ಪುತ್ತೂರು: 34 ನೇ ನೆಕ್ಕಿಲಾಡಿ ಗ್ರಾಮದ ಶಾಂತಿನಗರದಲ್ಲಿ ಮಂಜೂರಾಗಿರುವ ಮಲ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣವನ್ನು ಕೈಬಿಡುವಂತೆ ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಽಕಾರಿ ನವೀನ್ ಭಂಡಾರಿ ಶಾಂತಿನಗರ ನಿವಾಸಿಗಳಿಂದ ಮನವಿ ಸಲ್ಲಿಸಲಾಯಿತು.
ಉಪ್ಪಿನಂಗಡಿ ಶ್ರೀ ರಾಮ ಶಾಲೆಯ ಸಂಚಾಲಕ ಯು. ಜಿ. ರಾಧಾ ರವರು ಘಟಕದಿಂದಾಗುವ ಸಮಸ್ಯೆಯನ್ನು ನಿರ್ವಹಣಾಧಿಕಾರಿಯವರಿಗೆ ಮನವರಿಕೆ ಮಾಡಿ 34 ನೆಕ್ಕಿಲಾಡಿ, ಕೋಡಿಂಬಾಡಿ ಹಾಗೂ ಬೆಳ್ಳಿಪ್ಪಾಡಿ ಗ್ರಾಮಗಳ ತ್ರಿವೇಣಿ ಸಂಗಮ ಸ್ಥಳವಾದ ಶಾಂತಿನಗರ 150 ಮನೆಗಳಿರುವ ಹಾಗೂ ಕೃಷಿ ಪ್ರದೇಶವಾಗಿದ್ದು, 100 ಮೀಟರ್ ಏರ್ ಡಿಸ್ಟೆನ್ಸ್ ನಲ್ಲಿ ಮಹಾವಿಷ್ಣು ದೇವಸ್ಥಾನ, 150 ಮೀಟರ್ ಏರ್ ಡಿಸ್ಟೆನ್ಸ್ ನಲ್ಲಿ ಸರಕಾರಿ ಪ್ರಾಥಮಿಕ ಶಾಲೆ, ಅಂಗನವಾಡಿ ಕೇಂದ್ರ, ನಾಗನ ಕಟ್ಟೆ, ದೈವಗಳ ಗುಡಿಗಳು ಹಾಗೂ ಘಟಕ ರಚನೆಗೆ ನಿರ್ಧರಿಸಲ್ಪಟ್ಟ ಸ್ಥಳದ ಪಕ್ಕದಲ್ಲಿಯೇ ಹಿಂದೂ ರುದ್ರಭೂಮಿ ಇದೆ. ಇದು ಜನವಸತಿ ಪ್ರದೇಶವಾಗಿದ್ದು ಈ ಘಟಕವನ್ನು ಈ ಪ್ರದೇಶದಿಂದ ಕೈ ಬಿಡುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ರೈ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಸುದೇಶ್ ಶೆಟ್ಟಿ ಶಾಂತಿನಗರ, ಕೋಡಿಂಬಾಡಿ ಪಂಚಾಯತ್ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು, ಸದಸ್ಯ ಜಗನ್ನಾಥ ಶೆಟ್ಟಿ ನಡುಮನೆ, ನೆಕ್ಕಿಲಾಡಿ ಪಂಚಾಯತ್ ಅಧ್ಯಕ್ಷೆ ಸುಜಾತಾ ರೈ ಅಲಿಮಾರ, ಉಪಾಧ್ಯಕ್ಷ ಹರೀಶ್ ದರ್ಬೆ, ಸದಸ್ಯ ವಿಜಯಕುಮಾರ್ ನೆಕ್ಕಿಲಾಡಿ, ಶಾಂತಿನಗರ ಮಹಾವಿಷ್ಣು ದೇವಸ್ಥಾನದ ಆಡಳಿತ ಮೊಕ್ತೇಸರ ರಾಜೇಶ್ ಶಾಂತಿನಗರ, ಶಾಂತಿನಗರ ಹಿರಿಯ ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮುನೀರ್ ಶಾಂತಿನಗರ, ಕೋಡಿಂಬಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಽಕಾರಿ ಷರೀಪ್, ಸ್ಥಳೀಯರಾದ ಅಚಲ್ ಉಬರಡ್ಕ, ಭರತ್ ಶಾಂತಿನಗರ ಉಪಸ್ಥಿತರಿದ್ದರು.