ಪುತ್ತೂರು: ಬೊಳುವಾರು ಶಿವಗುರು ಕಾಂಪ್ಲೆಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ತ್ರಿನೇತ್ರದತ್ತ ಸೌಹಾರ್ದ ಸಹಕಾರಿ ಸಂಘ 2024-25ನೇ ಸಾಲಿನಲ್ಲಿ ರೂ.5.69ಲಕ್ಷ ಲಾಭಗಳಿಸಿ ಸದಸ್ಯರಿಗೆ ಶೇ.5 ಡಿವಿಡೆಂಡ್ ವಿತರಿಸಲಾಗುವುದು ಎಂದು ಸಂಘದ ಅಧ್ಯಕ್ಷ ನಿತಿನ್ ಪಕ್ಕಳ ವಾರ್ಷಿಕ ಮಹಾಸಭೆಯಲ್ಲಿ ಘೋಷಣೆ ಮಾಡಿದರು.
ಮಹಾಸಭೆಯು ಸೆ.20ರಂದು ಸಂಘ ಕಚೇರಿಯಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘವು ವರದಿ ವರ್ಷಾಂತ್ಯಕ್ಕೆ 1280 ಸದಸ್ಯರಿಂದ ರೂ.30.60ಲಕ್ಷ ಪಾಲು ಬಂಡವಾಳ, ರೂ.2,62 ಕೋಟಿ ಠೇವಣಿ ಹೊಂದಿದೆ. ಸದಸ್ಯರಿಗೆ ವಿವಿಧ ರೂಪದಲ್ಲಿ ರೂ.1.80ಕೋಟಿ ಸಾಲ ವಿತರಿಸಲಾಗಿದೆ. ಸಾಲ ವಸೂಲಾತಿಯಲ್ಲಿ ಸಂಘವು ಶೇ.100 ಸಾಧನೆ ಮಾಡಿದೆ. ಸಂಘ ಗಳಿಸಿದ ಲಾಭಾಂಶವನ್ನು ನಿಯಮಾವಳಿಯಂತೆ ವಿಂಗಡಿಸಲಾಗಿದೆ ಎಂದು ಹೇಳಿದರು.

ಉಪಾಧ್ಯಕ್ಷ ರಾಜೇಂದ್ರ ಪ್ರಸಾದ್ ಶೆಟ್ಟಿ ಮಾತನಾಡಿ, ನೂತನ ಅಡಳಿತ ಮಂಡಳಿ ಬಂದ ಬಳಿಕ ಸಂಘದ ಬೆಳವಣಿಗೆಗೆ ಶ್ರಮಿಸುತ್ತಿದೆ. ಇತರ ಸಹಕಾರ ಸಂಘಗಳಿಗೆ ತೆರಳಿ ಅಧ್ಯಯನ ಮಾಡುತ್ತಿದೆ. ಹಂತ ಹಂತವಾಗಿ ಸಂಘ ಬೆಳೆಸಲಾಗತ್ತಿದೆ. ಸೇವೆಯ ಮೂಲಕ ಸಂಘಕ್ಕೆ ಲಾಭ ತರುವ ಉದ್ದೇಶವನ್ನು ಸಂಘ ಹೊಂದಿದೆ ಎಂದರು.
ಸಂಘದ ನಿರ್ದೇಶಕರಾದ ಪ್ರಜ್ವಲ್ ಕೆ.ಆರ್., ಎನ್ ಯತೀಶ, ನಿತಿನ್ ಕುಮಾರ್ ಕೆ., ಪ್ರಸಾದ್ ಕೆ.ಎನ್., ಶ್ರೀಪಾದ ಎಸ್., ಪ್ರಸೀದಕೃಷ್ಣ ಕಲ್ಲೂರಾಯ, ಕಿಶೋರ್ ಕುಮಾರ್ ಬಿ.ಆರ್., ಹಿತೈಷಿ ಪಕ್ಕಳ ಹಾಗೂ ಅನುಪಮ ಉಪಸ್ಥಿತರಿದ್ದರು.
ಅಧ್ಯಕ್ಷ ನಿತಿನ್ ಪಕ್ಕಳ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ. ವಿವೇಕ್ ಶೆಣೈ ವರದಿ ಹಾಗೂ ಆಯ-ವ್ಯಯಗಳನ್ನು ಮಂಡಿಸಿದರು. ಉಪಾಧ್ಯಕ್ಷ ಕೆ. ರಾಜೇಂದ್ರ ಪ್ರಸಾದ್ ಶೆಟ್ಟಿ ವಂದಿಸಿದರು. ಸಿಬ್ಬಂದಿ ನವೀನ್‌ಚಂದ್ರ ವಂದಿಸಿದರು.
ಸಂಘದಿಂದ ಡೆಪಾಸಿಟ್ ಅಭಿಯಾನ
ನಮ್ಮ ಸಹಕಾರಿ ಸಂಘ ಪ್ರಾರಂಭಗೊಂಡು 10 ವರ್ಷ ಪೂರೈಸಿದ್ದು ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಸಂಘವು ಉತ್ತಮ ವ್ಯವಹಾರದೊಂದಿಗೆ ಲಾಭ ಪಡೆದು ಸಮಾಜಕ್ಕೆ ಕೊಡುಗೆ ನೀಡುವುದೇ ನಮ್ಮ ಉದ್ದೇಶವಾಗಿದೆ. ಇದರಿಂದ ಸಂಘದ ಪ್ರಯೋಜನ ಎಲ್ಲರಿಗೂ ದೊರೆಯುವಂತಾಗವೇಕು. ಸಂಘದಲ್ಲಿ ನಿರಖು ಠೇವಣಿಗಳಿಗೆ ಗರೀಷ್ಠ ಬಡ್ಡಿ ದರ ನೀಡಲಾಗುತ್ತಿದೆ. ಸಂಘದಿಂದ ಡೆಪಾಸಿಟ್ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದ್ದು ನಿರ್ದೇಶಕರಿಗೆ ನಿರ್ದಿಷ್ಠ ಗುರಿ ನೀಡಲಾಗಿದೆ. ರೂ.50ಲಕ್ಷ ಠೇವಣಿ ಸಂಗ್ರಹಿಸುವ ಗುರಿಯಿದೆ.
-ನಿತಿನ್ ಪಕ್ಕಳ, ಅಧ್ಯಕ್ಷರು, ತ್ರಿನೇತ್ರದತ್ತ ಸೌಹಾರ್ದ ಸಹಕಾರಿ ಸಂಘ