ಪುತ್ತೂರು: ಪುತ್ತೂರು ಮತ್ತು ಸುತ್ತಮುತ್ತಲ ಪ್ರದೇಶದ ಜನರಿಗೆ ಶುಭ ಸಂದೇಶ ಸುಸಜ್ಜಿತ ತಂತ್ರಜ್ಞಾನ ಮತ್ತು ಸಂಪೂರ್ಣ ಆರೋಗ್ಯ ಸೇವೆ ಒದಗಿಸುವ 100 ಹಾಸಿಗೆಗಳ ಮೆಡ್‌ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆ, ಪುತ್ತೂರಿನ ಸಂಪ್ಯ ಕಮ್ಮಾಡಿ ಮೈದಾನದ ಬಳಿ ನಿರ್ಮಾಣಗೊಂಡಿದ್ದು, ನಾಳೆಯಿಂದ ಸಾರ್ವಜನಿಕ ಸೇವೆ ಲಭ್ಯವಾಗಲಿದೆ. ಈ ನವೀನ ಆಸ್ಪತ್ರೆ, ಶ್ರೇಷ್ಠತೆ, ಕರುಣೆ ಮತ್ತು ರೋಗಿಯೇ ಮೊದಲು ಎಂಬ ನಿಲುವಿನೊಂದಿಗೆ ಸ್ಥಳೀಯ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಹುಟ್ಟುಹಾಕಲಿದೆ.
ಮೆಡ್‌ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆ ಕರುಣೆ, ಹೊಸತನ ಮತ್ತು ಶ್ರೇಷ್ಠತೆಯ ಅಡಿಪಾಯಗಳ ಮೇಲೆ ಸ್ಥಾಪಿಸಲಾಗಿದೆ. ಸಮಗ್ರ ಆರೋಗ್ಯವನ್ನು ಗಮನದಲ್ಲಿರಿಸಿ ನಿರ್ಮಾಣಗೊಂಡಿದೆ. 100 ಹಾಸಿಗೆಗಳ ಈ ಆಸ್ಪತ್ರೆಯಲ್ಲಿ ಐಸಿಯು,ಸಿಸಿಯು,ಅತೀ ನವೀನ ಮತ್ತು ಶುದ್ಧತೆಯೊಂದಿಗೆ ನಿರ್ಮಾಣಗೊಂಡ ಶಸ್ತ್ರ ಚಿಕಿತ್ಸಾ ಕೊಠಡಿ, ನವಜಾತ ಶಿಶುಗಳಿಗಾಗಿ ಎನ್ ಐ ಸಿಯು ಘಟಕ, ಸುಸಜ್ಜಿತ ಲೇಬರ್ ಥಿಯೇಟರ್ 24ಗಂಟೆಗಳ ತುರ್ತು ವೈದ್ಯಕೀಯ ಸೇವೆ, ಫಾರ್ಮಸಿ, ಲ್ಯಾಬೋರೇಟರಿ, ಫಿಸಿಯೋಥೆರಪಿ ಘಟಕಗಳನ್ನು ಹೊಂದಿದೆ.
ವಿವಿಧ ವೈಶಿಷ್ಟ್ಯಪೂರ್ಣ ವೈದ್ಯಕೀಯ ಕ್ಷೇತ್ರಗಳಲ್ಲಿ ಲಬ್ಯವಿರುವ ನಿಪುಣ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಹಲವು ವಿಭಾಗಗಳ ಸೆಂಟರ್ ಆಫ್ ಎಕ್ಸಲೆನ್ಸ್ ಇಲ್ಲಿದ್ದು, ಸಾಮಾನ್ಯ ವೈದ್ಯಕೀಯ ಸೇವೆ, ಮೂಳೆ ಮತ್ತು ಸಂಯುಕ್ತಾ ಚಿಕಿತ್ಸಾ ವಿಭಾಗ, ಸ್ತ್ರೀರೋಗ ಮತ್ತು ಪ್ರಸೂತಿ ವಿಭಾಗ, ಶಿಶು ವೈದ್ಯಕೀಯ ವಿಭಾಗ,ಐಕೇರ್,ಜನರಲ್ ಸರ್ಜರಿ ವಿಭಾಗಗಳನ್ನು ಅನುಭವ ಸಂಪನ್ನ ವೈದ್ಯರುಗಳು ಮುನ್ನಡೆಸಲಿದ್ದು, ಪರಿಣಿತಿ ಹೊಂದಿದ ಆರೋಗ್ಯ ಸೇವಾ ಸಿಬ್ಬಂಧಿಗಳು ಬೆಂಬಲಿಸಲಿದ್ದಾರೆ. ಇದರಿಂದಾಗಿ ಪ್ರತಿಯೊಬ್ಬ ರೋಗಿಗೂ ಶ್ರೇಷ್ಠ ಆರೈಕೆ ಲಭಿಸಲಿದೆ.
