ಉಪ್ಪಿನಂಗಡಿ: ವಿಶ್ವಕರ್ಮ ಸಮಾಜಸೇವಾ ಸಂಘ ಉಪ್ಪಿನಂಗಡಿ ಮತ್ತು ಶ್ರೀ ಕಾಳಿಕಾಂಬಾ ಮಹಿಳಾ ಸಂಘ ಉಪ್ಪಿನಂಗಡಿ ಇದರ ಸಹಕಾರದೊಂದಿಗೆ 30ನೇ ವರ್ಷದ ಶ್ರೀ ವಿಶ್ವಕರ್ಮ ಪೂಜೆಯು ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ನೇತ್ರಾವತಿ ಸಭಾ ಭವನದಲ್ಲಿ ಪುರೋಹಿತ್ ವಿ. ಪ್ರಕಾಶ ಆಚಾರ್ಯ ವೇಣೂರು ಅವರ ಆಚಾರ್ಯತ್ವದಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ಹರೀಶ ಆಚಾರ್ಯ ಪುಳಿತ್ತಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಜ್ಯೋತಿ ದಿನೇಶ ಆಚಾರ್ಯ ಅವರು, ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಸಲಹೆಗಳನ್ನು ನೀಡಿದರು. ದಿನೇಶ್ ಆಚಾರ್ಯ ಪುತ್ತೂರು ಮಾತನಾಡಿ, ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಕಾಷ್ಠ ಶಿಲ್ಪಿ ರಾಮಚಂದ್ರ ಆಚಾರ್ಯ ಹಾಗೂ ಡಾಟ್ ಮಂಡಲ ಆರ್ಟ್ ಕಲಾವಿದೆ, ಇಂಡಿಯಾ ಬುಕ್ ಆಫ್ ರೆಕಾರ್ಡ್ ಮತ್ತು ವರ್ಲ್ಡ್ ರೆಕಾರ್ಡ್ ಆಫ್ ಇಂಡಿಯಾ ಹೋಲ್ಡರ್ ಕು. ಸುರಕ್ಷಾ ಆಚಾರ್ಯ ಕನ್ನಾಜೆ ಅವರನ್ನು ಸನ್ಮಾನಿಸಲಾಯಿತು. ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿ ವೇತನ ನೀಡಲಾಯಿತು.
ಅಪರಾಹ್ನದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಸಣ್ಣಮಕ್ಕಳ ನೃತ್ಯ: ಜಾಲ್ಮನೆ ಹಾಗೂ ಲೋಕೇಶ್ ಸರಪಾಡಿಯವರ ಸಾರಥ್ಯದಲ್ಲಿ ಲೋ.ಪ್ರಂ.ಸೋ ಎಂಬ ಸ್ಕಿಟ್, ಪ್ರಜ್ಞಾ ಆಚಾರ್ಯರಿಂದ “ಸ್ವರ ಸಮರ್ಪಣೆ” ಗಾಯನ ಕಾರ್ಯಕ್ರಮ ಹಾಗೂ ಗೀರೀಶ ಇಳಂತಿಲ ಸಾರಥ್ಯದಲ್ಲಿ “ಯಾನ್ ಎನ್ನ ದೇವೆರ್” ಎಂಬ ತುಳು ಸಾಮಾಜಿಕ ನಾಟಕ ಪ್ರದರ್ಶಿಸಲ್ಪಟ್ಟಿತು.
ಕಾರ್ಯಕ್ರಮದಲಿ ಸಮಾಜದ ಮೂಖಂಡರಾದ ರಮೇಶ ಆಚಾರ್ಯ, ಪ್ರಸನ್ನ ನೂಜಿ, ರಾಮಚಂದ್ರ ಮನವಳಿಕೆ, ದಿನಕರ ಆಚಾರ್ಯ ಸುಭಾಷನಗರ, ಕಿಶೋರ್ ಆಚಾರ್ಯ ಸಿದ್ದಾಳ, ಪುಂಡರೀಕ ಆಚಾರ್ಯ, ಹರೀಶ ಆಚಾರ್ಯ ಪಾದೆ, ಎನ್.ಎಲ್. ಸೀತಾರಾಮ ಆಚಾರ್ಯ, ಮಹೇಶ ನೆರೇಂಕ, ಮಾಧವ ಆಚಾರ್ಯ, ಮಹಿಳಾ ಸಂಘದ ಪ್ರಮುಖರಾದ ಸುಜಾತ ಕೃಷ್ಣ ಆಚಾರ್ಯ, ರಮ್ಯ ಅಶೋಕ್ ಆಚಾರ್ಯ, ಸುಪ್ರಿಯಾ ರಮೇಶ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.
ರವಿ ಇಳಂತಿಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಕಾರ್ಯದರ್ಶಿ ಗೀರೀಶ ಇಳಂತಿಲ ಸ್ವಾಗತಿಸಿದರು. ಸೌಮ್ಯ ನೂಜಿ ವಂದಿಸಿದರು.