ಪುತ್ತೂರು:ನವರಾತ್ರಿಯ ಪ್ರಯುಕ್ತ ಗಾನ ಗಂಧರ್ವ ಬಿರುದಾಂಖಿತ ಕಲರ‍್ಸ್ ಕನ್ನಡ ಕ್ಯಾತಿಯ ಜಗದೀಶ್ ಆಚಾರ್ಯ ಪುತ್ತೂರು ಸಂಗೀತ ನಿರ್ದೇಶನ ಮತ್ತು ಗಾಯನದ ಶಾರದಾಮಾತೆಯ ಭಕ್ತಿಗೀತೆ ಎಂಥ ಅಂದ ಎಂಥ ಚಂದ ಶ್ರೀ ಶಾರದಮ್ಮ ಸೆ.20 ರಂದು ಬಿಡುಗಡೆಗೊಳ್ಳಲಿದೆ ನಾಡಿನ ಎಲ್ಲಾ ಭಜನೆ ಮತ್ತು ಕುಣಿತ ಭಜನೆ ತಂಡಗಳಿಗೆ ಅನುಕೂಲವಾಗುವಂತೆ ಹೊಸ ರಾಗ ಸಂಯೋಜನೆಯಲ್ಲಿ ಈ ಭಕ್ತಿ ಗೀತೆ ಮೂಡಿ ಬಂದಿದೆ.

ಇದಕ್ಕೆ ಚಿ. ಉದಯ ಶಂಕರ್‌ರವರ ಸಾಹಿತ್ಯವಿದ್ದು,ಸಂಗೀತ ನಿರ್ದೇಶನ ಮತ್ತು ಗಾಯನ ಜಗದೀಶ್ ಪುತ್ತೂರು ಮಾಡಿದ್ದು ಸಹಗಾಯಕಿಯರಾಗಿ ಜನ್ಯ ಪ್ರಸಾದ್ ಅನಂತಾಡಿ, ಉಜ್ವಲ ಆಚಾರ್ ಮಂಕುಡೆ, ಸಾಹಿತ್ಯ ಆಚಾರ್ಯ ಪುತ್ತೂರು ಭಾಗವಹಿಸಿದ್ದಾರೆ. ಈ ಭಕ್ತಿ ಗೀತೆಯ ವೀಡಿಯೋ ಆಲ್ಬಮ್ ನಿರ್ಮಾಣವನ್ನು ಕೃಷ್ಣರಾಜ್ ಮತ್ತು ಜಯಂತಿ ಕೃಷ್ಣರಾಜ್ ಮತ್ತು ಮಕ್ಕಳು ಮಾಡಿದ್ದು, ವೈಟಿಯಲ್ಲಿ ಶಿಶಿರ್ ರೈ ಚೆಲ್ಯಡ್ಕ ಸಹಕರಿಸಿದ್ದಾರೆ. ವೀಡಿಯೋ ಹಾಗೂ ಸಂಕಲನ ಶ್ರೀ ಟೋಕೀಸ್‌ನವರದ್ದು. ಈ ಭಕ್ತಿ ಗೀತೆ ಜಗದೀಶ್ ಪುತ್ತೂರು ಯೂಟ್ಯುಬ್‌ನಲ್ಲಿ ಹಾಗೂ ಎಲ್ಲ ಪ್ರಮುಖ ಮ್ಯೂಸಿಕ್ ಸ್ಟ್ರೀಮಿಂಗ್ ಪ್ಲಾಟ್ ಫಾರ್ಮ್‌ಗಳಲ್ಲಿ ಸಿಗಲಿದೆ.