ಪುತ್ತೂರು: ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಕಿನ್ನಿಗೋಳಿ ಪೊಂಪೈ ಪದವಿ ಪೂರ್ವ ಕಾಲೇಜಿನ ಸಹಯೋಗದಲ್ಲಿ ಪೊಂಪೈ ಕಾಲೇಜು ಕ್ರೀಡಾಂಗಣದಲ್ಲಿ ಸೆ.13 ರಂದು ನಡೆದ ಜಿಲ್ಲಾ ಮಟ್ಟದ ಬಾಲಕಿಯರ ವಾಲಿಬಾಲ್ ಪಂದ್ಯಾಟದಲ್ಲಿ ಪುತ್ತೂರು ತಾಲೂಕಿನ ಕುಂಬ್ರ ಸರಕಾರಿ ಪದವಿ ಪೂರ್ವ ಕಾಲೇಜು ತೃತೀಯ ಸ್ಥಾನ ಪಡೆದಿರುತ್ತದೆ.
ತಂಡದಲ್ಲಿ ಪ್ರಥಮ ವಿಜ್ಞಾನ ವಿಭಾಗದ ದೀಕ್ಷಾ ಬಿ ಮತ್ತು ಜೆಸ್ಮಿತ, ದ್ವಿತೀಯ ವಿಜ್ಞಾನ ವಿಭಾಗದ ಭವ್ಯಶ್ರೀ, ನಯನಶ್ರೀ, ದ್ವಿತೀಯ ಕಲಾ ವಿಭಾಗದ ಕೆ.ಎಸ್ ಹರ್ಷ, ಎಂ.ಎನ್ ರಿತೀಕ, ಭೀಷ್ಮ ಭಾಗವಹಿಸಿದ್ದರು. ಈ ಪಂದ್ಯಾಟದಲ್ಲಿ ಪ್ರಥಮ ವಿಜ್ಞಾನ ವಿಭಾಗದ ದೀಕ್ಷಾ ಬಿ. ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ತಂಡವು ಕಾಲೇಜಿನ ಶ್ರೀಮತಿ ಹರ್ಷಿತಾ ಎನ್, ಶ್ರೀಮತಿ ಆಶಾಲತಾ ಹಾಗೂ ತರಬೇತುದಾರ ಮನೋಜ್ ಕುಂಬ್ರರವರ ನೇತೃತ್ವದಲ್ಲಿ ತರಬೇತಿಯನ್ನು ಪಡೆದಿರುತ್ತದೆ ಎಂದು ಕಾಲೇಜು ಪ್ರಕಟಣೆ ತಿಳಿಸಿದೆ.