ನೆಲ್ಯಾಡಿ: ಪುತ್ತೂರು ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘದ ಮುಂದಿನ 5 ವರ್ಷಗಳ ಅವಧಿಯ ಆಡಳಿತ ಮಂಡಳಿಗೆ ನಿರ್ದೇಶಕರ ಅವಿರೋಧ ಆಯ್ಕೆ ನಡೆದಿದೆ.

15 ಸದಸ್ಯ ಬಲದ ಆಡಳಿತ ಮಂಡಳಿಯ 8 ಸಾಮಾನ್ಯ ಸ್ಥಾನಕ್ಕೆ ಪ್ರಸಾದ್ ಕೌಶಲ್ ಶೆಟ್ಟಿ ಬಿ.ರೈ ಬಂಗ್ಲೆ ಕೊಂಬೆಟ್ಟು ಪುತ್ತೂರು, ರೋಯಿ ಅಬ್ರಹಾಂ ಪದವು ಕುಂತೂರು, ಕೇಶವ ಭಂಡಾರಿ ಕೆ.ಕೈಪ ಕೋಡಿಂಬಾಡಿ, ಜಾರ್ಜ್ ಕುಟ್ಟಿ ಸಿ.ನಿಡ್ಯಡ್ಕ ಇಚ್ಲಂಪಾಡಿ, ರಮೇಶ್ ಕಲ್ಪುರೆ 102 ನೆಕ್ಕಿಲಾಡಿ ಮರ್ದಾಳ, ವ್ಯಾಸ ಎನ್.ವಿ. ನೆಕ್ಕರ್ಲ ಕೌಕ್ರಾಡಿ, ಶ್ರೀರಾಮ ಪಕ್ಕಳ ಕರ್ನೂರುಗುತ್ತು ನೆಟ್ಟಣಿಗೆ ಮುಡ್ನೂರು, ಸತ್ಯಾನಂದ ಬಿ.ಬೊಳ್ಳಾಜೆ ನೂಜಿಬಾಳ್ತಿಲ, ಹಿಂದುಳಿದ ಪ್ರವರ್ಗ ಎ 2 ಸ್ಥಾನಕ್ಕೆ ಗಿರೀಶ್ ಸಾಲಿಯಾನ್ ಬಿ. ಬದನೆ ಇಚ್ಲಂಪಾಡಿ, ಜಯರಾಮ ಬಿ.ಬಾಣಜಾಲು ಕೌಕ್ರಾಡಿ, ಮಹಿಳಾ ಮೀಸಲು 2 ಸ್ಥಾನಕ್ಕೆ ಅರುಣಾಕ್ಷಿ ಅಕ್ಷಯ ನಿಲಯ ಪುಚ್ಚೇರಿ ನೆಲ್ಯಾಡಿ, ಗ್ರೇಸಿ ನೈನಾನ್ ಸ್ನೇಹ ಸದನ ನೆಲ್ಯಾಡಿ ಹಾಗೂ ಸಹಕಾರ ಸಂಘಗಳ ಕ್ಷೇತ್ರಕ್ಕೆ ಮೀಸಲಾದ 1 ಸ್ಥಾನಕ್ಕೆ ಬನ್ನೂರು ರೈತರ ಸೇವಾ ಸಹಕಾರ ಸಂಘದ ನಿರ್ದೇಶಕ ಸುಭಾಸ್ ನಾಯಕ್ ನೆಕ್ರಾಜೆ ಕೋಡಿಂಬಾಡಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
2 ಸ್ಥಾನ ಖಾಲಿ:
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಮೀಸಲಾದ ತಲಾ 1 ಸ್ಥಾನಕ್ಕೆ ಯಾರೂ ನಾಮಪತ್ರ ಸಲ್ಲಿಸದೆ ಇದ್ದ ಹಿನ್ನೆಲೆಯಲ್ಲಿ ಎರಡೂ ಸ್ಥಾನಗಳು ಖಾಲಿಯಾಗಿವೆ.
ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಸೆ.9ರಂದು ಆರಂಭಗೊಂಡಿದ್ದು ಸೆ.13 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿತ್ತು. ಸೆ.14ರಂದು ನಾಮಪತ್ರಗಳ ಪರಿಶೀಲನೆ ನಡೆದಿತ್ತು. ಸೆ.15ರಂದು ಮಧ್ಯಾಹ್ನ 3 ಗಂಟೆ ನಾಮಪತ್ರ ಹಿಂತೆಗೆತಕ್ಕೆ ಕೊನೆಯ ದಿನವಾಗಿತ್ತು. ಎಲ್ಲಾ ಸ್ಥಾನಗಳಿಗೂ ಒಂದೊಂದೇ ನಾಮಪತ್ರ ಸಲ್ಲಿಕೆಯಾಗಿದ್ದು ಪರಿಶೀಲನೆ ವೇಳೆ ಎಲ್ಲಾ ನಾಮಪತ್ರಗಳ ಅಂಗೀಕಾರಗೊಂಡಿತ್ತು. ಈ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆ ನಡೆದಿದೆ.
ಮಂಗಳೂರು ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರರಾದ ತ್ರಿವೇಣಿ ರಾವ್ ಕೆ. ಚುನಾವಣಾ ಅಧಿಕಾರಿಯಾಗಿದ್ದರು. ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಶಿಪ್ರಭಾ ಕೆ. ಸಹಕರಿಸಿದರು.