ಪುತ್ತೂರು: ವಿದ್ಯಾ ಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ ಸಂಬಂಧಿತ ವಿದ್ಯಾಭಾರತಿ ಕರ್ನಾಟಕ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆ ಜಿನಗೋಡ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆ ಶಿಂಧೋಲಿ ಬೆಳಗಾವಿಯಲ್ಲಿ ನಡೆಯಿತು.
ಇದರಲ್ಲಿ ಉಪ್ಪಿನಂಗಡಿ ಶ್ರೀರಾಮ ಶಾಲೆಯ 17 ರ ವಯೋಮಾನದ ಬಾಲಕರ ತಂಡ ಭಾಗವಹಿಸಿ ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ.ಈ ತಂಡದಲ್ಲಿ ಪ್ರಣವ ನರಸಿಂಹ ಶರ್ಮಾ ಕೆ,ತುಷಾರ್ ಎಸ್ ದೇವಾಡಿಗ, ಜಶ್ವಿತ್,ಪೂರ್ವಜ್,ಮನ್ವಿತ್ ಕುಮಾರ್ ಭಾಗವಹಿಸಿದ್ದರು. 14ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ವಿ.ಅನನ್ಯ ತೃತೀಯ ಸ್ಥಾನ ಪಡೆದುಕೊಂಡಿರುತ್ತಾಳೆ.