ಸೆ.23-24: ಪುತ್ತೂರು ತೋಟಗಾರಿಕಾ ಇಲಾಖೆಯಲ್ಲಿ ಜೇನು ಕೃಷಿ ತರಬೇತಿ

0

ಪುತ್ತೂರು: ತೋಟಗಾರಿಕೆ ಇಲಾಖೆಯಿಂದ 2025-26ನೇ ಸಾಲಿನ ಜಿಲ್ಲಾ ವಲಯ ಯೋಜನೆಯ ಜೇನು ಸಾಕಾಣಿಕೆ ಕಾರ್ಯಕ್ರಮದಡಿ ಸೆ.23 ಹಾಗೂ 24ರಂದು 2 ದಿನದ ಜೇನು ಕೃಷಿ ತರಬೇತಿ ಕಾರ್ಯಕ್ರಮವನ್ನು ಮಂಜಲ್ಪಡ್ಪುವಿನಲ್ಲಿರುವ ಪುತ್ತೂರು ತಾಲೂಕು ತೋಟಗಾರಿಕೆ ಕಛೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ.


ಶಾಸಕ ಅಶೋಕ್ ಕುಮಾರ್ ರೈ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಆಸಕ್ತ ರೈತರು ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಿ ತಮ್ಮ ಹೆಸರು ನೊಂದಾಯಿಸಬಹುದು ಅಥವಾ ಕಾರ್ಯಕ್ರಮದಂದು ನೇರವಾಗಿ ಬಂದು ತರಬೇತಿಯಲ್ಲಿ ಭಾಗವಹಿಸಬಹುದು.


ಹೆಚ್ಚಿನ ವಿವರಗಳಿಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿ, ಮಂಜಲಪಡ್ಪು, ಪುತ್ತೂರು 08251-230905 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here