ಯಾವುದೇ ಚಿಕಿತ್ಸೆಯ ಪೂರಕ ಅಂಶವಾಗಿರುವ, ಸರಿಯಾದ ಸಮಯದಲ್ಲಿ ರೋಗ ನಿರ್ಣಯಕ್ಕೆ ಬೇಕಾದ ಸಿಟಿ ಸ್ಕ್ಯಾನ್, ಅಲ್ಟ್ರಾಸೌಂಡ್, ಎಕ್ಸ್ ರೇ, ಎಕೊಕಾರ್ಡಿಯೋಗ್ರಾಫಿ, ಟಿ.ಎಂ.ಟಿ (ಟ್ರೆಡ್‌ಮಿಲ್ ಪರೀಕ್ಷೆ) ಎಲ್ಲವು ದಿನದ ದಿನದ 24 ಗಂಟೆಯೂ ಲಭ್ಯವಿದ್ದು,ಆರೋಗ್ಯದ ಮೌಲ್ಯ ಮಾಪನವನ್ನು ಹೆಚ್ಚಿಸಲಿದೆ.
ಸಂಪ್ಯದ ಸುಂದರ ನೈಸರ್ಗಿಕ ಹಸಿರು ಪರಿಸರದಲ್ಲಿ ನಿರ್ಮಾಣಗೊಂಡ ಮೆಡ್‌ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆ ಪುತ್ತೂರು ನಗರಕ್ಕೆ ಮಾತ್ರವಲ್ಲದೆ ಸುತ್ತ ಮುತ್ತಲಿನ ಗ್ರಾಮ, ತಾಲೂಕು, ಜಿಲ್ಲೆಗಳ ರೋಗಿಗಳ ಪಾಲಿಗೆ ಆಶಾದಾಯಕವಾಗಿದೆ. ಡಯಾಲಿಸಿಸ್, ತುರ್ತು ಚಿಕಿತ್ಸೆ, ವಿಶ್ವಗುಣಮಟ್ಟದ ಸೌಲಭ್ಯ ರೋಗಿ ಸ್ನೇಹಿ ವಾತಾವರಣದಲ್ಲಿ ಆಂಬ್ಯುಲೆನ್ಸ್ ಸೇವೆಯೂ ಇಲ್ಲಿದೆ.
“ನಾವು ಕಾಳಜಿ ವಹಿಸುತ್ತೇವೆ, ನೀವು ಅರ್ಹರು” ಈ ಘೋಷವಾಕ್ಯ ಕೇವಲ ಮಾತಿಗೆ ಸೀಮಿತವಾಗಿರದ ವಾಗ್ದಾನವಾಗಿದೆ. ಮೆಡ್‌ಲ್ಯಾಂಡ್ ಸ್ಷಾಲಿಟಿ ಆಸ್ಪತ್ರೆ ಕೇವಲ ಆರೋಗ್ಯ ಸಂಸ್ಥೆಯಲ್ಲ ರೋಗಿಗಳ ಪಾಲಿಗೆ ನಿಜವಾದ ಆರೈಕೆಯ ಧಾಮವಾಗಿದ್ದು, ನಾಳೆಯಿಂದ ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ.ಪರಿಣಿತ ಆರೋಗ್ಯ ನಿಪುಣರ ಕೈಯಲ್ಲಿರುವ ನಮ್ಮ ನಿಮ್ಮ ಉತ್ತಮ ಆರೋಗ್ಯದ ಭವಿಷ್ಯಕ್ಕೆ ಮೆಡ್‌ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆ ನಾಂದಿ ಹಾಡಲಿ.