ಪುತ್ತೂರು: ಡಾ. ಶಿವರಾಮ ಕಾರಂತ ಬಾಲವನ ಪುತ್ತೂರು ಇಲ್ಲಿನ ಶ್ರೀ ಸಾಯಿ ಕಲಾ ಯಕ್ಷ ಬಳಗದ ಸದಸ್ಯ , ಕಟ್ಟಾವು ಇನ್ಸೂರೆನ್ಸ್ ಸರ್ವೀಸಸ್ ನ ಉದ್ಯೋಗಿ , ಸಂದೇಶ್ ದೀಪ್ ರೈ ಇವರು “ನಾನಾ ನೀನಾ” ರಿಯಾಲಿಟಿ ಶೋಗೆ ಆಯ್ಕೆಗೊಂಡಿದ್ದಾರೆ.
ಬೆಂಗಳೂರಿನ ನಾನ್ ಸ್ಟಾಪ್ ಎಂಟರ್ಟೈನ್ಮೆಂಟ್ ಮೂಲಕ ಆಡಿಶನ್ ಕೊಟ್ಟು ಆಯ್ಕೆಯಾಗಿ, ಇದೀಗ ಓಟಿಟಿ ಪ್ಲಾಟ್ ಫಾರ್ಮ್ ನ ರಿಯಾಲಿಟಿ ಶೋಗೆ ಆಯ್ಕೆಯಾಗಿರುತ್ತಾರೆ. ಇವರು ಬಂಟ್ವಾಳ ತಾಲೂಕಿನ ಕಲ್ಲಂಗಳ ನಿವಾಸಿ ಕೃಷಿಕ, ಕೊರಗಪ್ಪ ರೈ ಕಲ್ಲಂಗಳಗುತ್ತು ಮತ್ತು ಲಲಿತ ರೈ ದಂಪತಿಗಳ ಪುತ್ರ.