ಸೆ.24: ಉಪ್ಪಿನಂಗಡಿಯಲ್ಲಿ ಡಾ.ಅಶ್ವಿನ್ ಕಣ್ಣಿನ ಚಿಕಿತ್ಸಾಲಯ, ಆಪ್ಟಿಕಲ್ಸ್ ಉದ್ಘಾಟನೆ

0

ಉಪ್ಪಿನಂಗಡಿ: ನೇತ್ರ ತಜ್ಞ ಡಾ.ಅಶ್ವಿನ್ ಸಾಗರ್ ಅವರ ಕಣ್ಣಿನ ಪರೀಕ್ಷಾ ಕೇಂದ್ರ ಡಾ.ಅಶ್ವಿನ್ ಕಣ್ಣಿನ ಚಿಕಿತ್ಸಾಲಯ ಮತ್ತು ಆಪ್ಟಿಕಲ್ಸ್ ಉಪ್ಪಿನಂಗಡಿಯ ಸಿಟಿ ಮಾರ್ಕೆಟ್ ಕಾಂಪ್ಲೆಕ್ಸ್‌ನಲ್ಲಿ ಸೆ.24ರಂದು ಬೆಳಗ್ಗೆ 9 ಗಂಟೆಗೆ ಉದ್ಘಾಟನೆಗೊಳ್ಳಲಿದೆ.


ಎಂಎಲ್‌ಸಿ ರೊ|ಪ್ರತಾಪ್ ಸಿಂಹ ನಾಯಕ್ ಅವರು ಚಿಕಿತ್ಸಾಲಯವನ್ನು ಉದ್ಘಾಟಿಸಲಿದ್ದು, ಪುತ್ತೂರು ತಾಲೂಕು ವೈದ್ಯಾಧಿಕಾರಿ ಡಾ.ದೀಪಕ್ ರೈ, ಉಪ್ಪಿನಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಕೃಷ್ಣಾನಂದ, ನೆಲ್ಯಾಡಿ ಅಶ್ವಿನಿ ಆಸ್ಪತ್ರೆಯ ಮಧುಮೇಹ ತಜ್ಞ ಡಾ.ಮುರಳೀಧರ, ಉಪ್ಪಿನಂಗಡಿಯ ಗಿರಿಜಾ ಡೆಂಟಲ್ ಕ್ಲಿನಿಕ್‌ನ ದಂತ ತಜ್ಞ ರೊ| ಡಾ.ರಾಜಾರಾಂ ಹಾಗೂ ಪುತ್ತೂರು ಭೂ ನ್ಯಾಯ ಮಂಡಳಿ ಸದಸ್ಯ ರೊ| ಅಬ್ದುಲ್ ರಹಿಮಾನ್ ಯುನಿಕ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.


ದೃಷ್ಟಿ ಪರೀಕ್ಷೆ, ಕಣ್ಣಿನ ತಜ್ಞರ ಸಲಹೆ, ಕಾಂಟ್ಯಾಕ್ಟ್ ಲೆನ್ಸ್, ಉತ್ತಮ ದರ್ಜೆಯ ಕನ್ನಡಕಗಳು, ಟಾಪ್ ಕೊನ್ ಜಪಾನ್ ಕಂಪ್ಯೂಟರೀಕೃತ ಪರೀಕ್ಷೆ, ಫೋಕೊ ಪೊರೆ ಶಸ್ತ್ರಚಿಕಿತ್ಸೆ ಇಲ್ಲಿ ನೀಡಲಾಗುತ್ತದೆ.

ಉಚಿತ ಆಫರ್
ಶುಭಾರಂಭದ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಆಫರ್ ಘೋಷಿಸಲಾಗಿದೆ. ಒಂದು ಕನ್ನಡಕವನ್ನು ಖರೀದಿಸಿದರೆ ಮತ್ತೊಂದು ಕನ್ನಡಕ ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ ಅಥವಾ ಖರೀದಿ ಮೇಲೆ ಶೇ.30ರಷ್ಟು ಡಿಸ್ಕೌಂಟ್ ಆಫರ್ ಪಡೆಯಬಹುದಾಗಿದೆ ಎಂದು ನಿವೃತ್ತ ನೇತ್ರಾಧಿಕಾರಿ ಎಸ್.ಶಾಂತರಾಜ್ ತಿಳಿಸಿದ್ದಾರೆ.


ಬಿ.ಸಿ.ರೋಡ್‌ನಲ್ಲಿ ಕಳೆದ 40 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಅಶ್ವಿನಿ ಕಣ್ಣಿನ ಚಿಕಿತ್ಸಾಲಯವು ಇತ್ತೀಚೆಗೆ ಪುತ್ತೂರಿನಲ್ಲಿ ನೂತನ ಶಾಖೆಯನ್ನು ಉದ್ಘಾಟಿಸಿತ್ತು.

LEAVE A REPLY

Please enter your comment!
Please enter your name here