ಪುತ್ತೂರು: ಶ್ರೀ ರಾಮಕೃಷ್ಣ ಪ್ರೌಢಶಾಲೆ ಪುತ್ತೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು, ಲಿಯೋ ಕ್ಲಬ್ ಮತ್ತು ಇಂಟರಾಕ್ಟ್ ಕ್ಲಬ್ ಶ್ರೀ ರಾಮಕೃಷ್ಣ ಇವರ ಸಹಯೋಗದೊಂದಿಗೆ ಕನ್ನಡ ರಾಜ್ಯೋತ್ಸವದ ಸವಿನೆನಪಿಗಾಗಿ ಅಂತರ್ ಶಾಲಾ ವಿದ್ಯಾರ್ಥಿಗಳಿಗೆ ಪ್ರಬಂಧ ಬರೆಯುವ ಸ್ಪರ್ಧೆ ನ.9ರಂದು ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ನಡೆಯಲಿದೆ.
7 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗಾಗಿ ‘ಇಂದು ನಾ ಕಂಡ ಕರ್ನಾಟಕ!’ ಹಾಗೂ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗಾಗಿ “ಮುಂದಿನ ನನ್ನ ಕನಸಿನ ಕರ್ನಾಟಕ ಹೇಗಿರಬೇಕು?” ಎಂಬ ವಿಷಯದ ಬಗ್ಗೆ ಕನಿಷ್ಠ 450 ರಿಂದ 500 ಪದಗಳೊಳಗೆ ಇರಬೇಕು. ಪದ ಮಿತಿಯನ್ನು ಮೀರಬಾರದು. ಸ್ಪರ್ಧಾರ್ಥಿಗಳಿಗೆ 1 ಗಂಟೆ ಸಮಯ ನೀಡಲಾಗುತ್ತದೆ. ಪ್ರಬಂಧವನ್ನು ಶುದ್ಧ ಮತ್ತು ಸರಳ ಕನ್ನಡದಲ್ಲಿ ಬರೆಯಬೇಕು. ಇಂಗ್ಲೀಷ್ ಪದಗಳ ಬಳಕೆ ತಪ್ಪಿಸುವುದು ಒಳಿತು. ಪ್ರಬಂಧವು ಸ್ಪರ್ಧಾರ್ಥಿಯ ಸ್ವಂತ ಆಲೋಚನೆ ಮತ್ತು ಬರಹ ಶೈಲಿಯಲ್ಲಿ ಇರಬೇಕು. ಇಂಟರ್‌ರ್ನೆಟ್ ಅಥವಾ ಪುಸ್ತಕಗಳಿಂದ ನಕಲು ಮಾಡುವುದು ನಿಷೇಧ. ಸರಿಯಾದ ವ್ಯಾಕರಣ ಮತ್ತು ಶುದ್ಧಲಿಪಿ ಪಾಲಿಸಬೇಕು. ಪುಸ್ತಕ ಅಥವಾ ಇತರ ಸಹಾಯ ಸಾಧನಗಳು ಬಳಸುವುದು ನಿಷೇಧ.
ಬಹುಮಾನ ವಿವರ
ಪ್ರಥಮ ರೂ. 3000/-
ದ್ವಿತೀಯ ರೂ. 2000/-
ತೃತೀಯ ರೂ. 1000/-
ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಗುವುದು. ನೋಂದಣಿ ಮಾಡಲು ಕೊನೆಯ ದಿನಾಂಕ: ನವೆಂಬರ್ 6, 2025. ಕಳುಹಿಸಬೇಕಾದ ವಿಳಾಸ : putturramakrishnahighschool@gmail.com. ಸಂಪರ್ಕಿಸಬೇಕಾದ ಸಂಖ್ಯೆ: 8147202324, 9686919491, 08251-231239
