ಪುತ್ತೂರು: ವಿಟ್ಲ ಸಮೀಪದ ಉಕ್ಕುಡ ನಿವಾಸಿ, ಲೋಕೋಪಯೋಗಿ ಇಲಾಖೆಯ ನಿವೃತ್ತ ಇಂಜಿನಿಯರ್ ಯು.ಪಿ.ಜಯರಾಮ (86ವ.)ರವರು ಅಲ್ಪಕಾಲದ ಅಸೌಖ್ಯದಿಂದ ಸೆ.15ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಇವರು ವಿಟ್ಲ ಶ್ರೀಪಂಚಲಿಂಗೇಶ್ವರ ದೇವಾಲಯದ ಆಡಳಿತ ಮಂಡಳಿಯ ಕಾರ್ಯದರ್ಶಿಯಾಗಿ, ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ, ವಲಯಾಧ್ಯಕ್ಷರಾಗಿ, ಉಕ್ಕುಡ ಭಜನಾ ಮಂದಿರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಸಿನಿಮಾ ಉದ್ಯಮ ರಂಗದಲ್ಲಿಯೂ ತೊಡಗಿಸಿಕೊಂಡಿದ್ದ ಇವರು ವಿಟ್ಲ, ಪುತ್ತೂರು, ಸುಳ್ಯ, ವಿರಾಜಪೇಟೆ ಹಾಗೂ ಕಾಸರಗೋಡಿನಲ್ಲಿ ಸಿನಿಮಾ ಮಂದಿರ ಸ್ಥಾಪಿಸಿದ್ದರು. ಅಲ್ಲದೆ ಪ್ರಗತಿಪರ ಕೃಷಿಕರೂ ಆಗಿದ್ದರು.
ಮೃತರ ಅಂತ್ಯಕ್ರಿಯೆ ಸೆ.17ರಂದು ಬುಧವಾರ ಉಕ್ಕುಡ ಸ್ವಗೃಹದಲ್ಲಿ ನಡೆಯಲಿದೆ. ಮೃತರು ಪತ್ನಿ ಶಾಂತ, ಪುತ್ರಿಯರಾದ ನೀಮಾ, ನಿವಿತಾ, ಪುತ್ರ ಡಾ.ಶರಣ್ರವರನ್ನು ಅಗಲಿದ್ದಾರೆ.