ಪುತ್ತೂರು:ಬೆಂಗಳೂರು ನೆಲಮಂಗಲದಲ್ಲಿ ನಡೆದಿದ್ದ ವಂಚನೆ ಪ್ರಕರಣವೊಂದರದಲ್ಲಿ ತಲೆ ಮರೆಸಿಕೊಂಡಿದ್ದ ವಾರೆಂಟ್ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಲಯವು ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಿದೆ.
ಮುಂಡೂರು ಗ್ರಾಮದ ಕರೆಮನೆ ಭರತ್ ಕುಮಾರ್(57ವ.)ಬಂಧಿತ ಆರೋಪಿ.ಕೆಲ ಸಮಯದ ಹಿಂದೆ ಬೆಂಗಳೂರು ನೆಲಮಂಗಲದಲ್ಲಿ ಪಂಜಾಬ್ ಮೂಲದ ನಿವೃತ್ತ ಸೈನಿಕ ಸತೀಶ್ ಸೋನಿ ಎಂಬವರಿಗೆ ಸೈಟ್ ವ್ಯಾಪಾರ ವಿಚಾರದಲ್ಲಿ ವಂಚನೆ ನಡೆದಿತ್ತು.ಈ ಪ್ರಕರಣಕ್ಕೆ ಸಂಬಂಧಿಸಿ ಅವರು ಬೆಂಗಳೂರು ಗ್ರಾಮಾಂತರ ಮತ್ತು ನಗರ ಒಂದನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ನ್ಯಾಯಾಲಯಕ್ಕೆ ದೂರು ನೀಡಿದ್ದು ಭರತ್ ಕುಮಾರ್ ವಿರುದ್ಧ ವಂಚನೆ ಪ್ರಕರಣ ದಾಖಲಾಗಿತ್ತು.ಇದಾದ ಬಳಿಕ ಎರಡು ಮೂರು ಬಾರಿ ವಾರಂಟ್ ಜಾರಿಯಾಗಿದ್ದರೂ ಆರೋಪಿಯ ಪತ್ತೆಯಾಗಿರಲಿಲ್ಲ.ಸೆ.17ರಂದು ಪೊಲೀಸರು ಆರೋಪಿಯನ್ನು ಬೆಂಗಳೂರುನಲ್ಲಿ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.ನ್ಯಾಯಾಲಯವು ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಿದೆ.
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ನಿರೀಕ್ಷಕ ರವಿ ಬಿ.ಎಸ್ ಮತ್ತು ಉಪ ನಿರೀಕ್ಷಕರಾದ ಜಂಬೂರಾಜ್ ಬಿ.ಮಹಾಜನ್ ಮತ್ತು ಸುಷ್ಮಾ ಜಿ ಭಂಡಾರಿಯವರ ನಿರ್ದೇಶನದಲ್ಲಿ ಠಾಣಾ ಸಿಬ್ಬಂದಿಗಳಾದ ಪ್ರವೀಣ್ ರೈ, ಹರೀಶ್ ಹಾಗೂ ಚೋಳಪ್ಪ ಸಂಶಿರವರು ಈ ಕಾರ್ಯಾಚರಣೆಯಲ್ಲಿ ಸಹಕರಿಸಿದ್ದರು.