ಆಲಂಕಾರು: ಶ್ರೀ ದುರ್ಗಾಂಬಾ ಕಲಾಸಂಗಮ ಶ್ರೀ ಕ್ಷೇತ್ರ ಶರವೂರು ಇದರ ವತಿಯಿಂದ ಭಕ್ತರ ಇಷ್ಟಾರ್ಥ ಸಿದ್ಧಿಗಾಗಿ ಚಕ್ರಗ್ರಹಣ ತಾಳಮದ್ದಳೆ ಸೆ.13ರಂದು ಸಂಜೆ ನಡೆಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಗೋಪಾಲ ಭಟ್ ನೈಮಿಷ, ಡಿ.ಕೆ.ಆಚಾರ್ಯ ಹಳೆನೇರೆಂಕಿ, ಚೆಂಡೆ ಮದ್ದಳೆಯಲ್ಲಿ ಚಂದ್ರ ದೇವಾಡಿಗ ನಗ್ರಿ, ಮೋಹನ ಶರವೂರು, ಮುಮ್ಮೆಳದಲ್ಲಿ ದಿವಾಕರ ಆಚಾರ್ಯ ಹಳೆನೇರೆಂಕಿ (ಕೌರವ), ಅಮ್ಮಿ ಗೌಡ ನಾಲ್ಗುತ್ತುಬಲ್ಯ (ದ್ರೋಣ), ಗೀತಾ ಕುದ್ವಣ್ಣಾಯ, ಜಯರಾಂ ಗೌಡ ಬಲ್ಯ, ರಾಘವೇಂದ್ರ ಭಟ್ ತೋಟಂತಿಲ (ಭೀಷ್ಮ ), ರಾಮ್ ಪ್ರಕಾಶ್ ಕೊಡಂಗೆ (ಅಭಿಮನ್ಯು), ಗುರು ಪ್ರಸಾದ್ ಆಲಂಕಾರು (ಕೃಷ್ಣ), ರಾಮ್ಪ್ರಸಾದ್ ಆಲಂಕಾರು (ಅರ್ಜುನ) ಸಹಕರಿಸಿದರು. ಯಾದವೇಂದ್ರ ರಾವ್ ಶರವೂರು ಆಲಂಕಾರು ಹಾಗೂ ಶೋಭಾ ಸುಬ್ರಹ್ಮಣ್ಯ ರಾವ್ ಶರವೂರು ಬೆಂಗಳೂರು ಸೇವಾರ್ಥಿಗಳಾಗಿ ಸಹಕರಿಸಿದರು.
ಶ್ರೀ ದುರ್ಗಾಂಬಾ ಕಲಾಸಂಗಮದ ಕಾರ್ಯದರ್ಶಿ ದಿವಾಕರ ಆಚಾರ್ಯ ಸ್ವಾಗತಿಸಿ, ಕೋಶಾಧಿಕಾರಿ ರಾಮ್ ಪ್ರಸಾದ್ ಆಲಂಕಾರು ವಂದಿಸಿದರು. ಸೇವಾರ್ಥಿಗಳಿಗೆ ದೇವಸ್ಥಾನದ ವತಿಯಿಂದ ಸೇವಾ ಪ್ರಸಾದ ನೀಡಲಾಯಿತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಸುಬ್ರಹ್ಮಣ್ಯ ರಾವ್ ನಗ್ರಿ ಹಾಗೂ ಸಮಿತಿಯ ಸದಸ್ಯರು, ಜೀರ್ಣೋದ್ಧಾರ ಸಮಿತಿಯ ಸದಸ್ಯರು, ದೇವಸ್ಥಾನದ ಸಿಬ್ಬಂದಿ ವರ್ಗದವರು, ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.