯಾಲಯ, ಬೆಂಗಳೂರು), ಮೆಲಿಟಾ ಪಿರೇರಾ(ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜು), ಲಿಶಾ ಜಾಸ್ಮಿನ್ ಮಾರ್ಟಿಸ್(ಮಂಗಳೂರು ವಿಶ್ವವಿದ್ಯಾಲಯ) ರವರುಗಳನ್ನು ಗುರುತಿಸಿ ಅಭಿನಂದಿಸಲಾಯಿತು.


ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಜೆರಾಲ್ಡ್ ಡಿ’ಕೋಸ್ಟ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಂಜಲಿ ಒಲಿವೆರಾ ಹಾಗೂ ಆನ್ಸಿಯ ಪಾಯಿಸ್ ಪ್ರಾರ್ಥಿಸಿದರು. ಕ್ಲಬ್ ಜೊತೆ ಕಾರ್ಯದರ್ಶಿ ವಾಲ್ಟರ್ ಸಿಕ್ವೇರಾ ಸ್ವಾಗತಿಸಿ, ಅಧ್ಯಕ್ಷ ಅಂತೋನಿ ಒಲಿವೆರಾರವರು ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಮುಖ್ಯ ಅತಿಥಿಗಳ ಪರಿಚಯವನ್ನು ಕಾರ್ಯದರ್ಶಿ ಅನಿಲ್ ಪಾಯಿಸ್, ಹಿರಿಯ ಸದಸ್ಯ ಜ್ಯೋ ಡಿ’ಸೋಜರವರು ನೀಡಿದರು. ಪ್ರತಿಭಾನ್ವಿತರ ಹೆಸರನ್ನು ರೋಹನ್ ಡಾಯಸ್, ಸಿಲ್ವೆಸ್ಟರ್ ಡಿ’ಸೋಜ, ವಿಕ್ಟರ್ ಪಿಂಟೊ, ಮೆಲ್ವಿನ್ ಪಾಯಿಸ್, ವಿನಿಲ್ ಡಿ’ಸೋಜರವರು ಓದಿದರು. ಕ್ಲಬ್ ಹಿರಿಯ ಸದಸ್ಯ ಇನಾಸ್ ಗೊನ್ಸಾಲ್ವಿಸ್ ಕಾರ್ಯಕ್ರಮ ನಿರೂಪಿಸಿದರು.

ಗೋಲ್ಡನ್ ಬುಕ್ ಆಫ್ ರೆಕಾರ್ಡ್
ರೆಮೋನಾ ಪಿರೇರಾರವರಿಗೆ ಸನ್ಮಾನ..

ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನ ಅಂತಿಮ ಬಿಎ ವಿದ್ಯಾರ್ಥಿನಿ, ಸುಮಾರು 20 ವರ್ಷ ಹರೆಯದ ಯುವ ಪ್ರತಿಭೆ, ಭಾರತೀಯ ಶಾಸ್ತ್ರೀಯ ನೃತ್ಯವನ್ನು ನಿರಂತರ 170 ಗಂಟೆಗಳ ಕಾಲ ನೃತ್ಯ ಮಾಡುವ ಮೂಲಕ ದೇಶ-ವಿದೇಶಗಳಲ್ಲಿ ವಿಶ್ವದಾಖಲೆ ನಿರ್ಮಿಸಿ ಗೋಲ್ಡನ್ ಬುಕ್ ಆಫ್ ರೆಕಾರ್ಡ್‌ನಲ್ಲಿ ಹೆಸರು ದಾಖಲಿಸಿದ ರೆಮೋನಾ ಪಿರೇರಾರವರನ್ನು ಈ ಸಂದರ್ಭದಲ್ಲಿ ಕ್ಲಬ್ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು.

ರ‍್ಯಾಂಕ್ ವಿಜೇತರಿಗೆ ಅಭಿನಂದನೆ..
2024-25ನೇ ಸಾಲಿನಲ್ಲಿ ನಡೆದ ಪರೀಕ್ಷೆಯಲ್ಲಿ ರ‍್ಯಾಂಕ್ ಗಳಿಸಿದ ವಿದ್ಯಾರ್ಥಿಗಳಾದ ಸೈಂಟ್ ಅಲೋಶಿಯಸ್ ಸ್ವಾಯತ್ತ ಕಾಲೇಜಿನ ರೆನಿಟಾ ಮೆಲ್ರಿಯ ಲೋಬೊ(ಪ್ರಥಮ ರ‍್ಯಾಂಕ್-ಎಂಬಿಎ), ಮರ್ಲಿನ್ ಲವಿಶಾ ಮೊಂತೇರೊ(4ನೇ ರ‍್ಯಾಂಕ್-ಎಂಬಿಎ), ಸಂತ ಫಿಲೋಮಿನಾ ಪಿಯು ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ಆನ್ಸಿನಾ ರೆಜಿ, ಅದಿತಿ ಡಿ, ನೀತಿ ಎನ್.ಬಿ, ಎಂ.ದೀಪಾ ನಾಯಕ್, ಫಿದಾ ಹಲೀಮಾ(ಎಲ್ಲರೂ 9ನೇ ರ‍್ಯಾಂಕ್)ರವರುಗಳನ್ನು ಗುರುತಿಸಿ ಅಭಿನಂದಿಸಲಾಯಿತು.

LEAVE A REPLY

Please enter your comment!
Please enter your name here