ನಿಡ್ಪಳ್ಳಿ: ಶ್ರೀ ಶಾಂತದುರ್ಗಾ ದೇವಸ್ಥಾನ ಶ್ರೀ ಕ್ಷೇತ್ರ ನಿಡ್ಪಳ್ಳಿ ಇಲ್ಲಿಯ ದಸರಾ ಕಾರ್ಯಕ್ರಮದ ಪ್ರಯುಕ್ತ 8 ಜನರ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಸೆ.14ರಂದು ದೇವಸ್ಥಾನದ ವಠಾರದಲ್ಲಿ ನಡೆಯಿತು.

ಕೀರ್ತಿಶೇಷ ಜೀವಂದರ ಆರಿಗ ವೇದಿಕೆಯಲ್ಲಿ ವಿಜಯಾ ಬ್ಯಾಂಕ್ ನಿವೃತ್ತ ಪ್ರಭಂಧಕ ಸುಂದರ ಶೆಟ್ಟಿ ಮುಂಡೂರು ಪಂದ್ಯಾಟ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಶ್ರೀ ಶಾಂತದುರ್ಗಾ ದೇವಸ್ಥಾನದ ಆಡಳಿತ ಮಂಡಳಿ ಗೌರವಾಧ್ಯಕ್ಷ ಪ್ರಮೋದ್ ಆರಿಗ ನಿಡ್ಪಳ್ಳಿ ಗುತ್ತು, ನಿಡ್ಪಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ವೆಂಕಟ್ರಮಣ ಬೋರ್ಕರ್. ಬಿ, ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ನಾಗೇಶ ಗೌಡ, ಪಡುಮಲೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಕಾರ್ಯದರ್ಶಿ ಜನಾರ್ಧನ ಪೂಜಾರಿ ಪದಡ್ಕ, ಶ್ರೀ ಶಾಂತದುರ್ಗಾ ಟ್ರಸ್ಟ್ ಅಧ್ಯಕ್ಷ ರಾಧಾಕೃಷ್ಣ ರೈ ಆನಾಜೆ, ಗಂಗಾಧರ ರೈ ಮೇಗಿನಮನೆ ಪಡುಮಲೆ, ಬಾಲಚಂದ್ರ ರೈ ಆನಾಜೆ, ಪಾಣಾಜೆ ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಭಾರತಿ ಶಿವಪ್ಪ ಪೂಜಾರಿ ನುಳಿಯಾಲು, ಮಂಗಳೂರು ಕಾಸಿಯಾ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಅರುಣ್ ಪ್ರಸಾದ್ ರೈ ಮುಂಡೂರು, ದೇವಸ್ಥಾನದ ಆಡಳಿತ ಮಂಡಳಿ ಕಾರ್ಯದರ್ಶಿ ಮಂಜುನಾಥ ರೈ, ದೇವಸ್ಥಾನದ ಪ್ರಧಾನ ಅರ್ಚಕ ನವೀನ್ ದಿವಾಕರ ಹೆಬ್ಬಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಅವಿನಾಶ್ ರೈ, ಸತೀಶ್ ಶೆಟ್ಟಿ, ನಾಗೇಶ ಗೌಡ, ಬಾಬು ಪಾಟಾಳಿ ಕೂಟೇಲು, ಜನಾರ್ಧನ ಪೂಜಾರಿ ಪದಡ್ಕ, ದಿನೇಶ್ ಕುಮಾರ್ ಪಳಂಬೆ, ಆನಂದ ರೈ ನರೈಮಾರ್, ಗಂಗಾಧರ ಸಿ.ಎಚ್, ರಾಮಚಂದ್ರ ಮಣಿಯಾಣಿ ಬೊಳುಂಬುಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಪಾಣಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ರಾಧಾಕೃಷ್ಣ ರೈ ಪಟ್ಟೆ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಅಶೋಕ್ ಕುಮಾರ್ ರೈ ಪಂದ್ಯಾಟಕ್ಕೆ ಆಗಮಿಸಿ ಶುಭ ಹಾರೈಸಿದರು.
ಸತ್ಯನಾರಾಯಣ ಬೊಳುಂಬುಡೆ ಸ್ವಾಗತಿಸಿ ಶರತ್ ಕುಮಾರ್ ಪುಳಿತ್ತಡಿ ವಂದಿಸಿದರು. ಉದ್ಘೋಷಕ ನಯನ್ ಮಂಗಳೂರು ಕಾರ್ಯಕ್ರಮ ನಿರೂಪಿಸಿದರು.
ಫಲಿತಾಂಶ; ಶೈನ್ ಎಟೆಕರ್ ಪುಣಚ ಪ್ರಥಮ, ಮಹಾದೇವಿ ನಿಡ್ಪಳ್ಳಿ ದ್ವಿತೀಯ ಸ್ಥಾನ ಪಡೆದುಕೊಂಡರು. ಬೆಸ್ಟ್ ಬ್ಯಾಟ್ಮ್ಯಾನ್ ಶೈನ್ ಎಟೆಕರ್ ತಂಡದ ಲಿತಿನ್, ಬೆಸ್ಟ್ ಬೌಲರ್ ಶೈನ್ ಎಟೆಕರ್ ತಂಡದ ಅಭಿ, ಅಲ್ ರೌಂಡರ್ ಮಹಾದೇವಿ ತಂಡದ ನಿತಿನ್ ಪಡೆದುಕೊಂಡರು.ಪಂದ್ಯಾಟದಲ್ಲಿ ಸುಮಾರು 50 ತಂಡ ಭಾಗವಹಿಸಿದ್ದು ಇಡೀ ಜಿಲ್ಲೆಯಲ್ಲಿ ಇದೊಂದು ದಾಖಲೆಯ ಪಂದ್ಯಾಟವಾಗಿದೆ.ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.