ಪುತ್ತೂರು: ಜಾಲ್ಸೂರು ಮೂಲದ ಮಹಿಳೆಯೊಬ್ಬರಿಗೆ ಕೋಣಾಜೆ ಪುತ್ರನ ಮನೆಯಲ್ಲಿ ತನಗೆ ಹಲ್ಲೆ ನಡೆದಿದೆ ಎಂದು ಆರೋಪಿಸಿ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಜಾಲ್ಸೂರು ವಿನೋಬನಗರ ಮೂಲದ ಕಲ್ಯಾಣಿ ಎಂಬವರು ಹಲ್ಲೆಗೊಳಗಾದವರು. ಅವರಿಗೆ ಇಬ್ಬರು ಪುತ್ರರಿದ್ದು ಓರ್ವ ಪುತ್ರ ನೀಲಪ್ಪ ಬೆಳ್ಳಾರೆಯಲ್ಲಿ ವಾಸ್ತವ್ಯವಿದ್ದು, ಇನ್ನೋರ್ವ ಕೋಣಾಜೆ ವೈದ್ಯನಾಥೇಶ್ವರ ದೇವಸ್ಥಾನದ ಬಳಿ ವಾಸ್ತವ್ಯ ಹೊಂದಿದ್ದಾರೆ. ಕಲ್ಯಾಣಿ ಅವರು ಜಾಲ್ಸೂರಿನಲ್ಲಿರುವ ಜಾಗವನ್ನು ಮಾರಾಟ ಮಾಡಿದ್ದು ಸದ್ಯ ಕೋಣಾಜೆಯಲ್ಲಿರುವ ಪುತ್ರನ ಮನೆಯಲ್ಲಿದ್ದರು.
ಈ ವೇಳೆ ಪುತ್ರ ನವೀನ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿದ್ದಾರೆ. ಘಟನೆ ಕುರಿತು ಸುಳ್ಯದ ರಚನಾ ಮಹಿಳಾ ಸ್ವ ಅಭಿವೃದ್ದಿ ಅಸಹಾಯಕ ಸೇವಾ ಸಂಘಕ್ಕೆ ದೂರು ನೀಡಿ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಆದರೆ ಕೋಣಾಜೆ ಪೊಲೀಸರು ಆಸ್ಪತ್ರೆಯಲ್ಲಿ ದಾಖಲಾಗಿರುವ ಕಲ್ಯಾಣಿ ಅವರನ್ನು ಠಾಣೆಗೆ ಬಂದು ದೂರು ನೀಡುವಂತೆ ತಿಳಿಸಿದ್ದಾರೆಂದು ತಿಳಿದು ಬಂದಿದೆ.