ನಿಡ್ಪಳ್ಳಿ: ನಿಡ್ಪಳ್ಳಿ ಶ್ರೀ ಶಾಂತದುರ್ಗಾ ದೇವಸ್ಥಾನದಲ್ಲಿ ನವರಾತ್ರಿ ಉತ್ಸವವು ಸೆ. 22 ರಂದು ಆರಂಭ ಗೊಂಡು ಅ.2ರ ವರೆಗೆ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು.
ಕಾರ್ಯಕ್ರಮಗಳು:
ಸೆ.22ರಂದು ಪೂರ್ವಾಹ್ನ ಗಂಟೆ 8-00ರಿಂದ ಶ್ರೀ ಮಹಾಗಣಪತಿ ಹವನ, ನಂತರ ಶ್ರೀ ದೇವರಿಗೆ ಪಂಚವಿಂಶತಿ ಕಲಶ ಗಂಟೆ 10 ರಿಂದ ದೀಪ ಪ್ರಜ್ವಲನೆಯೊಂದಿಗೆ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡುವುದು. ದೀಪ ಪ್ರಜ್ವಲನೆ ಶ್ರೀ ಕ್ಷೇತ್ರ ಪಡುಮಲೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ರೈ ಕಟ್ಟಾವು ಇವರು ನೆರವೇರಿಸಲಿರುವರು.

ಬೆಳಿಗ್ಗೆ ಗಂಟೆ 10-30ರಿಂದ: ಭಜನಾ ಕಾರ್ಯಕ್ರಮ-ಮಧ್ಯಾಹ್ನ ಗಂಟೆ 12-30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ,ರಾತ್ರಿ ಗಂಟೆ 7-00ರಿಂದ: ಶ್ರೀ ದೇವರಿಗೆ ಸಾಮೂಹಿಕ ವಿಶೇಷ ರಂಗಪೂಜೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿರುವುದು. ನವರಾತ್ರಿಯ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ನಡೆಯುತ್ತದೆ. ಅಲ್ಲದೆ ಮಧ್ಯಾಹ್ನ ಮತ್ತು ರಾತ್ರಿ ಅನ್ನಸಂತರ್ಪಣೆ ನಡೆಯಲಿರುವುದು.
ಸೆ.27ರಂದು ಬೆಳಿಗ್ಗೆ ಗಂಟೆ 8-00ಕ್ಕೆ ನಿತ್ಯಪೂಜೆ, ಬೆಳಿಗ್ಗೆ ಗಂಟೆ 9-00ರಿಂದ ಪುರುಷರ ಕಬಡ್ಡಿ ಪಂದ್ಯಾಟ, ಪುರುಷರಿಗೆ ಮತ್ತು ಮಹಿಳೆಯರಿಗೆ ಹಗ್ಗಜಗ್ಗಾಟ ಸೇರಿದಂತೆ ಹಿಂದೂ ಬಾಂಧವ ಪುರುಷರಿಗೆ, ಮಹಿಳೆಯರಿಗೆ ಮತ್ತು ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿದೆ.
ಸೆ.28 ಬೆಳಿಗ್ಗೆ ಗಂಟೆ 8-00ಕ್ಕೆ ನಿತ್ಯಪೂಜೆ, ಬೆಳಿಗ್ಗೆ ಗಂಟೆ 9-00 ರಿಂದ ಸಾಮೂಹಿಕ ಚಂಡಿಕಾ ಹೋಮದೊಂದಿಗೆ ಪ್ರಾರಂಭಗೊಂಡು ಬೆಳಿಗ್ಗೆ ಗಂಟೆ 10-00ರಿಂದ ಸ್ಯಾಕ್ಲೋಫೋನ್ ವಾದನ -ಶ್ರೀ ಶಿವರಾಮ ನಿಡ್ಪಳ್ಳಿ ಮತ್ತು ಬಳಗದವರಿಂದ.ಮಧ್ಯಾಹ್ನ ಗಂಟೆ 12-30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ,ಸಂಜೆ ಗಂಟೆ 5-30ರಿಂದ: ಕುಣಿತ ಭಜನೆಯು ನಡೆಯಲಿದೆ.
ಸೆ. 30 ರಂದು ಸಂಜೆ ಗಂಟೆ 6-00ರಿಂದ ಸಾಮೂಹಿಕ ದುರ್ಗಾಪೂಜೆ ನಡೆಯಲಿದೆ. ಅ.1 ರಂದು ಬೆಳಿಗ್ಗೆ ಗಂಟೆ 9-00 ರಿಂದ ವಿಶೇಷ ಆಯುಧಪೂಜೆ ನಡೆಯಲಿದೆ.ಅ. 2 ರಂದು ಬೆಳಿಗ್ಗೆ ಗಂಟೆ 8-00ಕ್ಕೆ ನಿತ್ಯಪೂಜೆ, ಕದಿರು ತುಂಬಿಸುವುದು, ಬೆಳಿಗ್ಗೆ ಗಂಟೆ 10-00ರಿಂದ: ಅಕ್ಷರಾಭ್ಯಾಸ, ಮಧ್ಯಾಹ್ನ ಗಂಟೆ 12-30ಕ್ಕೆ ವಿಜಯ ದಶಮಿಯ ಪ್ರಯುಕ್ತ ಶ್ರೀ ದೇವಿಗೆ ವಿಶೇಷ ಅಲಂಕಾರ ಪೂಜೆ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ನಾಗೇಶ ಗೌಡ ಮತ್ತು ಸದಸ್ಯರು ತಿಳಿಸಿದ್ದಾರೆ.