ರೂ.3,04,20,891.88 ಲಾಭ, ಸದಸ್ಯರಿಗೆ ಶೇ. 15 ಡಿವಿಡೆಂಡ್
ಪುತ್ತೂರು: ಬೆಂಗಳೂರಿನ ಹಾವನೂರು ಬಡಾವಣೆಯ ಹೆಸರಘಟ್ಟ ಮುಖ್ಯರಸ್ತೆಯ ಸೌಂದರ್ಯ ಸೌಧದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿ, ಪುತ್ತೂರಿನ ಎಸ್‌ಬಿಬಿ ಸೆಂಟರ್ ನಲ್ಲಿ ಶಾಖೆಯನ್ನು ಹೊಂದಿರುವ ಸೌಂದರ್ಯ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಲಿಮಿಟೆಡ್ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ.14ರಂದು ಬೆಂಗಳೂರಿನ ಹಾವನೂರು ಬಡಾವಣೆಯಲ್ಲಿರುವ ಸೌಂದರ್ಯ ಶಾಲೆಯ ಆವರಣದಲ್ಲಿ ನಡೆಯಿತು.
ಸಹಕಾರಿಯ ಅಧ್ಯಕ್ಷ ಸೌಂದರ್ಯ ಪಿ.ಮಂಜಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ದೀಪಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಸೌಂದರ್ಯ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಲಿಮಿಟೆಡ್ 2024-25ನೇ ಸಾಲಿನಲ್ಲಿ ರೂ.288ಕೋಟಿಗೂ ಅಧಿಕ ವ್ಯವಹಾರ ನಡೆಸಿರೂ. 3,04,20,891.88 ಲಾಭ ಗಳಿಸಿದೆ. ಸದಸ್ಯರಿಗೆ 15% ಡಿವಿಡೆಂಡ್ ನೀಡಲಾಗುವುದು.
ವರ್ಷಾಂತ್ಯಕ್ಕೆ ಸಂಘದಲ್ಲಿ 6386ಸದಸ್ಯರಿದ್ದು ರೂ.1,40,14,600.00 ಪಾಲು ಬಂಡವಾಳವಿದೆ. ರೂ.141,29,74,679.66 ಠೇವಣಿ ಇದೆ. ದುಡಿಯುವ ಬಂಡವಾಳ ರೂ. 156,41,64,455.13 ಹೊಂದಿದೆ ಎಂದರು.
ಸಹಕಾರಿಯ ಉಪಾಧ್ಯಕ್ಷರಾದ ಸುನೀತಾ ಎಂ. ನಿರ್ದೇಶಕರಾದ ಕೀರ್ತನ್ ಕುಮಾರ್ ಎಂ, ಕೃಷ್ಣ ಶೆಟ್ಟಿ ಕೆ, ಚಿನ್ನಮ್ಮ ಪಿ. ಪಿ, ವರುಣ್ ಕುಮಾರ್ ಎಂ., ಆರುಣ್ ಕುಮಾರ್ ಹೆಚ್, ರಾಜಶೇಖರಮೂರ್ತಿ ಹೆಚ್. ಎಂ, ರಜನಿ ಪಿ. ಸೂರಿ, ಮಂಜುನಾಥ ಭಟ್, ಮುಖ್ಯಕಾರ್ಯನಿರ್ವಹಣಾಧಿಕಾರಿ ಹೇಮಂತ ಬಿ ವಿ, ಪುತ್ತೂರು ಶಾಖಾ ವ್ಯವಸ್ಥಾಪಕ ಶ್ಯಾಮಲಾ ಕೆ.,
ಚಿಕ್ಕಬಾಣಾವರ ಶಾಖಾ ವ್ಯವಸ್ಥಾಪಕರಾದ ಗಂಗಾತಿಲಕ್, ನೆಲಮಂಗಲ ಶಾಖಾ ವ್ಯವಸ್ಥಾಪಕ ಮಹಾಂತೇಶ್ ಎಂ. ನೆಗಳೂರು ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶೈಕ್ಷಣಿಕ ಸಾಧನೆಗಾಗಿ ಅತೀ ಹೆಚ್ಚು ಅಂಕಗಳಿಸಿದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಮುಖ್ಯಕಾರ್ಯನಿರ್ವಹಣಾಧಿಕಾರಿ ಹೇಮಂತ ಬಿ ವಿ, ವರದಿ ವಾಚಿಸಿದರು. ಸಿಬ್ಬಂದಿ ಭಾರ್ಗವಿ ಪ್ರಾರ್ಥಸಿದರು. ಪುತ್ತೂರು ಶಾಖಾ ಸಿಬ್ಬಂದಿ ಜಿನಿತ್ ಕೆ.ಕೆ. ಸ್ವಾಗತಿಸಿದರು. ಪ್ರಧಾನ ಶಾಖಾ ಸಿಬ್ಬಂದಿ ಶೃಂಗಾ ವಿ. ಮತ್ತು ಸ್ನೇಹ ಕಾರ್ಯಕ್ರಮ ನಿರೂಪಿದರು. ಪುತ್ತೂರು ಶಾಖಾ ಸಹಾಯಕ ವ್ಯವಸ್ಥಾಪಕರಾದ ಸುಧೀರ್ ಬಿ. ವಂದಿಸಿದರು.
