ಪುತ್ತೂರು: ಕಳೆದ ಜೂನ್ ಜುಲೈ ತಿಂಗಳಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯವರು ನಡೆಸಿದ ಗಣಕಯಂತ್ರ ಪರೀಕ್ಷೆಯಲ್ಲಿ ದರ್ಬೆಯ ಲಕ್ಷ್ಮಿ ಟೈಪರೇಟಿಂಗ್ ಮತ್ತು ಕಂಪ್ಯೂಟರ್ ಸಂಸ್ಥೆಗೆ ಶೇಕಡ 100 ಫಲಿತಾಂಶ ಲಭಿಸಿದೆ.
ಸಂಸ್ಥೆಯಿಂದ ಆಫೀಸ್ ಆಟೋಮೇಶನ್ ಪರೀಕ್ಷೆಗೆ ಹಾಜರಾದ 21 ವಿದ್ಯಾರ್ಥಿಗಳಲ್ಲಿ ಸನ್ಮತಿ,ಎಸ್ ಜೋಶ್ನ ಡಿ ಕೋಸ್ಟ,ಫಾತಿಮಾ, ಫಾತಿಮತ್ ರಫಿಯಾ ರವರು ಡಿಸ್ಟಿಂಕ್ಷನ್ ನಲ್ಲಿ ಹಾಗೂ 17 ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದಾರೆ ಮತ್ತು ಟೈಪ್ ರೈಟಿಂಗ್ ಪರೀಕ್ಷೆಯಲ್ಲಿ ಶೇಕಡ 100 ಫಲಿತಾಂಶ ಲಭಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.