ಪುತ್ತೂರು: ಪುತ್ತೂರು ಪಿಎಲ್ಡಿ ಬ್ಯಾಂಕ್ ವತಿಯಿಂದ ಕರ್ನಾಟಕ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್(ಕಸ್ಕಾರ್ಡ್) ಇದರ ದ.ಕ ಹಾಗೂ ಉಡುಪಿ ಜಿಲ್ಲೆಯ ಜಿಲ್ಲಾ ವ್ಯವಸ್ಥಾಪಕ ದಿಲೀಪ್ ಎಚ್ ಎಚ್ ರವರನ್ನು ಸನ್ಮಾನಿಸುವ ಸಮಾರಂಭ ಸೆ.20ರಂದು ಪುತ್ತೂರು ಸಹಕಾರಿ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು.

ಬ್ಯಾಂಕಿನ ಅಧ್ಯಕ್ಷ ಭಾಸ್ಕರ್ ಎಸ್ ಗೌಡ ಅಧ್ಯಕ್ಷತೆ ವಹಿಸಿದ್ದರು. ಬ್ಯಾಂಕಿನ ಉಪಾಧ್ಯಕ್ಷ ಪ್ರವೀಣ್ ರೈ ಪಂಜೊಟ್ಟು, ಕೋಶಾಧಿಕಾರಿ ಯುವರಾಜ್ ಪೆರಿಯತ್ತೋಡಿ, ನಿರ್ದೇಶಕರುಗಳಾದ ಸುಜಾತ ರಂಜನ್ ರೈ, ಯತೀಂದ್ರ ಕೊಚ್ಚಿ, ಸುಂದರ ಪೂಜಾರಿ ಬಡಾವು, ವಿಕ್ರಮ್ ರೈ ಸಾಂತ್ಯ, ನಾರಾಯಣ ನಾಯ್ಕ, ಚಂದ್ರಾವತಿ ಅಭಿಕಾರ್, ಸ್ವಾತಿ ರೈ, ಕುಶಾಲಪ್ಪ ಗೌಡ ಅನಿಲ, ಬಾಬು ಮುಗೇರ, ಚೆನ್ನಕೇಶವ ಕೆ ಹಾಗೂ ರಾಜುಮೋನ್ ಉಪಸ್ಥಿತರಿದ್ದರು. ಬ್ಯಾಂಕಿನ ಲೆಕ್ಕಾಧಿಕಾರಿ ವಿನಯಕುಮಾರ್ ಸನ್ಮಾನ ಪತ್ರ ವಾಚಿಸಿದರು. ಬ್ಯಾಂಕಿನ ವ್ಯವಸ್ಥಾಪಕಿ ಸುಮನ ಎಂ, ಕಡಬ ಶಾಖಾ ವ್ಯವಸ್ಥಾಪಕ ಎನ್.ವೇಣು ಭಟ್ ಹಾಗೂ ಸಿಬ್ಬಂಧಿಗಳು ಭಾಗವಹಿಸಿದ್ದರು.