ಸರ್ವ ಸದಸ್ಯರ ಸಹಕಾರದೊಂದಿಗೆ ಸಂಸ್ಥೆ ಬೆಳೆದಿದೆ

ಸರ್ವ ಸದಸ್ಯ ಬಾಂಧವರ ಸಹಕಾರದೊಂದಿಗೆ ಸೌಂದರ್ಯ ಸೌಹಾರ್ದ ಸಹಕಾರಿಯು ಅತ್ಯಲ್ಪ ಅವಧಿಯಲ್ಲೇ ಬಹಳಷ್ಟು ಎತ್ತರಕ್ಕೆ ಬೆಳೆದು ನಿಂತಿದೆ. ಪ್ರಧಾನ ಕಚೇರಿಗೆ ಸ್ವಂತ ನಿವೇಶನದಲ್ಲಿ ವ್ಯವಸ್ಥಿತವಾದ ಕಟ್ಟಡ ಸೌಂದರ್ಯ ಸೌಧ ವನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದೇವೆ. ಸದಸ್ಯರ ಆಶಯದಂತೆ ನಾಲ್ಕನೇ ಶಾಖೆಯನ್ನು ಚಿಕ್ಕಬಾಣಾವರದಲ್ಲಿ ಆರಂಭಿಸಿದ್ದೇವೆ. ನಮ್ಮ ಈ ಎಲ್ಲಾ ಬೆಳವಣಿಗೆಗೆ ಕಾರಣಕರ್ತರಾದ ಸದಸ್ಯ ಬಾಂಧವರಿಗೆ ನಾವುಗಳು ಆಭಾರಿಯಾಗಿದ್ದೇವೆ. ಮುಂದೆಯೂ ತಮ್ಮ ಎಲ್ಲಾ ಸಲಹೆ ಸರಕಾರವನ್ನು ಬಯಸುತ್ತಿದ್ದೇವೆ.
ಮಂಜಪ್ಪ ಪಿ.,ಅಧ್ಯಕ್ಷರು,ಸೌಂದರ್ಯ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಲಿಮಿಟೆಡ್
ಪುತ್ತೂರು ಶಾಖೆಯಲ್ಲಿ ರೂ. 46,75,014.00 ಲಾಭ
ಪುತ್ತೂರು ಶಾಖೆಯಲ್ಲಿ ಒಟ್ಟು 1398ಸದಸ್ಯರಿದ್ದು, ರೂ. 15,55,84,245.00 ಠೇವಣಿ ಇದೆ. ರೂ. 14,65,034,73.00 ಹೊರಬಾಕಿ ಸಾಲವಿದೆ. ಒಟ್ಟು 144ಕೋಟಿ ರೂಪಾಯಿಯ ವ್ಯವಹಾರ ನಡೆಸಿ, ರೂಪಾಯಿ 46,75,014.00 ಲಾಭಗಳಿಸಿದೆ. ಪುತ್ತೂರು ಶಾಖಾ ಸದಸ್ಯರಾದ ದೇವದಾಸ್ ಆಚಾರ್ಯರವರ ಪುತ್ರಿ ವಿದ್ಯಾಶ್ರೀರವರು ದ್ವಿತೀಯ ಪಿಯುಸಿಯಲ್ಲಿ ಅತ್ಯುತ್ತಮ ಅಂಕ ಪಡೆದು ಸಹಕಾರಿಯಿಂದ ಕೊಡಲ್ಪಡುವ ಪ್ರತಿಭಾ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.ಪುತ್ತೂರು ಶಾಖಾ ವ್ಯವಸ್ಥಾಪಕರಾಗಿ ಶ್ಯಾಮಲ ಕೆ., ಸಹಾಯಕ ವ್ಯವಸ್ಥಾಪಕರಾಗಿ ಸುಧೀರ್ ಬಿ., ಸಿಬ್ಬಂದಿಗಳಾಗಿ ಪ್ರಿಯದರ್ಶಿನಿ ನಿಶಾಕಿರಣ್, ಜಿನಿತ್ ಕೆ.ಕೆ., ಪವನ್ ಕುಮಾರ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ.