ಪುತ್ತೂರು: ಕರ್ನಾಟಕ ರಾಜ್ಯ ಸರಕಾರವು ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಸಂಬಂಧಿಸಿ ಶಿಕ್ಷಕರು ಮತ್ತು ಸಿಬ್ಬಂದಿಗಳು ಮನೆಗೆ ಭೇಟಿ ನೀಡಿದಾಗ ಗೌಡ ಸಮಾಜ ಬಾಂಧವರು ಆದಿಚುಂಚನಗಿರಿ ಮಹಾ ಸಂಸ್ಥಾನದ ಜಗದ್ಗುರು ಶ್ರೀ ಡಾ. ನಿರ್ಮಲನಂದನಾಥ ಮಹಾಸ್ವಾಮೀಜಿಯವರ ನಿರ್ದೇಶನ ಮತ್ತು ಮಾರ್ಗದರ್ಶನದಂತೆ, ರಾಜ್ಯ ಒಕ್ಕಲಿಗರ ಸಂಘದ ಸೂಚನೆಯಂತೆ ಜಾತಿ ಕಾಲಂನಲ್ಲಿ ಒಕ್ಕಲಿಗ, ಉಪಜಾತಿ ಕಾಲಂನಲ್ಲಿ ಗೌಡ ಎಂದು ನಮೂದಿಸುವಂತೆ ಪುತ್ತೂರು ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ ತಿಳಿಸಿದ್ದಾರೆ.
22ರಂದು ಸಮೀಕ್ಷೆ ಆರಂಭಗೊಳ್ಳುವುದು. ಮುಂದಿನ 15 ದಿನಗಳ ತನಕ ಸರಕಾರ ನಿಗದಿ ಪಡಿಸಿದ ಶಿಕ್ಷಕರು ಹಾಗೂ ಸಿಬ್ಬಂದಿಗಳು ಮನೆಮನೆಗೆ ಭೇಟಿ ನೀಡುವ ಕಾರ್ಯಕ್ರಮದ ಬಗ್ಗೆ ಈಗಾಗಲೇ ನಿರ್ಧರಿಸಿದ್ದು, ಗೌಡ ಸಮಾಜದವರ ಮನೆಗೆ ಸಮೀಕ್ಷೆಗೆ ಬಂದಾಗ ಅಂದಾಜು ಪ್ರಕಾರ ಸುಮಾರು 55 ವೈಯಕ್ತಿಕ ವಿವರಗಳನ್ನು ನಿಮ್ಮಿಂದ ಪಡೆಯಲಿದ್ದು, ಮುಖ್ಯವಾಗಿ ಸಮಾಜ ಬಾಂಧವರಾದ ತಾವುಗಳು ಜಾತಿಯ ಕಾಲಂನಲ್ಲಿ ಒಕ್ಕಲಿಗ ಎಂದೂ, ಉಪಜಾತಿಯ ಕಾಲಂ ನಲ್ಲಿ ಗೌಡ ಎಂದೂ ಹಾಗೂ ಮಾತೃ ಭಾಷೆಯ ಕಾಲಂ ನಲ್ಲಿ ತುಳು ಭಾಷೆ ಮಾತನಾಡುವವರು ತುಳು ಎಂದೂ, ಅರೆ ಭಾಷೆ ಮಾತಾಡುವವರು ಅರೆ ಭಾಷೆ ಎಂದೂ, ಹಾಗೂ ಕನ್ನಡ ಮಾತನಾಡುವವರು ಕನ್ನಡ ಎಂದು ನಮೂದಿಸಬೇಕೆಂದು ಪುತ್ತೂರು ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ ತಿಳಿಸಿದ್ದಾರೆ.